Asianet Suvarna News Asianet Suvarna News

ದಿಲ್ಲೀಲಿ ಮಾತ್ರ ಸುಪ್ರೀಂ ಪೀಠ ಇತತರಿಗೆ ಅನ್ಯಾಯ: ಮದ್ರಾಸ್‌ ‘ಹೈ’ ಜಡ್ಜ್‌!

* ದೆಹಲಿಯಲ್ಲಿ ಮಾತ್ರ ಸುಪ್ರೀಂಕೋರ್ಟ್‌ ಇರುವುದರಿಂದ ಹಲವರಿಗೆ ಅನ್ಯಾಯ

* ಸುಪ್ರೀಂಕೋರ್ಟ್‌ ದೇಶದೆಲ್ಲೆಡೆ ಪ್ರಾದೇಶಿಕ ಪೀಠ ತೆರೆಯುವ ನಿಟ್ಟಿನಲ್ಲಿ ಪರಿಶೀಲಿಸಬೇಕು

* ಮದ್ರಾಸ್‌ ಹೈಕೋರ್ಟ್‌ನಿಂದ ನಿವೃತ್ತರಾಧ ನ್ಯಾಯಾಧೀಶ ನ್ಯಾ| ಎನ್‌.ಕಿರುಬಾಕರನ್‌

In farewell speech Madras HC judge says injustice to have Supreme Court only in Delhi pod
Author
Bangalore, First Published Aug 21, 2021, 2:58 PM IST

ಚೆನ್ನೈ: ದೆಹಲಿಯಲ್ಲಿ ಮಾತ್ರ ಸುಪ್ರೀಂಕೋರ್ಟ್‌ ಇರುವುದರಿಂದ ರಾಜಧಾನಿಯ ಸುತ್ತ ಮುತ್ತ ವಾಸಿಸುತ್ತಿಲ್ಲದ ಜನರಿಗೆ ಅನ್ಯಾಯವಾಗುತ್ತಿದೆ. ಸುಪ್ರೀಂಕೋರ್ಟ್‌ ದೇಶದೆಲ್ಲೆಡೆ ಪ್ರಾದೇಶಿಕ ಪೀಠ ತೆರೆಯುವ ನಿಟ್ಟಿನಲ್ಲಿ ಪರಿಶೀಲಿಸಬೇಕು ಎಂದು ಮದ್ರಾಸ್‌ ಹೈಕೋರ್ಟ್‌ನಿಂದ ನಿವೃತ್ತರಾಧ ನ್ಯಾಯಾಧೀಶ ನ್ಯಾ| ಎನ್‌.ಕಿರುಬಾಕರನ್‌ ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂಕೋರ್ಟ್‌ ದೆಹಲಿಯಲ್ಲಿ ಮಾತ್ರ ಇರುವುದರಿಂದ ಬಹಳಷ್ಟುಜನರಿಗೆ ನ್ಯಾಯ ದೊರಕಿಸಿಕೊಳ್ಳುವುದು ಕಷ್ಟವಾಗಿದೆ. ಪ್ರಾದೇಶಿಕ ಪೀಠ ರಚಿಸಲು ಸುಪ್ರೀಂಕೋರ್ಟ್‌ನ ಆಡಳಿತ ವಿಭಾಗ ನಿರಾಕರಿಸಿದೆ.

ಈ ನಿರ್ಧಾರ ಪುನರ್‌ಪರಿಶೀಲಿಸಬೇಕ. ಕೋರ್ಟ್‌ ಈ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಿ ಇದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಅವರು ಹೇಳಿದರು.

Follow Us:
Download App:
  • android
  • ios