Asianet Suvarna News Asianet Suvarna News

IAS ಟಾಪರ್‌ ದಂಪತಿ ಟೀನಾ ದಾಬಿ, ಅತರ್ ಆಮೀರ್ ಖಾನ್ ಡೈವೋರ್ಸ್‌!

* ದೇಶದ ಐಎಎಸ್‌ ಟಾಪರ್‌ ದಂಪತಿ ವಿಚ್ಛೇದನ

* ಅಧಿಕೃತವಾಗಿ ವಿಚ್ಛೇದನ ಪಡೆದ ಟೀನಾ ದಾಬಿ ಹಾಗೂ ಅತರ್ ಆಮಿರ್ ಖಾನ್ 

* ಮದುವೆಯಾದ ಕೇವಲ ಎರಡೇ ವರ್ಷಗಳಲ್ಲಿ ಕೊನೆಕಂಡ ಸಂಬಂಧ

IAS toppers Tina Dabi Athar Khan granted divorce by Jaipur family court pod
Author
Bangalore, First Published Aug 11, 2021, 5:45 PM IST
  • Facebook
  • Twitter
  • Whatsapp

ಜೈಪುರ(ಆ.11): ಟೀನಾ ದಾಬಿ ಹಾಗೂ ಅತರ್ ಆಮಿರ್ ಖಾನ್ ಭಾರತದ ಟಾಪರ್ ಐಎಎಸ್ ದಂಪತಿ ಅಧಿಕೃತವಾಗಿ ವಿಚ್ಚೇದನ ಪಡೆದಿದ್ದಾರೆ. ಜೈಪುರದ ಕೌಟುಂಬಿಕ ನ್ಯಾಯಾಲಯ ಇವರಿಬ್ಬರ ವಿವಾಹ ವಿಚ್ಛೇದನಕ್ಕೆ ಅನುಮತಿ ನೀಡಿದೆ. ಟೀನಾ ಹಾಗೂ ಆಮಿರ್‌ ಪರಸ್ಪರ ಒಪ್ಪಿಗೆ ಮೇರೆಗೆ ಕಳೆದ ವರ್ಷ ನವೆಂಬರ್‌ನಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮದುವೆಯಾದ ಕೇವಲ ಎರಡೇ ವರ್ಷಗಳಲ್ಲಿ ಈ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿತ್ತು. 

2015ರ ಐಎಎಸ್‌ ಟಾಪರ್‌ ವಿವಾಹ ವಿಚ್ಛೇದನಕ್ಕೆ ಅರ್ಜಿ!

2015ರ UPSC ಪರೀಕ್ಷೆಯಲ್ಲಿ ಟೀನಾ ದಾಬಿ ದೇಶಕ್ಕೇ ಮೊದಲ ಸ್ಥಾನ ಪಡೆದಿದ್ದರೆ, ಅತ್ತ ಅತರ್ ಖಾನ್ ಅದೇ ಸಾಲಿನಲ್ಲಿ ಎರಡನೇ ಸ್ಥಾನ ಪಡೆದಿದ್ದರು ಎಂಬುವುದು ಉಲ್ಲೇಖನೀಯ. ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಬಳಿಕ ಪರಸ್ಪರ ಎರಡೂ ಕುಟುಂಬಸ್ಥರ ಅನುಮತಿ  ಪಡೆದು ಮದುವೆಯಾಗಿದ್ದರು. 

2018ರಲ್ಲಿ ನಡೆದಿದ್ದ ಇವರ ಮದುವೆಯಲ್ಲಿ ದೇಶದ ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳು ಭಾಗವಹಿಸಿದ್ದರು. ಿದು ಅಂತರ್ಜಾತೀಯ ವಿವಾಹವಾಗಿದ್ದರಿಂದ ಮದುವೆ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಲವ್ ಜಿಹಾದ್ ಕೂಗು ಕೂಡಾ ಎದ್ದಿತ್ತು. 

ಐಎಎಸ್‌ನ ರಾಜಸ್ಥಾನ ಕೇಡರ್‌ನಲ್ಲಿ ಟೀನಾ ಮತ್ತು ಅಥರ್‌ರನ್ನು ನಿಯೋಜಿಸಲಾಗಿತ್ತು. ಆರಂಭದಲ್ಲಿ ಇಬ್ಬರೂ ಒಂದೇ ನಗರದಲ್ಲಿದ್ದರೂ, ಬಳಿಕ ಟೀನಾರನ್ನು ಶ್ರೀ ಗಂಗಾನಗರಕ್ಕೆ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿತ್ತು. ಅತ್ತ ಅಥರ್‌ರನ್ನು ಜೈಪುರದ ಜಿಲ್ಲಾ ಪರಿಷತ್ತಿನ ಸಿಇಒ ಆಗಿ ನೇಮಕಗೊಳಿಸಲಾಗಿತ್ತಿ. ಆರಂಭದಲ್ಲಿ ಪ್ರೀತಿಯಿಂದ ಇದ್ದ ಈ ಜೋಡಿ ಬಾಳಲ್ಲಿ ಬಿರುಕು ಮೂಡಿತ್ತು. 

Follow Us:
Download App:
  • android
  • ios