1. ಮತ್ತಷ್ಟುಪ್ರತೀಕಾರ: ಈಗ ನಡೆದಿರುವುದು ಸ್ಯಾಂಪಲ್‌ ಮಾತ್ರ. ಜೈಷ್‌ ಮುಖ್ಯಸ್ಥ ಸೇರಿದಂತೆ ಉಗ್ರ ಸಂಘಟನೆ ಪಾಕ್‌ನಲ್ಲಿನ್ನೂ ಸಕ್ರಿಯವಾಗಿದೆ. ಭಾರತ ಮತ್ತಷ್ಟುದಾಳಿ ನಡೆಸಬಹುದು

2. ಪ್ರತಿದಾಳಿಗೆ ಸಿದ್ಧತೆ: ಭಾರತ ನಡೆಸಿದ ವಾಯು ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ನಡೆಸಬಹುದಾದ ಸಂಭಾವ್ಯ ಪ್ರತಿದಾಳಿಯನ್ನು ನಿಷ್ಫಲಗೊಳಿಸಲು ಸಕಲ ರೀತಿಯ ಸಿದ್ಧತೆ ಮುಂದುವರಿಸಬಹುದು

3. ಯುದ್ಧಕ್ಕೂ ರೆಡಿ: ಪಾಕಿಸ್ತಾನವೇನಾದರೂ ಭಾರತದೊಳಕ್ಕೆ ನುಸುಳಿ ಹೊಡೆಯುವ ದುಸ್ಸಾಹಸ ತೋರಿದ್ದೇ ಆದಲ್ಲಿ ಪೂರ್ಣಪ್ರಮಾಣದ ಯುದ್ಧ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಬಹುದು

4. ಉಗ್ರ ದಮನ: ಪಾಕಿಸ್ತಾನ ಉಗ್ರರ ಮೂಲಕ ಭಾರತದಲ್ಲಿ ಹಿಂಬಾಲಿನ ಪ್ರತೀಕಾರಕ್ಕೆ ಮುಂದಾಗಬಹುದು. ಅದಕ್ಕಾಗಿ ಎಲ್ಲೆಡೆ ಕಟ್ಟೆಚ್ಚರ. ಉಗ್ರರ ಪ್ರಯತ್ನವನ್ನು ವಿಫಲಗೊಳಿಸಲು ಅಗತ್ಯ ಕ್ರಮ

5. ರಾಜತಾಂತ್ರಿಕ: ತನ್ನ ಮೇಲೆ ಉಗ್ರ ದಾಳಿ ತಪ್ಪಿಸಲು ತಾನು ಉಗ್ರರ ಮೇಲೆ ದಾಳಿ ನಡೆಸಿದ್ದು, ಪಾಕ್‌ ಮೇಲಲ್ಲ ಎಂದು ರಾಜತಾಂತ್ರಿಕವಾಗಿ ಪ್ರತಿಪಾದಿಸಿ ವಿಶ್ವ ಸಮುದಾಯದ ಬೆಂಬಲ ಗಳಿಸಬಹುದು