ಅಂದು ಸುನಾಮಿಯಿಂದ ಪಾರಾದ ಬಾಲಕಿ ಈಗ ಮಧುವಣಗಿತ್ತಿ... ಅನಾಥೆಯ ಮದುವೆಗೆ ನೆರವಾದ ಐಎಎಸ್‌ ಅಧಿಕಾರಿ

  • ಸುನಾಮಿ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡಿದ್ದ ಐದು ವರ್ಷದ ಬಾಲಕಿ
  • ಈಗ 22ರ ಹರೆಯಕ್ಕೆ ಕಾಲಿರಿಸಿದ ಸೌಮ್ಯಾಗೆ ವಿವಾಹಯೋಗ
  • ಸೌಮ್ಯಾ ವಿವಾಹದ ನೇತೃತ್ವ ವಹಿಸಿದ ಐಎಎಸ್ ಅಧಿಕಾರಿ
IAS officer solemnises wedding of tsunami survivor he helped in 2004 akb

2004ರಲ್ಲಿ ಸಾವಿರಾರು ಜನರ ಸಾವು ನೋವಿಗೆ ಕಾರಣವಾದ ಸುನಾಮಿ ದುರಂತ ಯಾರಿಗೆ ತಾನೆ ನೆನಪಿಲ್ಲ. ಆ ದುರಂತದಲ್ಲಿ ಅಪ್ಪ ಅಮ್ಮನ ಕಳೆದುಕೊಂಡಿದ್ದ ಐದು ವರ್ಷದ ಬಾಲಕಿ ಈಗ ಬೆಳೆದು ನಿಂತ ಯುವತಿಯಾಗಿದ್ದು, ಅಂದು ಆಕೆಗೆ ನೆರವಾಗಿದ್ದ ಐಎಎಸ್ ಅಧಿಕಾರಿಯೊಬ್ಬರು ಇಂದು ಆಕೆಯ ಮದುವೆಯ ಮೇಲುಸ್ತುವಾರಿ ವಹಿಸಿ ಆಕೆಯ ಹೊಸ ಬಾಳಿಗೆ ಶುಭಹಾರೈಸಿದರು.

ಆಕೆಯ ಹೆಸರು ಸೌಮ್ಯ, ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ನಿವಾಸಿಯಾದ ಆಕೆ 17 ವರ್ಷಗಳ ಹಿಂದೆ ಎದುರಾದ ಸುನಾಮಿ ದುರಂತದಲ್ಲಿ ತನ್ನ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದಳು. ಈಗ ಆಕೆಗೆ ವಿವಾಹ ಯೋಗ ಕೂಡಿ ಬಂದಿದ್ದು, ಸೌಮ್ಯಾಳ ವಿವಾಹ ಸಮಾರಂಭದ ನೇತೃತ್ವವನ್ನು ತಮಿಳುನಾಡು ಆರೋಗ್ಯ ಕಾರ್ಯದರ್ಶಿಯೂ ಆಗಿರುವ ಐಎಎಸ್ ಅಧಿಕಾರಿ ಜೆ .ರಾಧಾಕೃಷ್ಣನ್ ವಹಿಸಿದ್ದರು.

ವೇಲಂಕಣಿಯಲ್ಲಿ(Radhakrishnan) ಅವಶೇಷಗಳಡಿ  ಪತ್ತೆಯಾದಾಗ ಸೌಮ್ಯಾಗೆ (Sowmya) ಕೇವಲ 5 ವರ್ಷ ವಯಸ್ಸಾಗಿತ್ತು. ಆ ಸಂದರ್ಭದಲ್ಲಿ ಅನಾಥಳಾಗಿದ್ದ ಆಕೆಯನ್ನು ತಮಿಳುನಾಡು ರಾಜ್ಯ ಸರ್ಕಾರವು ಪ್ರಾರಂಭಿಸಿದ ಅನಾಥಾಶ್ರಮವಾದ ಅನ್ನೈ ಸತ್ಯ ಸರ್ಕಾರಿ ಗೃಹಕ್ಕೆ (Annai Sathya Government Home) ಸ್ಥಳಾಂತರಿಸಲಾಗಿತ್ತು. ಅಲ್ಲಿ ರಾಧಾಕೃಷ್ಣನ್ (Radhakrishnan) ಅವರು ಆಕೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. 

2004ರ ಸುನಾಮಿ ಅಲೆಯಿಂದ ಪಾರಾಗಿದ್ದ ಅನಿಲ್ ಕುಂಬ್ಳೆ!

