2021ರ ಮೊದಲ 8 ತಿಂಗಳಲ್ಲಿ ಮಹಿಳೆಯರ ಮೇಲಿನ ಅಪರಾಧದ ದೂರುಗಳ ಪ್ರಮಾಣದಲ್ಲಿ 2021ರಲ್ಲಿ ಶೇ.46 ಹೆಚ್ಚಾಗಿದೆ.  ಅರ್ಧದಷ್ಟು ದೂರುಗಳು ಉತ್ತರಪ್ರದೇಶದಲ್ಲಿ ದಾಖಲಾಗಿವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ

ನವದೆಹಲಿ (ಸೆ.08): 2021ರ ಮೊದಲ 8 ತಿಂಗಳಲ್ಲಿ ಮಹಿಳೆಯರ ಮೇಲಿನ ಅಪರಾಧದ ದೂರುಗಳ ಪ್ರಮಾಣದಲ್ಲಿ 2021ರಲ್ಲಿ ಶೇ.46 ಹೆಚ್ಚಾಗಿದೆ. 

ಇದರಲ್ಲಿ ಅರ್ಧದಷ್ಟು ದೂರುಗಳು ಉತ್ತರಪ್ರದೇಶದಲ್ಲಿ ದಾಖಲಾಗಿವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ. 8 ತಿಂಗಳಲ್ಲಿಲ 19,953 ದೂರು ಬಂದಿವೆ.

'ಆನ್ ಲೈನ್‌ನಲ್ಲಿ ಮುಸ್ಲಿಂ ಸ್ತ್ರೀಯರ ಮಾರಾಟ' ವಿವರಣೆ ಕೇಳಿದ ಮಹಿಳಾ ಆಯೋಗ

 ಕಳೆದ ವರ್ಷ 13,618ದೂರುಗಳು ದಾಖಲಾಗಿತ್ತು. ಈ ವರ್ಷದ ಜುಲೈ ತಿಂಗಳಲ್ಲಿ ದಾಖಲೆಯ 3,248 ದೂರುಗಳು ಬಂದಿವೆ ಎಂದು ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಹೇಳಿದ್ದಾರೆ. 

7 ಸಾವಿರ ದೂರುಗಳು ಘನತೆಯ ಬದುಕಿನ ಹಕ್ಕಿನಡಿ ದಾಖಲಾಗಿದ್ದರೆ, ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ 4,289 ದೂರುಗಳುಬಂದಿವೆ. ವಿವಾಹಿತೆಯರ ಅಥವಾ ವರದಕ್ಷಿಣೆ ದೌರ್ಜನ್ಯದಡಿ 2,923 ಕೇಸುಗಳು ದಾಖಲಾಗಿವೆ ಎಂದಿದ್ದಾರೆ. ಯುಪಿ(10,084), ದೆಹಲಿ(2147)ಹರಾರ‍ಯಣದಲ್ಲಿ 995 ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ.