ಪಾಕಿಸ್ತಾನದಿಂದ ಮರಳಿದ ವಾಯುಪಡೆ ಪೈಲಟ್ ಅಭಿನಂದನ್ ಗೆ ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತದೆ. 

ಶತ್ರು ರಾಷ್ಟ್ರದ ವಶದಲ್ಲಿದ್ದು ಬಂದ ವೀರ ಯೋಧ ಅಭಿನಂದನ್‌ ನಿಯಮಾನುಸಾರ ಕೆಲವು ಪರೀಕ್ಷೆಗಳನ್ನು ಎದುರಿಸಬೇಕಿದೆ. ಅವು ಇಂತಿವೆ.

1. ವಾಯುಪಡೆ ವಿಚಕ್ಷಣ ಘಟಕದಲ್ಲಿ ದೈಹಿಕ ಕ್ಷಮತೆ ಸೇರಿದಂತೆ ಹಲವು ರೀತಿಯ ವೈದ್ಯಕೀಯ ಪರೀಕ್ಷೆ

2. ಶತ್ರುರಾಷ್ಟ್ರದಲ್ಲಿ ಯಾವುದೇ ರೀತಿಯ ಹಿಂಸೆಗೆ ಒಳಗಾಗಿದ್ದಾರೆಯೇ ಎಂಬ ಬಗ್ಗೆ ಮಾನಸಿಕ ಪರೀಕ್ಷೆ

3. ವೈರಿಗೆ ನಮ್ಮ ದೇಶದ ಯಾವುದಾದರೂ ಗುಟ್ಟು ಬಿಟ್ಟುಕೊಟ್ಟಿದ್ದಾರೆಯೇ ಎಂದು ಮಾನಸಿಕ ಪರೀಕ್ಷೆ

4. ಶತ್ರುರಾಷ್ಟ್ರದ ರಹಸ್ಯ ವಿಚಾರವೇನಾಗಿದ್ದರೂ ಗೊತ್ತಾಗಿದ್ದರೆ ತಿಳಿಸುವಂತೆ ವಾಯುಪಡೆ ಪ್ರಶ್ನಾವಳಿ

5. ಹೆಚ್ಚಿನ ವಿಚಾರಣೆಗೆ ಗುಪ್ತಚರ ದಳ, ರಾ ವಶಕ್ಕೂ ನೀಡಬಹುದು. ಆದರೆ, ಈ ಸಾಧ್ಯತೆ ಕಡಿಮೆ