* ಯು.ಪಿಯಲ್ಲಿ ತಲೆಗೆ ನೀರಿನ ಬದಲು, ಎಂಜಲು ಉಗಿದ* ಕೇಶ ವಿನ್ಯಾಸಕಾರ: ವಿವಾದ

ನವದೆಹಲಿ(ಜ. 07): ಕೇಶ ವಿನ್ಯಾಸಕಾರನೋರ್ವ ಮಹಿಳೆಯ ತಲೆಗೆ ನೀರು ಸಿಂಪಡಿಸುವ ಬದಲು ಎಂಜಲು(ಉಗಿದಿರುವ) ಘಟನೆ ಉತ್ತರ ಪ್ರದೇಶದ ಮುಜಾಫ್ಫರನಗರದಲ್ಲಿ ನಡೆದಿದೆ. ಈ ಘಟನೆ ವಿವಾದದ ಸ್ವರೂಪ ಪಡೆದಿದ್ದು, ಕೇಶ ವಿನ್ಯಾಸಕಾರನ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಶಾದ್ಯಂತ 115 ನಗರಗಳಲ್ಲಿ 850 ಸಲೂನ್‌ಗಳನ್ನು ನಡೆಸುತ್ತಿರುವ ಕೇಶ ವಿನ್ಯಾಸಕಾರ ಜಾವೇದ್‌ ಹಬೀಬ್‌, ಇತ್ತೀಚೆಗೆ ಮುಜಾಫ್ಫರನಗರದಲ್ಲಿ ಕೇಶವಿನ್ಯಾಸದ ಕುರಿತು ಕಾರ್ಯಗಾರ ನಡೆಸಿದ್ದ. ಈ ವೇಳೆ ಪೂಜಾ ಗುಪ್ತಾ ಎಂಬ ಮಹಿಳೆಗೆ ಕೇಶವಿನ್ಯಾಸ ಮಾಡುವಾಗ ನೀರು ಇಲ್ಲದಿದ್ದರೆ, ಎಂಜಲನ್ನು ಉಪಯೋಗಿಸಿ ಎಂದು ಹೇಳಿ ಉಗಿದಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

Scroll to load tweet…

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಹಬೀಬ್‌ ಕೃತ್ಯವನ್ನು ಖಂಡಿಸಿದೆ. ಈ ಕೃತ್ಯವು ವಿಪತ್ತು ನಿರ್ವಹಣಾ ಕಾಯ್ದೆಯ ಉಲ್ಲಂಘನೆಯಾಗಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶ ಪೊಲೀಸರಿಗೆ ಆಗ್ರಹಿಸಿದೆ.