ಲಂಡ​ನ್(ಸೆ.23)‌: ಚೀನಾ-ಭಾರ​ತ ನಡು​ವಿನ ತ್ವೇಷಮಯ ಸ್ಥಿತಿ ತಣಿ​ಯುವ ಸಾಧ್ಯತೆ ಕಡಿಮೆ ಎಂಬ ಸೂಚನೆ ಲಭಿ​ಸು​ತ್ತಿ​ದ್ದಂತೆಯೇ ಭಾರ​ತೀಯ ಸೇನೆಯು ಸಂಘ​ರ್ಷದ ಮೂಲ ತಾಣ​ಗ​ಳಲ್ಲಿ ಒಂದಾದ ಚುಶೂ​ಲ್‌​ ಸನಿ​ಹದ ಹಿಮಾ​ಲ​ಯದ ‘ಬ್ಲ್ಯಾಕ್‌ ಟಾಪ್‌’ ಬೆಟ್ಟ​ದ​ಲ್ಲಿ ಬೀಡು​ಬಿ​ಟ್ಟಿದೆ. ಈಗ ಸೇನೆಗೆ ಚುಶೂಲ್‌ ಗ್ರಾಮ​ಸ್ಥರು ಚಳಿ​ಗಾ​ಲ​ದ ಅಗತ್ಯ ವಸ್ತು​ಗ​ಳನ್ನು ಸರ​ಬ​ರಾಜು ಮಾಡಲು ಆರಂಭಿ​ಸಿ​ದ್ದಾ​ರೆ.

ಬ್ಲ್ಯಾಕ್‌ ಟಾಪ್‌ಗೆ ಹೋಗುವ ಮಾರ್ಗ ತುಂಬಾ ದುರ್ಗ​ಮ​ವಾ​ಗಿದೆ. ಕಷ್ಟ​ಪ​ಟ್ಟಾ​ದರೂ ಸರಿ, ಭಾರ​ತೀಯ ಸೇನೆಗೆ ನೆರ​ವಾ​ಗ​ಬೇಕು ಎಂಬ ಉದ್ದೇ​ಶ​ದಿಂದ ಚುಶೂಲ್‌ ಗ್ರಾಮ​ಸ್ಥರು ಬೆಟ್ಟ​ವ​ನ್ನೇರಿ ಅಗ​ತ್ಯ ವಸ್ತು ಪೂರೈ​ಸು​ತ್ತಿ​ದ್ದಾರೆ. ಕ್ಯಾನ್‌​ಗ​ಳಲ್ಲಿ ತುಂಬಿದ ಇಂಧನ, ಬಿದಿರು ಬೆತ್ತ​ಗಳು, ಉಣ್ಣೆ ಚೀಲ, ಅಕ್ಕಿ ಚೀಲ​ಗಳನ್ನು ಸರಬರಾಜು ಮಾಡುತ್ತಿದ್ದಾರೆ.

‘ಇನ್ನೇನು ಗಡಿ​ಯಲ್ಲಿ ಚಳಿ​ಗಾಲ ಆರಂಭ​ವಾ​ಗು​ತ್ತದೆ. ಇಲ್ಲಿನ ಚಳಿ​ಗಾಲ ಅಂತಿಂಥ​ದ್ದಲ್ಲ. -40 ಡಿಗ್ರಿ ರಣ​ಭೀ​ಕರ ಚಳಿ ಇರು​ತ್ತದೆ. ಈ ಹಂತ​ದಲ್ಲಿ ಭಾರ​ತದ ಸೇನೆಗೆ ಅಗ​ತ್ಯ​ವ​ಸ್ತು​ಗಳ ಕೊರತೆ ಆಗ​ಬಾ​ರದು. ಹೀಗಾ​ದರೆ ಸೇನೆಗೆ ಅಲ್ಲಿ ಇರಲು ಕಷ್ಟ​ವಾ​ಗು​ತ್ತದೆ. ಇದೇ ಸಂದ​ರ್ಭ​ವನ್ನು ಬಳ​ಸಿ​ಕೊಂಡು ಚೀನಾ ಸೇನೆ ಚುಶೂಲ್‌ ಸಮೀ​ಪದ ಬೆಟ್ಟ​ಗ​ಳನ್ನು ತನ್ನ​ದಾ​ಗಿ​ಸಿ​ಕೊ​ಳ್ಳ​ಬ​ಹುದು’ ಎಂಬ ಆತಂಕ ಗ್ರಾಮ​ಸ್ಥ​ರ​ದ್ದು. ಈ ಕಾರ​ಣಕ್ಕೇ ನಿತ್ಯ ಸುಮಾರು 100 ಪುರು​ಷರು, ಮಹಿ​ಳೆ​ಯರು, ಬಾಲ​ಕರು ತಮ್ಮ ಬೆನ್ನ ಮೇಲೆ ಈ ಸಾಮಾ​ನು​ಗ​ಳನ್ನು ಹೊತ್ತು ಬ್ಲ್ಯಾಕ್‌ ಟಾಪ್‌ಗೆ ತೆರ​ಳು​ತ್ತಿ​ದ್ದಾ​ರೆ.

