Asianet Suvarna News Asianet Suvarna News

E-Passport: ಶೀಘ್ರದಲ್ಲಿಯೇ ಭಾರತದಲ್ಲಿ ಬರಲಿದೆ ಇ-ಪಾಸ್ ಪೋರ್ಟ್, ಏನಿದರ ವಿಶೇಷ?

ನೆಕ್ಸ್ಟ್ ಜನರೇಷನ್ ಇ-ಪಾಸ್ ಪೋರ್ಟ್ ಶೀಘ್ರದಲ್ಲೇ ಬಿಡುಗಡೆ
ನಕಲಿ ಪಾಸ್ ಪೋರ್ಟ್ ತಡೆಗೆ ದೊಡ್ಡ ಕ್ರಮ
ಇ-ಪಾಸ್ ಪೋರ್ಟ್ ನಲ್ಲಿರಲಿದೆ ಚಿಪ್
 

India ready for e Passport with a microchip Know all about it san
Author
Bengaluru, First Published Jan 7, 2022, 3:44 PM IST

ನವದೆಹಲಿ (ಜ.7): ಹಲವಾರು ಅಡ್ಡಿಗಳ ಬಳಿಕ ಭಾರತದಲ್ಲಿ ಕೊನೆಗೂ ಚಿಪ್ ಒಳಗೊಂಡಿರುವ ನೆಕ್ಸ್ ಜನರೇಷನ್ ಇ-ಪಾಸ್ ಪೋರ್ಟ್ ಗಳು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ(Ministry of External Affairs Secretary) ಸಂಜಯ್ ಭಟ್ಟಾಚಾರ್ಯ (Sanjay Bhattacharya) ಘೋಷಣೆ ಮಾಡದ್ದಾರೆ. ಇದು ಪ್ರಪಂಚದಾದ್ಯಂತ ಎಲ್ಲಾ ಪ್ರಯಾಣಿಕರಿಗೆ ಅಂತಾರಾಷ್ಟ್ರೀಯ ಪ್ರಯಾಣದ ಹಾದಿಯನ್ನು ಸುಗಮವಾಗಿಸುತ್ತದೆ ಎಂದು ಎಂಇಎ ತಿಳಿಸಿದೆ. ಇ-ಪಾಸ್ ಪೋರ್ಟ್ ಗಳಲ್ಲಿರುವ (e-passport) ಚಿಪ್ ಗಳಲ್ಲಿ (Chip) ವ್ಯಕ್ತಿಯ ಬಯೋಮೆಟ್ರಿಕ್ ಡೇಟಾ ಇರಲಿದ್ದು, ಇದು ವಿಮಾನನಿಲ್ದಾಣಗಳಲ್ಲಿ ಪ್ರಯಾಣ ಇನ್ನಷ್ಟು ಸುಲಭವಾಗಲಿದೆ.

ಇದನ್ನು ಎಂಇಎ ಕಾರ್ಯದರ್ಶಿ ಸಂಜಯ್ ಭಟ್ಟಾಚಾರ್ಯ ಅವರು ಟ್ವಿಟರ್ ಮೂಲಕ ಇದನ್ನು ಘೋಷಣೆ ಮಾಡಿದ್ದಾರೆ. ಹೊಸ ಇ-ಪಾಸ್‌ಪೋರ್ಟ್‌ಗಳು ಪ್ರಯಾಣಿಕರಿಗೆ ಬಯೋಮೆಟ್ರಿಕ್ ಡೇಟಾವನ್ನು (biometric data) ಭದ್ರಪಡಿಸುವುದು ಮತ್ತು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಮಾನದಂಡಗಳಿಗೆ ಅನುಗುಣವಾಗಿರುವಂತಹ ವಿವಿಧ ಹೊಸ ವೈಶಿಷ್ಟ್ಯಗಳನ್ನು ನೀಡುತ್ತವೆ . ಈ ಪಾಸ್‌ಪೋರ್ಟ್‌ಗಳನ್ನು ನಾಸಿಕ್‌ನ ಇಂಡಿಯಾ ಸೆಕ್ಯುರಿಟಿ ಪ್ರೆಸ್‌ನಲ್ಲಿ ಉತ್ಪಾದಿಸಲಾಗುತ್ತದೆ. ಹೊಸ ಇ-ಪಾಸ್‌ಪೋರ್ಟ್‌ಗಳು ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ವರದಿಗಳ ಪ್ರಕಾರ, ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ಮೂಲಕ ಅನಧಿಕೃತ ಡೇಟಾ ವರ್ಗಾವಣೆಯನ್ನು ಅನುಮತಿಸುವುದಿಲ್ಲ. ಎಂಇಎ ಪ್ರಕಾರ, ಇದು ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಪ್ರಯಾಣವನ್ನು ಸುಗಮಗೊಳಿಸುತ್ತದೆ ಮತ್ತು ಹೆಚ್ಚು ಸುರಕ್ಷಿತಗೊಳಿಸುತ್ತದೆ.

