ದೆಹಲಿ - ದಿಮಾಪುರ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನ ಪವರ್ ಬ್ಯಾಂಕ್‌ನಿಂದ ಹೊತ್ತಿಕೊಂಡ ಬೆಂಕಿ, 6E 2107 ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನ ಮತ್ತೆ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದೆ, ಸದ್ಯದ ಪರಿಸ್ಥಿತಿ ವಿವರ ಇಲ್ಲಿದೆ.
- Home
- News
- India News
- India Latest News Live: ದೆಹಲಿ - ದಿಮಾಪುರ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನ ಪವರ್ ಬ್ಯಾಂಕ್‌ನಿಂದ ಹೊತ್ತಿಕೊಂಡ ಬೆಂಕಿ
India Latest News Live: ದೆಹಲಿ - ದಿಮಾಪುರ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನ ಪವರ್ ಬ್ಯಾಂಕ್‌ನಿಂದ ಹೊತ್ತಿಕೊಂಡ ಬೆಂಕಿ

ಭೋಪಾಲ್: ರಾಜ್ಯದಲ್ಲಿ ಜಾತಿ ಆಧರಿತ ಸಂಘರ್ಷಗಳು ದಿನೇ ದಿನೇ ಹೆಚ್ಚುತ್ತಿರುವುದು ಆಘಾತಕಾರಿ. ಜಾತಿಭೇದಗಳು ಹೀಗೆಯೇ ಮುಂದುವರಿದರೆ, ಮುಂದೊಂದು ದಿನ ಹಿಂದೂಗಳ ಗುರುತೇ ಅಳಿಸಿಹೋಗಬಹುದು ಎಂದು ಮಧ್ಯಪ್ರದೇಶ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಅ.11ರಂದು ಒಬಿಸಿ ವ್ಯಕ್ತಿಯೊಬ್ಬ ಎಐ ರಚಿತ ಮೀಮ್ ಹಂಚಿಕೊಂಡಿದ್ದಕ್ಕಾಗಿ, ಮೇಲ್ವರ್ಗದ ಜನ ಆತ ಇನ್ನೊಬ್ಬ ವ್ಯಕ್ತಿಯ ಪಾದ ತೊಳೆಯುವಂತೆ ಮಾಡಿದ್ದರು. ಈ ಕುರಿತು ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಅ.14ರಂದು ವಿಚಾರಣೆ ಕೈಗೆತ್ತಿಕೊಂಡ ಪೀಠ, 'ರಾಜ್ಯದಲ್ಲಿ ಜಾತಿ ಸಂಘರ್ಷ, ತಾರತಮ್ಯ ಪದೇ ಪದೇ ಘಟಿಸುತ್ತಿರುವುದು ಆಘಾತಕಾರಿ. ಈ ಹಂತದಲ್ಲೇ ನಿಯಂತ್ರಿಸದಿದ್ದರೆ, ಇನ್ನು ಒಂದೂವರೆ ಶತಮಾನದೊಳಗೆ ಹಿಂದೂ ಎಂದು ಕರೆದುಕೊಳ್ಳುವ ಜನರೇ ಅಸ್ತಿತ್ವದಲ್ಲಿರುವುದಿಲ್ಲ' ಎಂದು ಕಳವಳ ವ್ಯಕ್ತಪಡಿಸಿದೆ.
India Latest News Live 19 October 2025ದೆಹಲಿ - ದಿಮಾಪುರ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನ ಪವರ್ ಬ್ಯಾಂಕ್‌ನಿಂದ ಹೊತ್ತಿಕೊಂಡ ಬೆಂಕಿ
India Latest News Live 19 October 2025ಮಹಿಳಾ ವಿಶ್ವಕಪ್‌ನಲ್ಲಿ ಹರ್ಮನ್‌ಪ್ರೀತ್ ವಿಶ್ವದಾಖಲೆ ನಡುವೆ ಭಾರತಕ್ಕೆ ಸೋಲು, ಪಂದ್ಯ ಕೈತಪ್ಪಿದ್ದೆಲ್ಲಿ?
