ಕೊರೋನಾಗೆ ಭಾರತದಲ್ಲೇ ಔಷಧ, ಲಸಿಕೆ!

ಕೊರೋನಾಗೆ ಭಾರತದಲ್ಲೇ ಔಷಧ, ಲಸಿಕೆ ಸೃಷ್ಟಿಗೆ ವೇಗ|  ಅಕ್ಟೋಬರ್‌ನಿಂದ ಲಸಿಕೆ ಪ್ರಯೋಗ

India identifies 6 local vaccine candidates for Coronavirus top contenders in the race

ನವದೆಹಲಿ(ಮೇ.30): ಕೊರೋನಾ ವೈರಸ್‌ಗೆ ವಿಶ್ವದೆಲ್ಲೆಡೆ ಲಸಿಕೆ ಕಂಡುಹಿಡಿಯುವ ಯತ್ನ ಭರದಿಂದ ಸಾಗುತ್ತಿರುವಾಗಲೇ, ವೈರಸ್‌ಗೆ ಸ್ವದೇಶಿ ನಿರ್ಮಿತ ಲಸಿಕೆ ಹಾಗೂ ಔಷಧ ಲಭ್ಯವಾಗುವ ಆಶಾವಾದ ಗೋಚರಿಸಿದೆ.

ಭಾರತದಲ್ಲಿ 6 ಗುಂಪುಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ. ಆ ಪೈಕಿ ಒಂದು ಗುಂಪಿನ ಲಸಿಕೆಯ ಪ್ರಿಕ್ಲಿನಿಕಲ್‌ ಪ್ರಯೋಗ ಅಕ್ಟೋಬರ್‌ ಒಳಗೆ ಮುಕ್ತಾಯಗೊಂಡು ಮಾನವ ಪ್ರಯೋಗ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್‌ ಅವರು ತಿಳಿಸಿದ್ದಾರೆ. ಆದರೆ ಆ ಕಂಪನಿ ಯಾವುದು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

ಚೀನಾದಲ್ಲಿ ಕೊರೋನಾ ಲಸಿಕೆ ಮೊದಲ ಪ್ರಯೋಗ ಯಶಸ್ವಿ!

ಈ ನಡುವೆ, ಕೊರೋನಾ ರೋಗಿಗಳ ಮೇಲೆ ನಫಾಮೊಸ್ಟಾಟ್‌ ಮೆಸಿಲೇಟ್‌ ಎಂಬ ಔಷಧದ ಕ್ಲಿನಿಕಲ್‌ ಪ್ರಯೋಗ ಆರಂಭಿಸಲು ಭಾರತೀಯ ಔಷಧ ನಿಯಂತ್ರಕರಿಂದ ಸನ್‌ ಫಾರ್ಮಾ ಕಂಪನಿ ಅನುಮತಿ ಪಡೆದುಕೊಂಡಿದೆ. ನಫಾಮೋಸ್ಟಾಟ್‌ ಅನ್ನು ಯುರೋಪ್‌, ಜಪಾನ್‌ ಹಾಗೂ ದಕ್ಷಿಣ ಕೊರಿಯಾದಲ್ಲಿ ಸಾರ್ಸ್‌- ಕೋವ್‌-2 ವೈರಸ್‌ ರೋಗಿಗಳ ಮೇಲೆ ಪ್ರಯೋಗಿಸಿದಾಗ ಭರವಸೆಯ ಫಲಿತಾಂಶ ಸಿಕ್ಕಿದೆ ಎಂದು ಕಂಪನಿ ತಿಳಿಸಿದೆ.

ಇದೇ ವೇಳೆ ಅಮೆರಿಕದ ಔಷಧ ತಯಾರಿಕಾ ಕಂಪನಿ ಫೈಜರ್‌ ಕೊರೋನಾಕ್ಕೆ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿದ್ದು, ಅಕ್ಟೋಬರ್‌ನಲ್ಲಿ ಅದು ಬಳಕೆಗೆ ಲಭ್ಯವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

Latest Videos
Follow Us:
Download App:
  • android
  • ios