Gautami Patil Vehicle Accident ಪ್ರಸಿದ್ಧ ಡಾನ್ಸರ್ ಗೌತಮಿ ಪಾಟೀಲ್ ಅವರ ಕಾರು ಪುಣೆಯ ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ರಿಕ್ಷಾಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ರಿಕ್ಷಾ ಚಾಲಕ ಗಾಯಗೊಂಡಿದ್ದು, ಅಪಘಾತದ ಸಮಯದಲ್ಲಿ ಗೌತಮಿ ಕಾರಿನಲ್ಲಿ ಇರಲಿಲ್ಲ.
- Home
- News
- India News
- India Latest News Live: ಪ್ರಖ್ಯಾತ ಡಾನ್ಸರ್ ಇದ್ದ ಕಾರ್ ರಿಕ್ಷಾಗೆ ಢಿಕ್ಕಿ; ಅಪಾಯದಿಂದ ಪಾರಾದ ಸೋಶಿಯಲ್ ಮೀಡಿಯಾ ಸ್ಟಾರ್!
India Latest News Live: ಪ್ರಖ್ಯಾತ ಡಾನ್ಸರ್ ಇದ್ದ ಕಾರ್ ರಿಕ್ಷಾಗೆ ಢಿಕ್ಕಿ; ಅಪಾಯದಿಂದ ಪಾರಾದ ಸೋಶಿಯಲ್ ಮೀಡಿಯಾ ಸ್ಟಾರ್!

ಚೆನ್ನೈ: ಟಿವಿಕೆ ಪಕ್ಷದ ಪ್ರಚಾರ ಸಭೆಗೆ ನಟ ವಿಜಯ್ ಅವರು ಉದ್ದೇಶಪೂರ್ವಕವಾಗಿ ವಿಳಂಬವಾಗಿ ಆಗಮಿಸಿದ್ದು, ಸ್ಥಳಕ್ಕೆ ಬಂದ ನಂತರವೂ ವಾಹನದೊಳಗೇ ಕೆಲ ಹೊತ್ತು ಉಳಿದಿದ್ದು ಕಾಲ್ತುಳಿತಕ್ಕೆ ಕಾರಣ ಎಂದು ಕರೂರು ಪೊಲೀಸರ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. 41 ಮಂದಿ ಸಾವಿನ ಕುರಿತ ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ಈ ಅಂಶ ಪ್ರಸ್ತಾಪಿಸಲಾಗಿದೆ. ಎಫ್ಐಆರ್ನಲ್ಲಿ ವಿಜಯ್ ಹೆಸರು ದಾಖಲಿಸಿಲ್ಲ. ಬದಲಾಗಿ ಟಿವಿಕೆ ಪಕ್ಷದ ಮೂವರು ಜಿಲ್ಲಾ ಮುಖಂಡರ ಹೆಸರು ಉಲ್ಲೇಖಿಸಲಾಗಿದೆ.
India Latest News Live 30 September 2025ಪ್ರಖ್ಯಾತ ಡಾನ್ಸರ್ ಇದ್ದ ಕಾರ್ ರಿಕ್ಷಾಗೆ ಢಿಕ್ಕಿ; ಅಪಾಯದಿಂದ ಪಾರಾದ ಸೋಶಿಯಲ್ ಮೀಡಿಯಾ ಸ್ಟಾರ್!
India Latest News Live 30 September 2025ಕೋವಿಡ್ ಟೈಮ್‌ನಲ್ಲಿ ಲಸಿಕೆ ಉತ್ಪಾದನೆ ಮಾಡಿ ಜನರ ಜೀವ ಉಳಿಸಿದ್ದ ವ್ಯಕ್ತಿ ಆರ್‌ಸಿಬಿಗೆ ಹೊಸ ಬಾಸ್?
Adar Poonawalla RCB sale ಕೋವಿಶೀಲ್ಡ್ ಲಸಿಕೆ ಖ್ಯಾತಿಯ ಸೀರಮ್ ಇನ್ಸ್‌ಟಿಟ್ಯೂಟ್ ಸಿಇಒ ಆದರ್ ಪೂನಾವಾಲಾ, ಐಪಿಎಲ್‌ನ ಆರ್‌ಸಿಬಿ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದ್ದಾರೆ ಎಂದು ವರದಿಯಾಗಿದೆ. ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿಯವರ ಪೋಸ್ಟ್ ಈ ಊಹಾಪೋಹ ನೀಡಿದೆ.