ಮಹಿಳಾ ವಿಶ್ವಕಪ್‌ನಲ್ಲಿ ಹರ್ಮನ್‌ಪ್ರೀತ್ ವಿಶ್ವದಾಖಲೆ ನಡುವೆ ಭಾರತಕ್ಕೆ ಸೋಲು, ಪಂದ್ಯ ಕೈತಪ್ಪಿದ್ದೆಲ್ಲಿ? ಗೆಲುವಿನ ಹಾದಿಯಲ್ಲಿದ್ದ ಭಾರತ ಮಹಿಳಾ ತಂಡ ಕೊನೆಯ ಹಂತದಲ್ಲಿ ಕೇವಲ 4 ರನ್‌ಗಳಿಂದ ಸೋಲು ಕಂಡಿದ್ದು ಹೇಗೆ?
India Latest News Live 19 October 202526 ಲಕ್ಷ ದೀಪಗಳಿಂದ ಝಗಮಗಿಸಿದ ಆಯೋಧ್ಯೆ, ದೀಪೋತ್ಸವದಲ್ಲಿ 2 ವಿಶ್ವದಾಖಲೆ
26 ಲಕ್ಷ ದೀಪಗಳಿಂದ ಝಗಮಗಿಸಿದ ಆಯೋಧ್ಯೆ, ದೀಪೋತ್ಸವದಲ್ಲಿ 2 ವಿಶ್ವದಾಖಲೆ ನಿರ್ಮಾಣವಾಗಿದೆ.ಆಯೋಧ್ಯೆ ಶ್ರೀರಾಮನ ದೀಪಾವಳಿ ವೈಭವ ಮರುಕಳಿಸಿದೆ. ಯೋಗಿ ಆದಿತ್ಯನಾಥ್ ದೀಪೋತ್ಸವಕ್ಕೆ ಚಾಲನೆ ನೀಡಿದ್ದು ಮಾತ್ರವಲ್ಲ, ದಾಖಲೆ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ.
India Latest News Live 19 October 2025ಸ್ಮೃತಿ ಮಂಧನಾ ಜೊತೆ ಮದುವೆ ಖಚಿತಪಡಿಸಿದ ಪಲಾಶ್, ಕ್ರಿಕೆಟರ್ ಕೈಹಿಡಿಯುವ ಹುಡುಗ ಯಾರು?
ಸ್ಮೃತಿ ಮಂಧನಾ ಜೊತೆ ಮದುವೆ ಖಚಿತಪಡಿಸಿದ ಪಲಾಶ್, ಕ್ರಿಕೆಟರ್ ಕೈಹಿಡಿಯುವ ಹುಡುಗ ಯಾರು? ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ಶೀಘ್ರದಲ್ಲೇ ಸ್ಮೃತಿ ಮಂಧನಾ ಇಂದೋರ್ ಸೊಸೆಯಾಗಲಿದ್ದಾರೆ.
India Latest News Live 19 October 2025ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡದೇ ಯಾವಾಗ ಬೇಕಾದ್ರೂ, ಸ್ಥಳ ಬದಲಿಸಿಯೂ ಪ್ರಯಾಣಿಸ್ಬೋದು! ಇಲ್ಲಿದೆ ಡಿಟೇಲ್ಸ್
ರೈಲ್ವೆ ಇಲಾಖೆಯು ಶೀಘ್ರದಲ್ಲೇ ಹೊಸ ನಿಯಮವನ್ನು ಜಾರಿಗೆ ತರಲಿದ್ದು, ಇದರ ಅಡಿಯಲ್ಲಿ ಪ್ರಯಾಣಿಕರು ಟಿಕೆಟ್ ಕ್ಯಾನ್ಸಲ್ ಮಾಡದೆಯೇ ಪ್ರಯಾಣದ ದಿನಾಂಕ ಮತ್ತು ಸ್ಥಳವನ್ನು ಬದಲಾಯಿಸಬಹುದು. ಈ ಸೌಲಭ್ಯದಿಂದ ಕ್ಯಾನ್ಸಲೇಷನ್ ಶುಲ್ಕದ ಹೊರೆ ತಪ್ಪಲಿದ್ದು, ದರ ವ್ಯತ್ಯಾಸವಿದ್ದರೆ ಮಾತ್ರ ಹೆಚ್ಚುವರಿ ಪಾವತಿಸಬೇಕು.
