Asianet Suvarna News

ಕೊರೋನಾ ಅಟ್ಟಹಾಸದ ನಡುವೆ ದೇಶಕ್ಕೆ ನೆಮ್ಮದಿಯ ಸುದ್ದಿ ಕೊಟ್ಟ ತಜ್ಞರು!

ಕೊರೋನಾ ಭೀತಿ ನಡುವೆ ದೇಶಕ್ಕೆ ಸಮಾಧಾನ ತಂದುಕೊಟ್ಟ ತಜ್ಞರ ವರದಿ| ದೇಶದಲ್ಲಿ ಕೊರೋನಾ ಸಾವು 8000 ಗಡಿ ದಾಟಲ್ಲ| ಜೂನ್‌ ಆರಂಭದಲ್ಲಿ ವೈರಸ್‌ ಗರಿಷ್ಠ ಮಟ್ಟಕ್ಕೆ| ಲಾಕ್‌ಡೌನ್‌ ಇಲ್ಲದಿದ್ದರೆ 1 ಲಕ್ಷ ಜನ ಸಾಯುತ್ತಿದ್ದರು| ಸಾರ್ವಜನಿಕ ಆರೋಗ್ಯ ತಜ್ಞ ಜಿ.ವಿ.ಎಸ್‌. ಮೂರ್ತಿ

India may keep Coronavirus deaths less than 8000 says public health expert
Author
Bangalore, First Published May 27, 2020, 9:58 AM IST
  • Facebook
  • Twitter
  • Whatsapp

ಬೆಂಗಳೂರು(ಮೇ.27): ದೇಶದಲ್ಲಿ ದಿನೇ ದಿನೇ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಒಟ್ಟು ಸಾವಿನ ಸಂಖ್ಯೆ 7500ರಿಂದ 8000 ಗಡಿ ದಾಟುವ ಸಾಧ್ಯತೆ ಇಲ್ಲ ಎಂದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಪರಿಣತರೊಬ್ಬರು ಭವಿಷ್ಯ ನುಡಿದಿದ್ದಾರೆ.

ದೇಶದಲ್ಲಿ ಕೊರೋನಾ ವೈರಸ್‌ ಜೂನ್‌ ಆರಂಭದಿಂದ ಜುಲೈ ಮಧ್ಯಭಾಗದವರೆಗೆ ಗರಿಷ್ಠ ಮಟ್ಟಕ್ಕೆ ಹೋಗಬಹುದು. ಕೇರಳ, ಪಂಜಾಬ್‌ ಹಾಗೂ ಹರಾರ‍ಯಣಗಳು ಈಗಾಗಲೇ ಆ ಗಡಿಯನ್ನು ದಾಟಿರುವಂತೆ ಕಾಣುತ್ತಿದೆ. ಒಂದು ವೇಳೆ ದೇಶದಲ್ಲಿ ಲಾಕ್‌ಡೌನ್‌ ಘೋಷಣೆ ಮಾಡದಿದ್ದರೆ 80ರಿಂದ 1 ಲಕ್ಷ ಮಂದಿ ಸಾವಿಗೀಡಾಗುವ ಅಪಾಯವಿತ್ತು ಎಂದು ಹೈದರಾಬಾದ್‌ನಲ್ಲಿರುವ ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ ನಿರ್ದೇಶಕ ಪ್ರೊ. ಜಿ.ವಿ.ಎಸ್‌. ಮೂರ್ತಿ ಅವರು ಹೇಳಿದ್ದಾರೆ.

ದೇಶದ ಆರ್ಥಿಕತೆಗೆ ಕೊರೋನಾಘಾತ : 30 ಲಕ್ಷ ಕೋಟಿ ನಷ್ಟ!

ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ 10ನೇ ಸ್ಥಾನ ಪಡೆದಿದೆ ಎಂಬ ಅಂಕಿ-ಅಂಶ ದಾರಿ ತಪ್ಪಿಸುವಂತಹದ್ದು. ಏಕೆಂದರೆ ದೇಶದ ಜನಸಂಖ್ಯೆ ಬಹುತೇಕ ಯುರೋಪ್‌ ದೇಶಗಳನ್ನು ಒಗ್ಗೂಡಿಸಿದರೆ ಎಷ್ಟುಜನಸಂಖ್ಯೆಯಾಗುತ್ತದೋ ಅದಕ್ಕಿಂತ ಅಧಿಕವಿದೆ. ಹೀಗಾಗಿ ಪ್ರತಿ 10 ಲಕ್ಷ ಜನಸಂಖ್ಯೆಗೆ ಎಷ್ಟುಸೋಂಕಿತರಿದ್ದಾರೆ ಎಂಬುದನ್ನು ಪರಿಗಣಿಸಿ ಹೋಲಿಕೆ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.

ಸೋಂಕು, ಸಾವು ಎಲ್ಲಿ ಎಷ್ಟು? (ಪ್ರತಿ 10 ಲಕ್ಷ ಜನರಲ್ಲಿ)

ದೇಶ| ಸೋಂಕು | ಸಾವು

ಸ್ಪೇನ್|‌ 6050| 615

ಅಮೆರಿಕ| 5098| 300

ಬ್ರಿಟನ್|‌ 3825| 542

ಇಟಲಿ| 3801| 542

ಭಾರತ| 101| 3

Follow Us:
Download App:
  • android
  • ios