Asianet Suvarna News Asianet Suvarna News

ಮೊಬೈಲ್ ಟಾರ್ಚ್ ನಲ್ಲಿ ಪರೀಕ್ಷೆ ಬರೆದ ಕೇರಳ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು!

ಪ್ರತಿಷ್ಠಿತ ಮಹಾರಾಜ ಕಾಲೇಜಿನಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ ಇನ್ವಿಜಿಲೇಟರ್ ಗಳು ಮೊಬೈಲ್ ಟಾರ್ಚ್ ಸಹಾಯದಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದಾರೆ.
 

In Kerala government run Maharajas College Students write exam using mobile flashlights san
Author
Bengaluru, First Published Apr 12, 2022, 10:18 PM IST | Last Updated Apr 12, 2022, 10:18 PM IST

ಕೊಚ್ಚಿ (ಏ.12): ಸರ್ಕಾರ ನಡೆಸುತ್ತಿರುವ ಎರ್ನಾಕುಲಂನ (Ernakulam) ಮಹಾರಾಜಾಸ್ ಕಾಲೇಜಿನಲ್ಲಿ (Maharajas College) ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು (undergraduate and postgraduate students) ವಿದ್ಯುತ್ ವ್ಯತ್ಯಯದ (power outage) ಕಾರಣದಿಂದಾಗಿ, ಮೊಬೈಲ್ ಫೋನ್ ಗಳ ಟಾರ್ಚ್ (mobile phone flashlights ) ಬಳಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ ವಿಚಾರವೀಗ ವಿವಾದಕ್ಕೆ ಕಾರಣವಾಗಿದೆ.

ಸೋಮವಾರ ಸುರಿದ ಧಾರಾಕಾರ ಮಳೆಯಿಂದಾಗಿ ಕಾಲೇಜಿನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಬಹುತೇಕ ಪರೀಕ್ಷಾ ಕೊಠಡಿಗಳು ಕತ್ತಲಲ್ಲಿ ಮುಳುಗಿದ್ದವು. ಆತಂಕಗೊಂಡ ವಿದ್ಯಾರ್ಥಿಗಳು ಆಕ್ರೋಶಗೊಂಡಾಗ, ಪರೀಕ್ಷಾ ಕೊಠಡಿಗಳ ಒಳಗೆ ಮೊಬೈಲ್ ಫೋನ್ ನಿಷೇಧಿಸುವ ನಿಯಮವನ್ನು ಉಲ್ಲಂಘಿಸಿ, ಮೊಬೈಲ್ ಫೋನ್ ಟಾರ್ಚ್ ಗಳ ಸಹಾಯದಿಂದ ಪರೀಕ್ಷೆ ಬರೆಯಲು ಇನ್ವಿಜಿಲೇಟರ್‌ಗಳು ಅವಕಾಶ ನೀಡಿದರು.

ಸ್ವಾಯತ್ತ ಕಾಲೇಜಾಗಿರುವುದರಿಂದ ಎರಡು ಗಂಟೆಗಳ ಕಾಲ ಒಂದೇ ಕೈಯಲ್ಲಿ ಮೊಬೈಲ್ ಬ್ಯಾಟರಿ ಹಿಡಿದುಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಬದಲು,  ಅಧಿಕಾರಿಗಳು ಪರೀಕ್ಷೆ ರದ್ದುಪಡಿಸಿ ಮರುಪರೀಕ್ಷೆ ಘೋಷಿಸಬಹುದಿತ್ತು. ಕಾಲೇಜಿನವರು 77 ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಸಿದ ವಿದ್ಯುತ್ ಜನರೇಟರ್‌ನ ಪ್ರಯೋಜನವನ್ನು ಸಹ ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ.