India Latest News Live 19 October 2025ಜೀವ ಉಳಿಸಿದ ಯುವಕನಿಗೆ ಶ್ವಾನ ಕೊಟ್ಟ ಅಚ್ಚರಿಯ ಉಡುಗೊರೆ!
Dogs Heartwarming Gesture: ಕೇರಳದಲ್ಲಿ ತೆರೆದ ಬಾವಿಗೆ ಬಿದ್ದ ಜರ್ಮನ್ ಶೆಫರ್ಡ್ ಶ್ವಾನವನ್ನು ಲಿಜೋ ಎಂಬ ಸ್ಥಳೀಯ ಪ್ರಾಣಿ ರಕ್ಷಕ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಬಾವಿಯಿಂದ ಮೇಲೆ ಬಂದ ನಂತರ, ಶ್ವಾನವು ತನ್ನ ಜೀವ ಉಳಿಸಿದ ಯುವಕನಿಗೆ ಮುತ್ತುಗಳನ್ನು ನೀಡಿ ಕೃತಜ್ಞತೆ ಸಲ್ಲಿಸಿದೆ.
India Latest News Live 19 October 2025ದೆಹಲಿ ಅಲ್ಲ ಇಂದ್ರಪ್ರಸ್ಥ, ಸಂಚಲನ ಸೃಷ್ಟಿಸಿದ ರಾಜಧಾನಿ ಮರುನಾಮಕರಣ ಮನವಿ ಪತ್ರ
ದೆಹಲಿ ಅಲ್ಲ ಇಂದ್ರಪ್ರಸ್ಥ, ಸಂಚಲನ ಸೃಷ್ಟಿಸಿದ ರಾಜಧಾನಿ ಮರುನಾಮಕರಣ ಮನವಿ ಪತ್ರ, ಸರ್ಕಾರದ ಮುಂದೆ ಬಂದಿದೆ. ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ಹಿಡಿದು ಡೆವಲಪ್‌ಮೆಂಟ್ ಬೋರ್ಡ್ ಸೇರಿ ಎಲ್ಲಾ ಹೆಸರು ಮರುನಾಮಕರಣ ಮಾಡಲು ಮನವಿ ಮಾಡಲಾಗಿದೆ.
India Latest News Live 19 October 2025ಸಚಿನ್, ದ್ರಾವಿಡ್, ಕೊಹ್ಲಿಯಂತ ಕ್ರಿಕೆಟ್ ದಂತಕಥೆಗಳ ಸಾಲಿಗೆ ಸೇರಿದ ರೋಹಿತ್ ಶರ್ಮಾ!
ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಈ ಮೂಲಕ ಈ ಸಾಧನೆ ಮಾಡಿದ ಐದನೇ ಭಾರತೀಯ ಆಟಗಾರ ಎಂಬ ಇತಿಹಾಸ ನಿರ್ಮಿಸಿದರು.
India Latest News Live 19 October 2025ಬಿಹಾರ ಚುನಾವಣೆ - ನಿಷ್ಠಾವಂತ ಕಾರ್ಯಕರ್ತನಿಗೇ ಟಿಕೆಟ್ ನೀಡಲು 2.7 ಕೋಟಿ ಕೇಳಿದ್ರಾ ಲಾಲೂ ಪಾರ್ಟಿ ನಾಯಕರು
ಬಿಹಾರ ವಿಧಾನಸಭಾ ಚುನಾವಣೆಗೆ ಟಿಕೆ್ಟ್ ಕೇಳಿದ್ದಕ್ಕೆ ಆರ್‌ಜೆಡಿ ನಾಯಕ ಸಂಜಯ್ ಯಾದವ್ ನನ್ನ ಬಳಿ 2.7 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರ್‌ಜೆಡಿಯಿಂದ ಟಿಕೆಟ್ ವಂಚಿತರಾಗಿರುವ ಮದನ್ ಶಾ, ಆರೋಪಿಸಿದ್ದಾರೆ.