India Latest News Live 30 September 2025ಕಾಲ್ತುಳಿತ ದುರಂತ ಮಾಸುವ ಮುನ್ನವೇ ತಮಿಳುನಾಡಲ್ಲಿ ಮತ್ತೊಂದು ದುರಂತ, ಕಮಾನು ಕುಸಿದು 9 ಸಾವು!
North Chennai Power Plant Arch Collapse Kills 9 Workers ಎನ್ನೋರ್‌ನ ಉತ್ತರ ಚೆನ್ನೈ ಉಷ್ಣ ವಿದ್ಯುತ್ ಸ್ಥಾವರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಮಾನು ಕುಸಿದು ಒಂಬತ್ತು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಭೀಕರ ಅಪಘಾತದಲ್ಲಿ ಐದು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
India Latest News Live 30 September 2025ದಸರಾ, ದೀಪಾವಳಿಗೆ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ - 30 ದಿನಗಳ ಸಂಬಳ ಬೋನಸ್ ಘೋಷಣೆ!
Central Govt Announces 30 Days Ad hoc Bonus ಮೋದಿ ಸರ್ಕಾರವು 2024-25ನೇ ಸಾಲಿಗೆ ಕೇಂದ್ರದ ಗ್ರೂಪ್ ಸಿ ಮತ್ತು ನಾನ್-ಗೆಜೆಟೆಡ್ ಗ್ರೂಪ್ ಬಿ ನೌಕರರಿಗೆ ಉತ್ಪಾದಕತೆ ಆಧಾರಿತವಲ್ಲದ ಬೋನಸ್ ಘೋಷಿಸಿದೆ. ಈ ಅಡ್-ಹಾಕ್ ಬೋನಸ್ 30 ದಿನಗಳ ಸಂಬಳಕ್ಕೆ ಸಮಾನವಾಗಿದೆ.
India Latest News Live 30 September 2025ಸಲಿಂಗಿ ಮೇಕಪ್ ಆರ್ಟಿಸ್ಟ್ ಮಾತಿಗೆ ಶಾಕ್ ಆದ ಐಶ್ವರ್ಯಾ ರೈ - ಆಫ್ ಸ್ಕ್ರೀನ್ ವೀಡಿಯೋ ಭಾರಿ ವೈರಲ್
Aishwarya Rai fan love story: ಪ್ಯಾರೀಸ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿರುವ ನಟಿ ಐಶ್ವರ್ಯಾ ರೈ ವೀಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಮೇಕಪ್ ಆರ್ಟಿಸ್ಟ್ ಆದಿತ್ಯ ಮದಿರಾಜು, ತಮ್ಮ ಹಾಗೂ ತಮ್ಮ ಪತಿಯ ಪ್ರೇಮಕಥೆಗೆ ಐಶ್ವರ್ಯಾ ರೈ ಹೇಗೆ ಕಾರಣರಾದರು ಎಂಬ ವೈಯಕ್ತಿಕ ವಿಚಾರವನ್ನು ಹಂಚಿಕೊಂಡಿದ್ದಾರೆ
India Latest News Live 30 September 2025ಯಾರ ಸರ್ಕಾರ ಗೊತ್ತಾ? ಐ ಲವ್ ಮೊಹಮ್ಮದ್ ಪ್ರತಿಭಟನೆಯ ಮೌಲ್ವಿ ವಿರುದ್ಧ ನುಗ್ಗಿದ ಯೋಗಿ ಬುಲ್ಡೋಜರ್
ಯಾರ ಸರ್ಕಾರ ಗೊತ್ತಾ? ಯೋಗಿ ವಾರ್ನಿಂಗ್ ಬೆನ್ನಲ್ಲೇ ಮೌಲನಾ ವಿರುದ್ಧ ಬುಲ್ಡೋಜರ್ ಘರ್ಜನೆಯಾಗಿದೆ. ಐ ಲವ್ ಮೊಹಮ್ಮದ್ ಪ್ರತಿಭಟನೆಗೆ ಪ್ರಚೋದನೆ, ಬೆಂಬಲ ನೀಡಿದ ಆರೋಪ ಎದುರಿಸುತ್ತಿರುವ ಮೌಲನಾ ಮೊಹ್ಸಿನ್ ರಾಜಾ ಅಕ್ರಮ ಕಟ್ಟಡಗಳು ಧ್ವಂಸಗೊಂಡಿದೆ.