ಪರೀಕ್ಷಾ ಅಧೀಕ್ಷಕರಿಂದ ವಿವರಣೆ ಕೇಳಲಾಗಿದ್ದು, ಅದನ್ನು ಈಗಾಗಲೇ ಅವರು ಸಲ್ಲಿಸಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲರಾದ ವಿ ಅನಿಲ್ ತಿಳಿಸಿದ್ದಾರೆ. ''ಅಧೀಕ್ಷಕರು ನೀಡಿರುವ ವಿವರಣೆಯನ್ನು ಬುಧವಾರ ನಡೆಯುವ ಪರೀಕ್ಷಾ ಸ್ಥಾಯಿ ಸಮಿತಿ ಸಭೆಯಲ್ಲಿ ವಿಶ್ಲೇಷಿಸಲಾಗುವುದು. ಪರೀಕ್ಷೆ ರದ್ದತಿ, ಮೇಲ್ವಿಚಾರಕರ ವಿರುದ್ಧ ಶಿಸ್ತು ಕ್ರಮದಂತಹ ಕ್ರಮಗಳನ್ನು ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗುವುದು.ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು"ಅವರು ಹೇಳಿದರು.

ಆದರೆ, ಇದರ ಪರಿಣಾಮ ಇನ್ವಿಜಿಲೇಟರ್‌ಗಳನ್ನು ಬಲಿಪಶುಗಳನ್ನಾಗಿ ಮಾಡಲಾಗುವುದು ಎಂದು ಉಪನ್ಯಾಸಕರೊಬ್ಬರು ತಿಳಿಸಿದರು. ಅನಾಮಧೇಯರಾಗಿ ಉಳಿಯಲು ಬಯಸಿದ ಉಪನ್ಯಾಸಕರ ಪ್ರಕಾರ, ಕಾಲೇಜಿಗೆ ಹೈಟೆನ್ಷನ್ ಲೈನ್ ಸ್ಥಾಪಿಸಲು ರೂಸಾ (ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ) ನಿಧಿಯಲ್ಲಿ 54 ಲಕ್ಷ ರೂ.ಗಳನ್ನು ಬಳಸಿದಾಗ ಈ ಪರಿಸ್ಥಿತಿ ಸಂಭವಿಸಿದೆ. ‘ಎಚ್‌ಟಿ ಲೈನ್‌ನಿಂದ ಕಾಲೇಜಿನ ವಿದ್ಯುತ್‌ ವ್ಯತ್ಯಯಕ್ಕೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಪರೀಕ್ಷೆ ವೇಳೆ ಉಲ್ಟಾ ಆಯಿತು. ಜನರೇಟರ್‌ನಂತಹ ಸ್ಟ್ಯಾಂಡ್‌ಬೈ ವ್ಯವಸ್ಥೆ ಮಾಡುವ ಬದಲು ಅಧಿಕಾರಿಗಳು ಲೋಪ ಎಸಗಿದ್ದಾರೆ’ ಎಂದು ಮತ್ತೊಬ್ಬ ಉಪನ್ಯಾಸಕರು ಆರೋಪಿಸಿದ್ದಾರೆ.

ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೀಶೋ 150 ಉದ್ಯೋಗಿಗಳು ವಜಾ

"ವಿದ್ಯುತ್ ಸಮಸ್ಯೆ ಪರಿಸ್ಥಿತಿಯನ್ನು ಸರಿಪಡಿಸಲು ಇನ್ವಿಜಿಲೇಟರ್‌ಗಳು ಸ್ವತಃ ಕೆಎಸ್‌ಇಬಿಗೆ ಕರೆ ಮಾಡಬೇಕಾದ ಪರಿಸ್ಥಿತಿಯನ್ನು ನೀವು ಊಹಿಸಬಹುದೇ?" ಎಂದು ಉಪನ್ಯಾಸಕರು ಪ್ರಶ್ನೆ ಮಾಡಿದ್ದಾರೆ. ‘ಶಿಕ್ಷಕರು ಪರೀಕ್ಷಾ ಅಧೀಕ್ಷಕರನ್ನು ಸಂಪರ್ಕಿಸಿದಾಗ ಮೊಬೈಲ್‌ಗೆ ಅವಕಾಶ ನೀಡುವಂತೆ ತಿಳಿಸಿದರು’ ಎಂದು ಉಪನ್ಯಾಸಕರು ಹೇಳಿದ್ದಾರೆ. ‘ನಮ್ಮದು ಸ್ವಾಯತ್ತ ಕಾಲೇಜಾಗಿದ್ದು, ಪರೀಕ್ಷಾ ವೇಳಾಪಟ್ಟಿ ಹಾಗೂ ಪ್ರಶ್ನೆಪತ್ರಿಕೆಗಳನ್ನು ನಿಗದಿ ಪಡಿಸಿ, ಸಭಾಂಗಣದೊಳಗೆ ಮೊಬೈಲ್‌ ಬಳಕೆಗೆ ಅವಕಾಶ ನೀಡುವ ಬದಲು ಅಧಿಕಾರಿಗಳು ಪರೀಕ್ಷೆ ರದ್ದು ಮಾಡಬಹುದಿತ್ತು, ಶೈಕ್ಷಣಿಕ ವಲಯದಲ್ಲಿ ನಾವು ನಗೆಪಾಟಲಿಗೀಡಾಗಿದ್ದೇವೆ’ ಎಂದು ಸಹಾಯಕ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ.

