- Home
- News
- India News
- India Latest News Live: ಅನ್ಯ ರಾಷ್ಟ್ರಗಳಿಗೆ ನಿರ್ಬಂಧಿಸಿ ರಷ್ಯಾದಿಂದ ತಾನೇ ತೈಲ ಖರೀದಿಸಿದ ಅಮೆರಿಕ!
LIVE NOW
India Latest News Live: ಅನ್ಯ ರಾಷ್ಟ್ರಗಳಿಗೆ ನಿರ್ಬಂಧಿಸಿ ರಷ್ಯಾದಿಂದ ತಾನೇ ತೈಲ ಖರೀದಿಸಿದ ಅಮೆರಿಕ!

ಸಾರಾಂಶ
ವಾಷಿಂಗ್ಟನ್: ರಷ್ಯಾದಿಂದ ತೈಲ ಕೊಳ್ಳದಂತೆ ಅನ್ಯ ದೇಶಗಳ ಮೇಲೆ ಒತ್ತಡ ಹೇರುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ, ತಕ್ಷಣದಿಂದಲೇ ಅಮೆರಿಕಕ್ಕೆ ರಷ್ಯಾದಿಂದ ತೈಲ ಪೂರೈಕೆಯಾಗಲಿದೆ ಎಂದು ಘೋಷಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಯಾಡಿಮಿರ್ ಪುಟಿನ್ ಜತೆಗಿನ ದೂರವಾಣಿ ಸಂಭಾಷಣೆಯ ಬಳಿಕ ಮಾತನಾಡಿದ ಟ್ರಂಪ್, 'ರಷ್ಯಾದಿಂದ ಅಮೆರಿಕ ಮತ್ತು ಜಾಗತಿಕ ಮಾರು ಕಟ್ಟೆಗೆ ತಕ್ಷಣ 3 ಲಕ್ಷ ಟನ್ ಡೀಸೆಲ್ ಪೂರೈಸಲು ಒಪ್ಪಂದ ಆಗಿದೆ' ಎಂದು ಹೇಳಿದರು. ಈ ಮೊದಲು, 'ರಷ್ಯಾದಿಂದ ತೈಲ ಖರೀದಿಸಿದರೆ ಆ ಹಣ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಬಳಕೆಯಾಗುತ್ತದೆ' ಎಂಬ ಕಾರಣ ನೀಡಿ ಭಾರತ ಸೇರಿ ಅನೇಕ ರಾಷ್ಟ್ರಗಳಿಗೆ ಹೆಚ್ಚುವರಿ ತೆರಿಗೆ ಬೆದರಿಕೆಯನ್ನು ಟ್ರಂಪ್ ಹಾಕಿದ್ದರು. ಆದರೀಗ ಅಮೆರಿಕದಲ್ಲಿ ಮಧ್ಯಂತರ ಚುನಾವಣೆ ಸಮೀಪಿಸುತ್ತಿರುವ ಕಾರಣ, ಆ ಅವಧಿಯಲ್ಲಿ ತೈಲ ಬೆಲೆ ಕಡಿಮೆ ಇರುವಂತೆ ನೋಡಿಕೊಳ್ಳಲು ಟ್ರಂಪ್ ರಷ್ಯಾ ತೈಲ ಆಮದಿಗೆ ಸಮ್ಮತಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