ರಾಧಾಕೃಷ್ಣನ್ ಅವರು ನಾಗಪಟ್ಟಣಂಗೆ ಭೇಟಿ ನೀಡಿದಾಗಲೆಲ್ಲ ಈ ಸರ್ಕಾರಿ ವಸತಿ ಗೃಹಕ್ಕೆ ಬಂದು ಅಲ್ಲಿರುವ ಎಲ್ಲಾ ಮಕ್ಕಳನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು ಎಂದು ಆ ಮನೆಯ ಉಸ್ತುವಾರಿ ವಹಿಸಿದ್ದ ಶಿಕ್ಷಕರು ಮತ್ತು ಸೂಪರಿಂಟೆಂಡೆಂಟ್ ಹೇಳಿದ್ದಾರೆ. ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆ ಸುನಾಮಿಯಿಂದ ಅತ್ಯಂತ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಲ್ಲಿ ಒಂದಾಗಿತ್ತು. ಈ ದುರಂತದಲ್ಲಿ ತಮ್ಮ ಹೆತ್ತವರನ್ನು ಕಳೆದುಕೊಂಡ ಅನೇಕ ಮಕ್ಕಳಲ್ಲಿ ಸೌಮ್ಯಾ ಕೂಡ ಒಬ್ಬಳಾಗಿದ್ದಾಳೆ. 

ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಸೌಮ್ಯಾ ಎಡಿಎಂ ಮಹಿಳಾ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ ಅಧ್ಯಯನ ಮಾಡಲು ಮನೆಯನ್ನು ತೊರೆದಿದ್ದಳು. ಈಕೆಯ ಶಿಕ್ಷಣಕ್ಕೆ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ಮಲರ್ವಿಜಿ (Malarvizhi) ಮತ್ತು ದಿವಂಗತ ಸಾಮಾಜಿಕ ಕಾರ್ಯಕರ್ತೆ ಸೂರ್ಯಕಲಾ (Suriyakala) ಅವರು ಪ್ರೋತ್ಸಾಹಿಸಿದ್ದರು ಎಂದು  ಮಾಧ್ಯಮವೊಂದು ವರದಿ ಮಾಡಿದೆ.

ಇದೀಗ 22ರ ಹರೆಯದ ಇವರು ಭಾನುವಾರ ಕೆ ಸುಭಾಷ್ (K Subhash) ಅವರನ್ನು ವಿವಾಹವಾಗಿದ್ದಾರೆ. ಆಕೆಯ ಮಾಜಿ ಪೋಷಕರಾದ ರಾಧಾಕೃಷ್ಣನ್ ಅವರು ಈ ಮದುವೆಯ ನೇತೃತ್ವ ವಹಿಸಿದ್ದರು ಮತ್ತು ದಂಪತಿಗಳಿಗೆ ಮಂಗಳಸೂತ್ರವನ್ನು ನೀಡಿದರು. ಮದುವೆಯ ಫೋಟೋಗಳು ಮತ್ತು ವೀಡಿಯೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸೌಮ್ಯಾ ನಮ್ಮ ಮಗಳು ಮಾತ್ರವಲ್ಲ ನಾಗಪಟ್ಟನಂನ ಮಗಳು. ಅವಳು ಮದುವೆಯಾಗುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ ಮತ್ತು ಭಾವನಾತ್ಮಕವಾಗಿದೆ ಎಂದು ರಾಧಾಕೃಷ್ಣನ್ ಮಾಧ್ಯಮಗಳಿಗೆ ತಿಳಿಸಿದರು.

ಟರ್ಕಿಯಲ್ಲಿ ಭೀಕರ ಸುನಾಮಿ; 14 ಮಂದಿ ಸಾವು, 400 ಕ್ಕೂ ಹೆಚ್ಚು ಮಂದಿಗೆ ಗಾಯ

2004 ರಲ್ಲಿ ಹಿಂದೂ ಮಹಾಸಾಗರದಲ್ಲಿ ( Indian Ocean) ಹುಟ್ಟಿಕೊಂಡ  ಸುನಾಮಿ ಇಂಡೋನೇಷ್ಯಾ, ಭಾರತ, ಶ್ರೀಲಂಕಾ ಮತ್ತು ಇತರ 14 ದೇಶಗಳಲ್ಲಿ ವಿನಾಶವನ್ನು ಉಂಟು ಮಾಡಿತ್ತು. ಡಿಸೆಂಬರ್ 26, 2004 ರಂದು ಸುನಾಮಿ ವ್ಯಾಪಿಸಿದ ಎಲ್ಲಾ ದೇಶಗಳನ್ನು ಸೇರಿ ಸುಮಾರು  2,30,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.  ಇಂಡೋನೇಷ್ಯಾದಲ್ಲಿ  ಹೆಚ್ಚಿನ ಸಂಖ್ಯೆಯ ಸಾವುನೋವುಗಳು ಸಂಭವಿಸಿದವು.  ಭಾರತದಲ್ಲಿ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳು ಹೆಚ್ಚು ಹಾನಿಗೊಳಗಾದವು. ಭಾರತದಲ್ಲಿ18,000 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.
 

Latest Videos
Follow Us:
Download App:
  • android
  • ios