India Latest News Live 19 October 2025ರೈಲು ನಿಲ್ದಾಣದಲ್ಲಿ ಸಮೋಸಾ ಮಾರಾಟಗಾರನ ರೌಡಿಸಂ - 2 ಸಮೋಸಾಗಾಗಿ ವಾಚ್ ಬಿಚ್ಚಿ ಕೊಟ್ಟ ಪ್ರಯಾಣಿಕ
Railway Food Vendors Mafia:
ಮಧ್ಯಪ್ರದೇಶದ ಜಬಲ್‌ಪುರ ರೈಲು ನಿಲ್ದಾಣದಲ್ಲಿ ರೈಲು ಹೊರಡಲು ಶುರು ಆಯ್ತು ಅಂತ ಸಮೋಸಾ ಖರೀದಿಸಲು ನಿರಾಕರಿಸಿದ ಪ್ರಯಾಣಿಕನ ಮೇಲೆ ಮಾರಾಟಗಾರನೊಬ್ಬ ಹಲ್ಲೆ ನಡೆಸಿ, ಆತನಿಂದ ಡಿಜಿಟಲ್ ವಾಚ್ ಕಿತ್ತುಕೊಂಡಿದ್ದಾನೆ. ಈ ಘಟನೆಯ ವೀಡಿಯೋ ವೈರಲ್ ಆಗಿದೆ..
India Latest News Live 19 October 2025ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಮ್ಯಾಚ್ ಮಳೆಯಿಂದ ತಾತ್ಕಾಲಿಕ ಸ್ಥಗಿತ! ಮತ್ತೆ ಮ್ಯಾಚ್ ಆರಂಭ ಆಗುತ್ತಾ?
ಪರ್ತ್: ಭಾರತ ಹಾಗೂ ಅಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಆದರೆ ಮಳೆಯಿಂದಾಗಿ ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇದೀಗ ಮೊದಲ ಪಂದ್ಯ ಮುಂದುವರೆಯುತ್ತಾ ಅಥವಾ ರದ್ದಾಗುತ್ತಾ ಎನ್ನುವ ಕುತೂಹಲ ಜೋರಾಗಿದೆ.
India Latest News Live 19 October 2025ಅಮ್ಮ ದೀಪಾವಳಿಗೆ ಮನೆ ಕ್ಲೀನ್ ಮಾಡು ಎಂದಿದ್ದಕ್ಕೆ ಮೊಬೈಲ್ ಟವರ್ ಏರಿದ ಬಾಲಕಿ
Girl Climbs Mobile Tower: ಮನೆಯಲ್ಲಿ ದೀಪಾವಳಿಗೆ ಮನೆ ಕ್ಲೀನ್ ಮಾಡು ಎಂದಿದ್ದಕ್ಕೆ ಮಗಳೊಬ್ಬಳು ಸಿಟ್ಟಿಗೆದ್ದು ಮೊಬೈಲ್ ಟವರ್ ಏರಿದಂತಹ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
India Latest News Live 19 October 2025ಮಹಿಳಾ ವಿಶ್ವಕಪ್ - ಭಾರತಕ್ಕಿಂದು ಬಲಿಷ್ಠ ಇಂಗ್ಲೆಂಡ್ ಚಾಲೆಂಜ್! ಎಷ್ಟು ಗಂಟೆಯಿಂದ ಮ್ಯಾಚ್ ಆರಂಭ?
India Latest News Live 19 October 2025ಮೊದಲ ಪಂದ್ಯದಲ್ಲೇ ಭಾರತಕ್ಕೆ ಆರಂಭಿಕ ಆಘಾತ, ದಿಢೀರ್ 3 ವಿಕೆಟ್ ಪತನ! ಪಂದ್ಯ ತಾತ್ಕಾಲಿಕ ಸ್ಥಗಿತ
ಪರ್ತ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ, ಟೀಂ ಇಂಡಿಯಾ 25 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ನಾಯಕ ಶುಭ್‌ಮನ್ ಗಿಲ್ ಪೆವಿಲಿಯನ್ ಸೇರಿದ್ದು, ಮಳೆಯಿಂದಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
India Latest News Live 19 October 2025ಜೈಪುರದ ಸ್ವರ್ಣ್ ಪ್ರಸಾದ ಸಿಹಿ ಬೆಲೆ 1.11 ಲಕ್ಷ ರೂಪಾಯಿ, ಒಂದು ಪೀಸ್‌ಗೆ 3 ಸಾವಿರ ರೂ
India Latest News Live 19 October 2025ಭಾರತ ಎದುರು ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ, ಕೊಹ್ಲಿ-ರೋಹಿತ್ ಕಮ್‌ಬ್ಯಾಕ್! ಆಲ್ರೌಂಡರ್ ಡೆಬ್ಯೂ
ಪರ್ತ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಏಳು ತಿಂಗಳ ಬಳಿಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಂಡಕ್ಕೆ ಮರಳಿದ್ದು, ನಿತೀಶ್ ಕುಮಾರ್ ರೆಡ್ಡಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.
