ಮೀನುಗಾರರೊಂದಿಗೆ ಕಡಲಿಗೆ ಇಳಿದ ರಾಹುಲ್‌ ಗಾಂಧಿ| ಸಮುದ್ರಕ್ಕೆ ದಿಢೀರನೇ ಹಾರಿ 10 ನಿಮಿಷ ರಾಹುಲ್‌ ಈಜು

ಕೊಲ್ಲಂ(ಫೆ.25): ಮೀನುಗಾರರ ಜೀವನಶೈಲಿಯನ್ನು ಅರಿಯಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬುಧವಾರ ಸ್ವತಃ ಇಲ್ಲಿನ ಕಡಲಿಗಿಳಿದು ಮೀನುಗಾರರೊಂದಿಗೆ ಸೇರಿ ಬಲೆ ಬೀಸಿದ ಪ್ರಸಂಗ ನಡೆಯಿತು. ಬಳಿಕ ಮೀನುಗಾರರೊಂದಿಗೆ ಅವರೂ ಸಮುದ್ರಕ್ಕೆ ಇಳಿದು ಸುಮಾರು 10 ನಿಮಿಷಗಳ ಈಜಿದರು.

Scroll to load tweet…

‘ಭದ್ರತಾ ಸಿಬ್ಬಂದಿಯೊಂದಿಗೆ ಬೋಟ್‌ನಲ್ಲಿ ಸಮುದ್ರಕ್ಕೆ ತೆರಳಿದ್ದ ರಾಹುಲ್‌ ಗಾಂಧಿ ಮೀನುಗಳಿಗೆ ಬಲೆ ಬೀಸಿದ ಬಳಿಕ, ಯಾವುದೇ ಮಾಹಿತಿ ನೀಡಿದೆ ಬೋಟ್‌ನಿಂದ ಕಡಲಿಗೆ ಹಾರಿದರು. ನಮಗೆ ಅಚ್ಚರಿ ಆಯಿತು. ಅವರು ನುರಿತ ಈಜುಗಾರರಾಗಿದ್ದರಿಂದ ಯಾವುದೇ ಭಯ ಆಗಲಿಲ್ಲ. ಸುಮಾರು 10 ನಿಮಿಷಗಳ ಕಾಲ ಈಜಿದರು’ ಎಂದು ಕಾರ‍್ಯಕರ್ತರೊಬ್ಬರು ತಿಳಿಸಿದರು.

ಸುಮಾರು ಎರಡೂವರೆ ಗಂಟೆ ಸಮುದ್ರದಲ್ಲೇ ಕಾಲ ಕಳೆದ ರಾಹುಲ್‌ ಗಾಂಧಿ ಬಳಿಕ ಮೀನುಗಾರರು ಬೋಟ್‌ನಲ್ಲಿಯೇ ತಯಾರಿಸಿದ್ದ ಬ್ರೆಡ್‌ ಮತ್ತು ಫಿಶ್‌ ಕರಿಯನ್ನು ಸವಿದರು. ಈ ವೇಳೆ ಮೀನುಗಾರರ ಸಮಸ್ಯೆಗಳನ್ನೂ ಆಲಿಸಿದರು ಎಂದು ಮೂಲಗಳು ತಿಳಿಸಿವೆ.