"ಭಾರತವು ಶೀಘ್ರದಲ್ಲೇ ನಾಗರಿಕರಿಗೆ ನೆಕ್ಸ್ಟ್‌ ಜನರೇಷನ್  ಇ-ಪಾಸ್‌ಪೋರ್ಟ್ ಅನ್ನು ಪರಿಚಯಿಸಲಿದೆ. ಸುರಕ್ಷಿತ ಬಯೋಮೆಟ್ರಿಕ್ ಡೇಟಾ. ಜಾಗತಿಕವಾಗಿ ಪ್ರಯಾಣಿಕರ ಪೋಸ್ಟ್‌ಗಳ ಮೂಲಕ ಸುಗಮ ಮಾರ್ಗ. ICAO ಕಂಪ್ಲೈಂಟ್ ಇದಾಗಿರಲಿದ್ದು. ನಾಸಿಕ್‌ನ ಇಂಡಿಯಾ ಸೆಕ್ಯುರಿಟಿ ಪ್ರೆಸ್‌ನಲ್ಲಿ ಮುದ್ರಿಸಲಾಗುತ್ತದೆ' ಎಂದು ಸಂಜೀವ್ ಭಟ್ಟಾಚಾರ್ಯ ಟ್ವೀಟ್ ಮಾಡಿದ್ದಾರೆ.
ಈಗಾಗಲೇ ಇದರ ಪ್ರಾಯೋಗಿಕ ಪರೀಕ್ಷೆಯನ್ನು ಸರ್ಕಾರ ಮಾಡಿದ್ದು, 20,000 ಅಧಿಕೃತ ಮತ್ತು ರಾಜತಾಂತ್ರಿಕ ಇ-ಪಾಸ್‌ಪೋರ್ಟ್‌ಗಳಲ್ಲಿ ಎಲೆಕ್ಟ್ರಾನಿಕ್ ಮೈಕ್ರೊಪ್ರೊಸೆಸರ್ ಚಿಪ್ ಅನ್ನು ಅಳವಡಿಸಿದೆ.  ಪ್ರಯೋಗಗಳು ಯಶಸ್ವಿಯಾದರೆ, ಕೇಂದ್ರವು ಎಲ್ಲಾ ನಾಗರಿಕರಿಗೆ ಇ-ಪಾಸ್‌ಪೋರ್ಟ್‌ಗಳನ್ನು ವಿತರಿಸಲು ಪ್ರಾರಂಭಿಸುತ್ತದೆ.ಪ್ರಸ್ತುತ, ಭಾರತೀಯ ನಾಗರಿಕರಿಗೆ ನೀಡಲಾದ ಪಾಸ್‌ಪೋರ್ಟ್‌ಗಳನ್ನು ಚಿಕ್ಕ ಪುಸ್ತಕದ ಮಾದರಿಯಲ್ಲಿ ಮುದ್ರಿಸಲಾಗುತ್ತದೆ. ಆದರೆ, ಹೊಸ ಪಾಸ್ ಪೋರ್ಟ್ ಗಳು ಇಂಟರ್‌ನ್ಯಾಶನಲ್ ಸಿವಿಲ್ ಏವಿಯೇಷನ್ ​​ಆರ್ಗನೈಸೇಶನ್ (ICMO) ಮಾನದಂಡಗಳನ್ನು ಅನುಸರಿಸುತ್ತದೆ ಎಂದು ಹೇಳಿದೆ.
 


