Asianet Suvarna News Asianet Suvarna News

'ಮನೆ ಬಾಗಿಲಿಗೆ ಪಡಿತರ'  ಕಿತ್ತಾಡ್ತಿವೆ ದೆಹಲಿ ಮತ್ತು ಕೇಂದ್ರ ಸರ್ಕಾರ

*  ಮುಗಿಯದ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ನಡುವಿನ ತಿಕ್ಕಾಟ
* ಮನೆ ಬಾಗಿಲಿಗೆ ಸೇವೆ ವಿಚಾರದಲ್ಲಿ ಆರೋಪ-ಪ್ರತ್ಯಾರೋಪ
*  ಲಸಿಕೆ  ನೀಡಿಕೆ ಕ್ರಮದಲ್ಲಿಯೂ ಬದಲಾವಣೆಗೆ ಚಿಂತನೆ

India Rounds doorstep delivery of ration Delhi Govt VS Union Govt mah
Author
Bengaluru, First Published Jun 10, 2021, 11:26 PM IST

ಡೆಲ್ಲಿ ಮಂಜು

ನವದೆಹಲಿ(ಜೂ. 10)  `ಇದು ಡೋರ್ ಡಿಲವರಿ ವಿಷಯ..!' ಜನರ ಮನೆಯ ಬಾಗಿಲಿಗೆ ಸೇವೆ ಅರ್ಥಾತ್ ಡೋರ್ ಡಿಲವರಿ ಅನ್ನೋದೇ ದೆಹಲಿಯಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ವಾದ-ಪ್ರತಿವಾದ ನಡೆಯುತ್ತಿದೆ. ರಾಜಕೀಯ ಕೆಸರೆಚಾಟ ನಿಲ್ಲದಂತಾಗಿದೆ. ನಾನು ಸೇವೆ ಕೊಡ್ತಿನಿ ಅಂದರೆ ಸೆಂಟ್ರಲ್ ಅಡ್ಡಗಾಲು ಹಾಕುತ್ತಿದೆ ಅನ್ನೋದು ಫೈನಲ್ ಹೇಳಿಕೆ.

`ಜನರ ಬಳಿಗೆ ಸೇವೆ' ಅನ್ನೋದಕ್ಕೆ ಸರ್ಕಾರಗಳು ನಾನಾ ರೀತಿಯಲ್ಲಿ ಕಸರತ್ತುಗಳು ನಡೆಸುತ್ತವೆ. ಹಲವು ಬಾರಿ ಮನೆಬಾಗಿಲಿಗೆ ಸೇವೆ ಅನ್ನೋ ಸೋಗಿನಲ್ಲಿ ಓಟು ಗಿಟ್ಟಿಸಿಕೊಂಡಿವೆ. ಇನ್ನೂ ಹಲವು ಬಾರಿ ಸೇವೆ ಒದಗಿಸಿಯೂ ಇವೆ. ಈಗ ಇಂಥದ್ದೇ ಒಂದು ಜಂಜಾಟ ಶುರುವಾಗಿದೆ ದೆಹಲಿಯಲ್ಲಿ. `ಮನೆ ಬಾಗಿಲಿಗೆ ಪಡಿತರ' ಅನ್ನೋ ಸ್ಕೀಂ ಉದ್ಘಾಟನೆ ವಿಷಯ ರಾಜಕೀಯಗೊಂಡಿದೆ. ಅರವಿಂದ ಕೇಜ್ರಿವಾಲ್ ಸರ್ಕಾರ ನೇರವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದು, ಕೊರೋನಾ ಹೊತ್ತಲ್ಲಿ ಮನೆಯ ಬಾಗಲಿಗೆ ಸೇವೆ ಒದಗಿಸುತ್ತೇವೆ ಎಂದರೆ ಕೇಂದ್ರ ಸರ್ಕಾರ ಪದೇ ಪದೇ ತಕಾರರು ತೆಗೆಯುತ್ತಿದೆ ಎನ್ನುತ್ತಿದೆ.

ಬಂಗಾಳದಲ್ಲಿ ಮೇಲ್ಮನೆಗೆ ಮತ್ತೆ ಮರುಜೀವ..ಯಾಕಂತೆ!