India Latest News Live 19 October 2025ಇಂದು ಭಾರತ vs ಆಸ್ಟ್ರೇಲಿಯಾ ಹೈವೋಲ್ಟೇಜ್ ಫೈಟ್! ಕೊಹ್ಲಿ-ರೋಹಿತ್ ಮೇಲೆ ಕಣ್ಣು
7 ತಿಂಗಳ ಬಳಿಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತ ತಂಡಕ್ಕೆ ಮರಳಿದ್ದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡಲಿದ್ದಾರೆ. ಶುಭಮನ್ ಗಿಲ್ ನಾಯಕತ್ವದಲ್ಲಿ ತಂಡ ಕಣಕ್ಕಿಳಿಯಲಿದ್ದು, ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಪಡೆದಿದ್ದಾರೆ.
India Latest News Live 19 October 2025ಟರ್ಕಿ ಜೊತೆ ಬಾಂಗ್ಲಾದೇಶ ಒಪ್ಪಂದ ಮಾಡಿಕೊಂಡ್ರೆ ಭಾರತಕ್ಕೆ ಏಕೆ ತಲೆನೋವು?
India Bangladesh strategic relations ಶೇಖ್ ಹಸೀನಾ ಸರ್ಕಾರದ ಪತನದ ನಂತರ, ಬಾಂಗ್ಲಾದೇಶವು ಭಾರತದ ವಿರೋಧಿ ರಾಷ್ಟ್ರವಾದ ಟರ್ಕಿಯೊಂದಿಗೆ ಮಹತ್ವದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದೆ, ಇದು ಭಾರತಕ್ಕೆ ವ್ಯೂಹಾತ್ಮಕವಾಗಿ ಹೊಸ ಸವಾಲನ್ನು ಒಡ್ಡಿದೆ.
India Latest News Live 19 October 2025ರಣಜಿ ಟ್ರೋಫಿ - ಸೌರಾಷ್ಟ್ರ ಎದುರು ಕರ್ನಾಟಕದ ಗೆಲುವಿಗೆ ಅಡ್ಡಿಯಾದ ಆ ಒಂದು ತಪ್ಪು!
ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕಕ್ಕೆ ಗೆಲ್ಲುವ ಅವಕಾಶ ಕೈತಪ್ಪಿ ಪಂದ್ಯ ಡ್ರಾಗೊಂಡಿತು. ಎರಡನೇ ಇನ್ನಿಂಗ್ಸ್ ತಡವಾಗಿ ಡಿಕ್ಲೇರ್ ಮಾಡಿದ್ದು ಕರ್ನಾಟಕಕ್ಕೆ ಮುಳುವಾಯಿತು. ಶ್ರೇಯಸ್ ಗೋಪಾಲ್ ಅವರ ಸ್ಪಿನ್ ದಾಳಿಯ ಹೊರತಾಗಿಯೂ, ಸೌರಾಷ್ಟ್ರ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.
India Latest News Live 19 October 2025ಬ್ರಹ್ಮೋಸ್ ಕಣ್ಣಳತೆಯಲ್ಲಿದೆ ಪಾಕ್ - ಆಪರೇಷನ್ ಸಿಂದೂರದ ರಹಸ್ಯವೇನು?
India's warning to Pakistan: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಪಾಕಿಸ್ತಾನದ ಪ್ರತಿ ಇಂಚು ಭೂಮಿಯೂ ಬ್ರಹ್ಮೋಸ್ ವ್ಯಾಪ್ತಿಯಲ್ಲಿದೆ ಮತ್ತು ಆಪರೇಷನ್ ಸಿಂದೂರ ಕೇವಲ ಟ್ರೈಲರ್ ಎಂದು ಎಚ್ಚರಿಸಿದ್ದಾರೆ.