Asianet Suvarna News Asianet Suvarna News

'ಕಿಸಾನ್ ಸಮ್ಮಾನ್ ಹಣ ನನಗೆ ಬೇಡ' ಪ್ರಧಾನಿಗೆ ಪತ್ರ ಬರೆದ ಶಿಕಾರಿಪುರದ ರೈತ!

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಬರುತ್ತಿರುವ ಧನ ಸಹಾಯ ತಿರಸ್ಕರಿಸಿ ಪ್ರಧಾನಮಂತ್ರಿ ಮೋದಿಗೆ ಪತ್ರ/ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಅಂಬಾರಗೊಪ್ಪ ಗ್ರಾಮದ ಯುವ ರೈತ ಸಂದೇಶ್/ ಈ ಯೋಜನೆಯಡಿ ಕೇಂದ್ರ ಸರ್ಕಾರದಿಂದ ವಾರ್ಷಿಕವಾಗಿ 6 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 4 ಸಾವಿರ ಒಟ್ಟು 10 ಸಾವಿರ ಹಣ ರೈತನ ಅಕೌಂಟ್ ಗೆ ಹೊಗುತಿತ್ತು/ ಆದ್ರೆ ಈ ಯೋಜನೆಯಡಿ ಇನ್ಮುಂದೆ ನನ್ನ ಅಕೌಂಟ್ ಗೆ  ಹಣ ಸಂದಾಯವಾಗುವುದು ಬೇಡ

I Do not want Kisan samman scheme money Shikaripura farmer letter to PM Modi mah
Author
Bengaluru, First Published Mar 23, 2021, 12:00 AM IST

ಶಿಕಾರಿಪುರ(ಮಾ. 22) ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಬರುತ್ತಿರುವ ಧನ ಸಹಾಯ ತಿರಸ್ಕರಿಸಿ ಪ್ರಧಾನಮಂತ್ರಿ ಮೋದಿಗೆ ಯುವ ರೈತ ಸಂದೇಶ್ ಪತ್ರ ಬರೆದಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಅಂಬಾರಗೊಪ್ಪ ಗ್ರಾಮದ ಯುವ ರೈತ ಸಂದೇಶ್ ಪತ್ರ ಬರೆದವರು.

ಈ ಯೋಜನೆಯಡಿ ಕೇಂದ್ರ ಸರ್ಕಾರದಿಂದ ವಾರ್ಷಿಕವಾಗಿ 6 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 4 ಸಾವಿರ ಒಟ್ಟು 10 ಸಾವಿರ ಹಣ ರೈತನ ಅಕೌಂಟ್ ಗೆ ಹೊಗುತಿತ್ತು..
ಆದ್ರೆ ಈ ಯೋಜನೆಯಡಿ ಇನ್ಮುಂದೆ ನನ್ನ ಅಕೌಂಟ್ ಗೆ ಹಣ ಸಂದಾಯವಾಗುವುದು ಬೇಡ..ಈ ಸೌಲಭ್ಯವನ್ನ ನಾನು ತ್ಯಜಿಸುತ್ತಿರೋದಾಗಿ ಪತ್ರ ಬರೆದು ತಿಳಿಸಿದ್ದಾರೆ.

ಎಲೆಕೋಸು ಹೊಲದಲ್ಲಿ ದನ ಮೇಯಿಸಿದ ರೈತ

ಪತ್ರದಲ್ಲಿ ಈ ಯೋಜನೆಯ ಹಣ ಯಾಕೆ ಬೇಡ ಎಂಬುದನ್ನು ತಿಳಿಸಿದ್ದಾರೆ. ರೈತರು ಉಪಯೋಗಿಸುತ್ತಿರುವ ಬೀಜ, ಗೊಬ್ಬರ, ಔಷಧಗಳು, ಕೃಷಿ ಸಲಕರಣೆಗಳು, ಕೃಷಿ ಯಂತ್ರೋಪಕರಣಗಳು ಹಾಗೂ‌ ನೀರಾವರಿಗೆ ಬಳಸುವ ಪೈಪ್ , ಮೋಟಾರುಗಳು ತೀವ್ರ ದೂಬಾರಿಯಾಗಿದೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗ್ತಿಲ್ಲ. ಕೃಷಿ ಸಲಕರಣೆಗಳ ಮೇಲೆ ವಿಧಿಸುತ್ತಿರುವ ತೆರಿಗೆಯನ್ನ ಮನ್ನ ಮಾಡಬೇಕು. ರೈತರು ಬೆಳದ ಬೆಲೆ ಸೂಕ್ತ ಮಾರುಕಟ್ಟೆ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ರೈತರು ಎದುರಿಸುತ್ತುರುವ ಆರ್ಥಿಕ ಸಂಕಷ್ಟಗಳನ್ನ ಹೊಗಲಾಡಿಸಲು ನುರಿತ ಅಧಿಕಾರಿಗಳ ನಿಯೋಗ ರಚಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿರುವ ಯುವ ರೈತ ಸಂದೇಶ್ ಶಿಕಾರಿಪುರ ತಾಲ್ಲೂಕಿನ ಕೃಷಿ  ಇಲಾಖೆ ಅಧಿಕಾರಿಯನ್ನ  ಖುದ್ದು ಭೇಟಿಯಾಗಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನಂಗೆ ಹಣ ಸಂದಾಯವಾಗುವುದು ಬೇಡ  ಎಂದು ಪತ್ರ ಕೊಟ್ಟು ಬಂದಿದ್ದಾರೆ.

I Do not want Kisan samman scheme money Shikaripura farmer letter to PM Modi mah

 

I Do not want Kisan samman scheme money Shikaripura farmer letter to PM Modi mah

Follow Us:
Download App:
  • android
  • ios