ಫಿಝಾ ಹೋಂ ಡಿಲವರಿ ಸಿಗುತ್ತೆ..! : ಬಡವರ ಮನೆಯ ಬಾಗಿಲಿಗೆ ಪಡಿತರ ಅನ್ನೋ ಕ್ರಾಂತಿಕಾರಿ ಯೋಜನೆ ನಾವು ಜಾರಿಗೆ ತರಲು ಹೊರಟರೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಅಂಥ ನೇರವಾಗಿ ಕೇಜ್ರಿವಾಲ್ ಸಾಹೇಬರು ಆರೋಪ ಮಾಡಿದ್ದಾರೆ. ಫಿಝಾ ಹೋಂ ಡಿಲವರಿ ಸಿಗುತ್ತಿದ್ದರೇ, ಬಡವರಿಗೆ ಮನೆಬಾಗಿಲಿಗೆ ಪಡಿತರ ಒದಗಿಸಿದ್ರೆ ಕೇಂದ್ರ ಸರ್ಕಾರಕ್ಕೆ ಏನು ಕಷ್ಟ ಅಂಥ ಖಾರವಾಗಿ ಪ್ರಶ್ನಿಸಿದ್ದಾರೆ. ಅನುಮತಿಗಾಗಿ ಕೇಂದ್ರದ ಮುಂದೆ ಐದು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೈಕೋರ್ಟ್ನಲ್ಲಿ ಕೇಸ್ ಇದೆ ಅಂಥ ಹೇಳಿ ಕೇಂದ್ರ ನಮ್ಮನ್ನು ದಾರಿತಪ್ಪಿಸುತ್ತಿದೆ. ಮಾಫಿಯಾ ಮುಕ್ತವಾಗಿಸುವ ಪಡಿತರ ಸುಧಾರಣೆಗೆ ನಮ್ಮ ಪ್ರಯತ್ನಕ್ಕೆ ಅಡ್ಡಗಾಲು ಹಾಕಲಾಗುತ್ತಿದೆ. ಲಕ್ಷಾಂತರ ಮಂದಿ ದೆಹಲಿಯ ಬಡವರಿಗೆ ಇದರಿಂದ ಸಹಾಯಕವಾಗಲಿದೆ ಅಂಥಾರೆ ಕೇಜ್ರಿವಾಲ್ ಸಾಹೇಬರು.

`ಓಟ್ ಹಾಕಿದೆಡೆ ಲಸಿಕೆ ಹಾಕಿಸಿಕೊಳ್ಳಿ' : ಇದು ಇನ್ನೋಂದು ಡೋರ್ ಸ್ಟೆಪ್ಸ್ ಸರ್ವೀಸ್ ವಿಷಯ. ಕೊರೊನಾ ಅನ್ನೋ ಕಾರಣಕ್ಕೆ ಈ ವಿಚಾರ ವಿವಾದವಾಗಿಲ್ಲವಾದ್ರೂ `ಡೋರ್ ಸ್ಟೆಪ್ಸ್ ಸರ್ವೀಸ್' ಕೇಜ್ರಿವಾಲ್ ಸರ್ಕಾರ ನೀಡುತ್ತಿದೆ. ಲಸಿಕೆ ಎಲ್ಲರಿಗೂ ಹಾಕಬೇಕು ಅನ್ನೋ ಕಾರಣಕ್ಕೆ ಹೊಸ ಅಭಿಯಾನ ಪ್ರಾರಂಭಿಸಿರುವ ಡೆಲ್ಲಿ ಸರ್ಕಾರ, `ಓಟ್ ಹಾಕಿದ ಕಡೆ ಲಸಿಕೆ ಹಾಕಿಸಿಕೊಳ್ಳಿ' ಅಂಥ ಹೇಳುತ್ತಿದೆ. ಲಸಿಕೆಯ ಮೊದಲ ಆದ್ಯತೆ 45 ವರ್ಷ ಮೇಲ್ಪಟ್ಟವರಿಗೆ. ತಮ್ಮ ಸಮೀಪ ಇರುವ ಮತದಾನ ಕೇಂದ್ರಕ್ಕೆ ಹೋದರೆ ಸಾಕು ಅಲ್ಲಿ ಲಸಿಕೆ ಸಿಗುತ್ತೆ. ಬ್ಲಾಕ್ ಮಟ್ಟದ ಅಧಿಕಾರಿಗಳು ವಾರ್ಡ್ ಗಳಿಗೆ ಭೇಟಿ ಕೊಟ್ಟು ಮಾಹಿತಿ ಪಡೆದು ಲಸಿಕೆ ಹಾಕಿಸಿಕೊಳ್ಳಲು ಪ್ರೋತ್ಸಾಹಿಸುವ ಜೊತೆಗೆ ಎಲ್ಲಿ ಲಭ್ಯವಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡುತ್ತಾರೆ. ಲಸಿಕೆ ಪಡೆಯಲು ಬರುವವರಿಗೆ ಇ-ರಿಕ್ಷಾ ಸೇವೆ ಕೂಡ ಒದಗಿಸಲಾಗುತ್ತೆ. ಮುಂದೆ 18 ವರ್ಷ ಮೇಲ್ಪಟ್ಟವರಿಗೂ ಈ ಸೌಲಭ್ಯ ಸಿಗಲಿದೆ ಅನ್ನೋದು ಕೇಜ್ರಿವಾಲ್ ಸಾಹೇಬರ ಮಾತು.

Follow Us:
Download App:
  • android
  • ios