ಇ-ಪಾಸ್ ಪೋರ್ಟ್ ನಲ್ಲಿ ಏನೆಲ್ಲಾ ಇರಲಿದೆ: ಎಲ್ಲಾ ಅಂದುಕೊಂಡಿದ್ದ ರೀತಿಯೇ ಆಗಿದ್ದರೆ, 2016ರಲ್ಲಿಯೇ ಈ ಇ-ಪಾಸ್ ಪೋರ್ಟ್ ಭಾರತಕ್ಕೆ ಬರಬೇಕಾಗಿತ್ತು. ಬಯೋಮೆಟ್ರಿಕ್ ಪಾಸ್ ಪೋರ್ಟ್ ಅಥವಾ ಡಿಜಿಟಲ್ ಪಾಸ್ ಪೋರ್ಟ್ ಎಂದೂ ಇದನ್ನು ಕರೆಯುತ್ತಾರೆ.  ಇದು ಸಾಮಾನ್ಯವಾಗಿ ಬಳಕೆಯಾಗುವ ಪಾಸ್ ಪೋರ್ಟ್ ನಂತೇ ಇರಲಿದ್ದರೂ, ಅದರ ಜೊತೆಯಲ್ಲಿ ಎಲೆಕ್ಟ್ರಾನಿಕ್ ಚಿಪ್ ಇರಲಿದೆ.  ಈ ಚಿಪ್ ನಲ್ಲಿ ಪಾಸ್ ಪೋರ್ಟ್ ನ 2ನೇ ಪುಟದಲ್ಲಿರುವ ಬಹಳ ಪ್ರಮುಖವಾದ ವಿವರಗಳಾದ ಹೆಸರು, ಹುಟ್ಟಿದ ದಿನಾಂಕ ಹಾಗೂ ಲಿಂಗದ ಮಾಹಿತಿ ಇರುತ್ತದೆ. ಡಿಜಿಟಲ್ ಫೋಟೋ, ಸಹಿ ಹಾಗೂ ಬೆರಳಚ್ಚು ಮಾದರಿಗಳನ್ನು ಒಳಗೊಂಡ ಮಾಹಿತಿ ಇದರಲ್ಲಿರುತ್ತದೆ.

ಅಮೇಜಾನ್‌ನಲ್ಲಿ ಕವರ್ ಆರ್ಡರ್‌ ಮಾಡಿದ್ರೆ ಜೊತೆಗೆ ಸಿಕ್ತು ಪಾಸ್‌ಪೋರ್ಟ್
ಇದರ ಲಾಭವೇನು: ಪ್ರಮುಖವಾಗಿ ನಕಲಿ ಪಾಸ್ ಪೋರ್ಟ್ ಗಳ ಹಾವಳಿಯನ್ನು ಇದರಿಂದ ತಡೆಗಟ್ಟಬಹುದಾಗಿದೆ. ಪಾಸ್ ಪೋರ್ಟ್ ನ ದುರ್ಬಳಕೆಯನ್ನು ತಡೆಗಟ್ಟಬಹುದು. ಒಮ್ಮೆ ಚಿಪ್ ಗೆ ದಾಖಲಾದ ಮಾಹಿತಿಯನ್ನು ಅಳಿಸಲು ಸಾಧ್ಯವಾಗುವುದಿಲ್ಲ ಹಾಗೂ ವ್ಯಕ್ತಿಯ ಗಮನಕ್ಕೆ ಬರದೆ ಇನ್ನೊಬ್ಬರು ಇದನ್ನು ಓದಲು ಸಾಧ್ಯವಾಗುವುದಿಲ್ಲ. ಪಾಸ್ ಪೋರ್ಟ್ ಪುಟದಲ್ಲಿನ ದಾಖಲೆಯನ್ನೇ ಇ-ಪಾಸ್ ಪೋರ್ಟ್ ನಲ್ಲಿ ಹಾಕಲಾಗಿರುತ್ತದೆ.

Follow Us:
Download App:
  • android
  • ios