‘ಭಾ​ರತದ ಸೇನೆ ಸುರ​ಕ್ಷಿ​ತ​ವಾ​ಗಿ​ರ​ಬೇಕು. ಅವ​ರಿಗೆ ಚಳಿ​ಗಾ​ಲ​ದಲ್ಲಿ ತೊಂದರೆ ಆಗ​ಬಾ​ರದು. ಹೀಗಾಗಿ ಸರಿ​ಯಾದ ರಸ್ತೆ ಇಲ್ಲ​ದಿ​ದ್ದ​ರೂ ಕಷ್ಟ​ಪ​ಟ್ಟು ಇಡೀ ದಿನ ಬೆಟ್ಟ​ವೇರಿ ಪೂರೈಕೆ ಕಾರ್ಯ​ದಲ್ಲಿ ತೊಡ​ಗಿದ್ದೇ​ವೆ’ ಎಂದು ಚುಶೂ​ಲ್‌ನ 28 ವರ್ಷದ ಗ್ರಾಮ​ಸ್ಥನೊಬ್ಬ ಹೇಳಿದ ಎಂದು ಬ್ರಿಟ​ನ್‌ನ ‘ಗಾ​ರ್ಡಿ​ಯನ್‌’ ಪತ್ರಿಕೆ ವರದಿ ಮಾಡಿ​ದೆ.

ಚುಶೂ​ಲ್‌​ನ​ಲ್ಲಿ 150 ಮನೆ​ಗ​ಳಿದ್ದು, ಗಡಿ​ಯ​ಲ್ಲಿ​ನ ಕಟ್ಟ​ಕ​ಡೆಯ ಗ್ರಾಮ​ವಾ​ಗಿದೆ. ಇತ್ತೀ​ಚೆಗೆ ಚೀನಾ ಇಲ್ಲಿ ಹೊಸ​ದಾಗಿ ತಗಾದೆ ತೆಗೆ​ದಿದ್ದು, ಗ್ರಾಮ​ಸ್ಥ​ರಲ್ಲಿ ಆತಂಕ ಮೂಡಿ​ಸಿ​ದೆ.

ಈ ನಡುವೆ, ‘ಗಡಿ​ಯಲ್ಲಿ ಶಾಂತಿ ಸ್ಥಾಪನೆ ಅನು​ಮಾ​ನ​ವಾ​ಗಿದ್ದು, ಚಳಿ​ಗಾ​ಲದ ಸಂದ​ರ್ಭ​ದಲ್ಲಿ ಎರಡೂ ಸೇನೆ​ಗಳು ಗಡಿ​ಯಲ್ಲೇ ಬೀಡು ಬಿಡು​ವುದು ನಿಶ್ಚಿತ’ ಎಂದು ಭದ್ರತಾ ತಜ್ಞ ಮನೋಜ್‌ ಜೋಶಿ ಹೇಳಿ​ದ್ದಾ​ರೆ.