India Latest News Live 30 September 2025ಎಐ ಬೆಳೆಯುತ್ತಿರುವ ಸಂದರ್ಭದಲ್ಲಿ ಭಾರತೀಯ ವೃತ್ತಿಪರರಿಂದ ಮಾನವೀಯ ಕೌಶಲ್ಯಗಳತ್ತ ಚಿತ್ತ!
ಲಿಂಕ್ಡ್‌ಇನ್ ವರದಿಯ ಪ್ರಕಾರ, ಕೃತಕ ಬುದ್ಧಿಮತ್ತೆಯು (ಎಐ) ಪುನರಾವರ್ತಿತ ಕೆಲಸಗಳನ್ನು ವಹಿಸಿಕೊಳ್ಳುತ್ತಿರುವುದರಿಂದ ಭಾರತೀಯ ವೃತ್ತಿಪರರು ಸೃಜನಶೀಲತೆ ಮತ್ತು ಸಂವಹನ ಅಗತ್ಯವಿರುವ ಮಾನವೀಯ ಕೌಶಲ್ಯಗಳ ಹುದ್ದೆಗಳತ್ತ ಸಾಗುತ್ತಿದ್ದಾರೆ. ಎಐ ಅನ್ನು ಉತ್ಪಾದಕತೆ ಹೆಚ್ಚಿಸುವ ಸಾಧನವಾಗಿ ನೋಡಲಾಗುತ್ತಿದೆ.
India Latest News Live 30 September 2025ಸಾಹಸದ ವೇಳೆ ಕೆಳಗೆ ಬಿದ್ದು ಸರ್ಕಸ್ ಕಲಾವಿದೆ ಮರೀನಾ ಸಾವು
Trapeze stunt show tragedy: ಜರ್ಮನಿಯಲ್ಲಿ ನಡೆದ ಸರ್ಕಸ್ ಪ್ರದರ್ಶನದ ವೇಳೆ, 27 ವರ್ಷದ ಟ್ರಪೆಜ್ ಕಲಾವಿದೆ ಮರೀನಾ ಸುಮಾರು ಐದು ಮೀಟರ್ ಎತ್ತರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಸುರಕ್ಷತಾ ಹಗ್ಗವಿಲ್ಲದೆ ಏಕವ್ಯಕ್ತಿ ಸಾಹಸ ಪ್ರದರ್ಶಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.
India Latest News Live 30 September 2025ಟಿಸಿಎಸ್‌ನಿಂದ ಮತ್ತೊಂದು ಶಾಕ್, 12 ಸಾವಿರ ಬಳಿಕ ಇದೀಗ 80 ಸಾವಿರ ಉದ್ಯೋಗ ಕಡಿತ
ಟಿಸಿಎಸ್‌ನಿಂದ ಮತ್ತೊಂದು ಶಾಕ್, 12 ಸಾವಿರ ಬಳಿಕ ಇದೀಗ 80 ಸಾವಿರ ಉದ್ಯೋಗ ಕಡಿತ, ಈಗಾಗಲೇ ಈ ಪ್ರಕ್ರಿಯೆ ಆರಂಭಗೊಂಡಿದೆ. ಈ ಉದ್ಯೋಗ ಕಡಿತದ ಅಡಿ ಹಲವು ಕೆಲಸ ಕಳೆದುಕೊಂಡಿದ್ದಾರೆ. ಹಲವರಿಗೆ ಯಾವುದೇ ಪರಿಹಾರವೂ ನೀಡಿಲ್ಲ.
India Latest News Live 30 September 2025ಭಾರತಕ್ಕೆ ಈಗಲೂ ಏಷ್ಯಾಕಪ್ ಟ್ರೋಫಿ ಕೊಡಲು ರೆಡಿ, ಆದ್ರೆ ಒಂದು ಕಂಡೀಷನ್ ಎಂದ ನಖ್ವಿ! ಏನದು?
ದುಬೈ: 17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ ಟ್ರೋಫಿ ಸಿಕ್ಕಿಲ್ಲ. ಇದೀಗ ಟ್ರೋಫಿ ಬೇಕಿದ್ದರೇ ಒಂದು ಕಂಡೀಷನ್ ಇದೆ ಅಂತ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೊಸ ರಾಗ ಎಳೆದಿದ್ದಾರೆ.
India Latest News Live 30 September 2025ಕರೂರು ಕಾಲ್ತುಳಿತಕ್ಕೆ ಸ್ಟ್ಯಾಲಿನ್ ನೇರ ಕಾರಣ ಎಂದ ವಿಜಯ್ ಜೋಸೆಫ್!