ಶಾಓಮಿ ಅವ್ಯವಹಾರ ತನಿಖೆ: ಗ್ಲೋಬಲ್ ಉಪಾಧ್ಯಕ್ಷ ಮನು ಕುಮಾರ್ ಜೈನ್‌ಗೆ ED ಸಮನ್ಸ್‌ ?

ಪರೀಕ್ಷೆಗಳ ಮೇಲ್ವಿಚಾರಣೆ ವಹಿಸಿದ್ದ ಪಿಪಿ ರಮೇಶ್ ಈ ಬಗ್ಗೆ ಮಾತನಾಡಿದ್ದು, ಮೊಬೈಲ್ ಫೋನ್ ಟಾರ್ಚ್ ಗಳನ್ನು ಅಲ್ಪಾವಧಿಗೆ ಮಾತ್ರ ಬಳಸಲಾಗಿದೆ. ''ಮೊಬೈಲ್‌ ಬ್ಯಾಟರಿ ಬಳಸಿ ವಿದ್ಯಾರ್ಥಿಗಳು ಸಂಪೂರ್ಣ ಪರೀಕ್ಷೆ ಬರೆದಿದ್ದಾರೆ ಎನ್ನುವ ಆರೋಪ ಸರಿಯಲ್ಲ, ಬೆಳಗ್ಗೆ 10 ಗಂಟೆ ಸುಮಾರಿಗೆ ವಿದ್ಯುತ್‌ ವ್ಯತ್ಯಯ ಉಂಟಾಗಿದೆ. ಇದು ಎಚ್‌ಟಿ ಸಂಪರ್ಕವಾಗಿರುವುದರಿಂದ ಕೆಎಸ್‌ಇಬಿ ಇಂಜಿನಿಯರ್‌ಗಳು ಸಮಸ್ಯೆ ಬಗೆಹರಿಸುವ ಹೊಣೆ ಹೊತ್ತಿಲ್ಲ. ಟ್ರಾನ್ಸ್‌ಫಾರ್ಮರ್‌ನೊಂದಿಗೆ, ನಾವು ಪಿಡಬ್ಲ್ಯೂಡಿ ಎಂಜಿನಿಯರ್‌ಗಳಿಗೆ ಕರೆ ಮಾಡಬೇಕಾಗಿತ್ತು. ಆ ಕಡಿಮೆ ಅವಧಿಯಲ್ಲಿ, ವಿದ್ಯಾರ್ಥಿಗಳು ತಮ್ಮ ವಿವರಗಳನ್ನು ಉತ್ತರ ಪತ್ರಿಕೆಗಳ ಮುಖಪುಟದಲ್ಲಿ ನಮೂದಿಸಲು ಮೊಬೈಲ್ ಫೋನ್‌ಗಳನ್ನು ಬಳಸಲು ಅನುಮತಿಸಲಾಗಿತ್ತು ”ಎಂದು ಅವರು ಹೇಳಿದ್ದಾರೆ.

Latest Videos
Follow Us:
Download App:
  • android
  • ios