Vijay Blames Stalin for Karur Stampede FIR ಪಕ್ಷದ ರಾಲಿ ವೇಳೆ ನಡೆದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿ ನಟ ವಿಜಯ್ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಅವರು, ಇದೊಂದು ರಾಜಕೀಯ ಪಿತೂರಿ ಎಂದಿದ್ದಾರೆ.
India Latest News Live 30 September 202535 ಕೋಟಿ ಮೌಲ್ಯದ ಡ್ರಗ್ಸ್‌ನೊಂದಿಗೆ ಸಿಕ್ಕಿಬಿದ್ದ 'ಸ್ಟೂಡೆಂಟ್ ಆಫ್ ದಿ ಇಯರ್' ನಟ
'ಸ್ಟೂಡೆಂಟ್ ಆಫ್ ದಿ ಇಯರ್' ಚಲನಚಿತ್ರದ ನಟನೊಬ್ಬನನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ 35 ಕೋಟಿ ಮೌಲ್ಯದ 3.5 ಕೆಜಿ ಕೊಕೇನ್‌ನೊಂದಿಗೆ ಬಂಧಿಸಲಾಗಿದೆ. ಸಿಂಗಾಪುರದಿಂದ ಬಂದಿಳಿದ ಈ ನಟನ ಗುರುತನ್ನು ಗೌಪ್ಯವಾಗಿಡಲಾಗಿದೆ.
India Latest News Live 30 September 2025ಇದು ಭಾರತದ ಕಂಪನಿ, ಇಲ್ಲೇ ತೆರಿಗೆ ಕಟ್ಟುತ್ತಿದ್ದೇವೆ, ಗೊಂದಲಕ್ಕೆ ಸ್ಪಷ್ಟನೆ ಕೊಟ್ಟ ಝೋಹೋ ಸಂಸ್ಥಾಪಕ
ಇದು ಭಾರತದ ಕಂಪನಿ, ಇಲ್ಲೇ ತೆರಿಗೆ ಕಟ್ಟುತ್ತಿದ್ದೇವೆ, ಗೊಂದಲಕ್ಕೆ ಸ್ಪಷ್ಟನೆ ಕೊಟ್ಟ ಝೋಹೋ ಸಂಸ್ಥಾಪಕ ಶ್ರೀಧರ್ ವೆಂಬು. ಝೋಹೋ ಎಲ್ಲಾ ಪ್ರಾಡಕ್ಟ್ ಭಾರತದಲ್ಲೇ ಅಭಿವೃದ್ಧಿ ಮಾಡಲಾಗಿದೆ. ಮುಖ್ಯ ಕಚೇರಿ, ತೆರಿಗೆಯನ್ನು ಇಲ್ಲೇ ಪಾವತಿಸುತ್ತಿದ್ದೇವೆ ಎಂದಿದ್ದಾರೆ.
India Latest News Live 30 September 2025ಪಾಕಿಸ್ತಾನದ ಪ್ಯಾರಾ ಮಿಲಿಟರಿ ಕಚೇರಿ ಮುಂದೆಯೇ ಪ್ರಬಲ ಕಾರ್ ಬಾಂಬ್ ಸ್ಪೋಟ - 10 ಸಾವು
ಪಾಕಿಸ್ತಾನದ ಬಲೋಚ್ ಪ್ರಾಂತ್ಯದಲ್ಲಿ ಭೀಕರವಾದ ಕಾರ್ ಬಾಂಬ್ ಸ್ಫೋಟಗೊಂಡಿದ್ದು, ಈ ದುರಂತದಲ್ಲಿ ಕನಿಷ್ಠ 10 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
India Latest News Live 30 September 2025ತನ್ನ ಗರ್ಭಿಣಿಯಾಗಿಸಿ ಮದುವೆಗೊಪ್ಪದ ಬಾಯ್‌ಫ್ರೆಂಡ್ ಕತೆ ಮುಗಿಸಿದ 16ರ ಅಪ್ರಾಪ್ತೆ
Teenage Girl Kills Boyfriend: ಅಪ್ರಾಪ್ತೆಯೊಬ್ಬಳು ತನ್ನನ್ನು ಗರ್ಭಿಣಿಯಾಗಿಸಿದ ಮದುವೆಗೊಪ್ಪದ ಗೆಳೆಯನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆದಂತಹ ಆಘಾತಕಾರಿ ಘಟನೆ ಛತ್ತೀಸ್‌ಗಢದ ರಾಯ್ಪುರದಲ್ಲಿ ನಡೆದಿದೆ. ಇಂಜಿನಿಯರಿಂಗ್ ವಿದ್ಯಾರ್ಥಿ ಮೊಹಮ್ಮದ್ ಸದ್ದಾಂ ಕೊಲೆಯಾದವ.
India Latest News Live 30 September 2025ಸಾವೆನ್ ಹರೇಂದ್ರ ಸಿಕ್ಸ್ಟಿ, ಪ್ರಿನ್ಸಿಪಲ್ ಬರೆದ ಚೆಕ್ ಸ್ಪೆಲ್ಲಿಂಗ್ ನೋಡಿ ಸುಸ್ತಾದ ಬ್ಯಾಂಕ್ ಸಿಬ್ಬಂದಿ
ಸಾವೆನ್ ಹರೇಂದ್ರ ಸಿಕ್ಸ್ಟಿ, ಪ್ರಿನ್ಸಿಪಲ್ ಬರೆದ ಚೆಕ್ ಸ್ಪೆಲ್ಲಿಂಗ್ ನೋಡಿ ಸುಸ್ತಾದ ಬ್ಯಾಂಕ್ ಸಿಬ್ಬಂದಿ, ಶಾಲಾ ಬಿಸಿಯೂಟದ ಸಿಬ್ಬಂದಿಗೆ ಬಾಕಿ ಮೊತ್ತ ನೀಡಲು ಪ್ರಿನ್ಸಿಪಲ್ ಚೆಕ್ ಬರೆದುಕೊಟ್ಟಿದ್ದಾರೆ. ಆದರೆ ಈ ಚೆಕ್ ರಿಜೆಕ್ಟ್ ಆಗಿದ್ದು ಮಾತ್ರವಲ್ಲ, ಬ್ಯಾಂಕ್ ಸಿಬ್ಬಂದಿ ಕಂಗಾಲಾಗಿದ್ದಾರೆ.
India Latest News Live 30 September 2025ಸೋತು ಸುಣ್ಣವಾದ ಪಾಕ್ ಗಾಯದ ಮೇಲೆ ಮತ್ತೆ ಬರೆ ಎಳೆದ ಸೂರ್ಯಕುಮಾರ್ ಯಾದವ್!
India Latest News Live 30 September 2025Arattai App - ವಾಟ್ಸ್ ಆ್ಯಪ್‌ಗೆ ಠಕ್ಕರ್ ಕೊಡಲು ಬರುತ್ತಿದೆ ದೇಸಿ ನಿರ್ಮಿತ ಅರಟ್ಟೈ
alternative app to WhatsApp: ಜೊಹೊ ಕಾರ್ಪೊರೇಷನ್ ನಿರ್ಮಿತ 'ಅರಟೈ' ಎಂಬ ಹೊಸ ದೇಶಿಯ ಮೆಸೇಜಿಂಗ್ ಆಪ್, ವಾಟ್ಸಾಪ್‌ಗೆ ಪರ್ಯಾಯವಾಗಿ ಅಪಾರ ಜನಪ್ರಿಯತೆ ಗಳಿಸುತ್ತಿದೆ. ಕೇವಲ ದಿನವೂ 3 ಲಕ್ಷಕ್ಕು ಅಧಿಕ ಜನ ಆಪ್ ಡೌನ್ಲೋಡ್ ಮಾಡುತ್ತಿದ್ದಾರೆ.
India Latest News Live 30 September 202530 ವರ್ಷ ಪೂರೈಸಿದ್ದು ಹೃದಯಸ್ಪರ್ಶಿ, ಕಳೆದ ಮೈಲಿಗಲ್ಲುಗಳನ್ನು ನೆನಪಿಸಿಕೊಳ್ಳುವ ಸಮಯ; ಏಷ್ಯಾನೆಟ್ ನ್ಯೂಸ್‌ಗೆ ಪ್ರಧಾನಿ ಶುಭಾಶಯ
PM Modi Asianet News anniversary: ಕಳೆದ ಮೂರು ದಶಕಗಳಿಂದ ಮಲಯಾಳಿಗಳಿಗೆ ಮಾಹಿತಿ ಮತ್ತು ಅರಿವು ಮೂಡಿಸುವಲ್ಲಿ ಏಷ್ಯಾನೆಟ್ ನ್ಯೂಸ್‌ನ ನಿರ್ಣಾಯಕ ಪಾತ್ರವನ್ನು ಅವರು ತಮ್ಮ ಶುಭಾಶಯ ಸಂದೇಶದಲ್ಲಿ ಶ್ಲಾಘಿಸಿದ್ದಾರೆ.