ಹೈದರಾಬಾದ್(ಏ.14): ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಮದ್ಯದಂಗಡಿಗಳು ಬಂದ್‌ ಆಗಿರುವುದರಿಂದ ಮದ್ಯವ್ಯಸನಿಗಳು ಸಮಸ್ಯೆಗೆ ಸಿಲುಕಿದ್ದಾರೆ. ಇದನ್ನು ಮನಗಂಡ ಇಲ್ಲಿನ ಓಲ್ಡ್‌ ಸಿಟಿ ಪ್ರದೇಶದ ವ್ಯಕ್ತಿಯೊಬ್ಬ ಮದ್ಯ ಸಿಗದೆ ಪರದಾಡುತ್ತಿದ್ದ ಕೆಲವರಿಗೆ ತನ್ನಲ್ಲಿದ್ದ ಮದ್ಯವನ್ನು ಭಾನುವಾರ ಉಚಿತವಾಗಿ ಹಂಚಿದ್ದಾನೆ.

ಮದ್ಯಪ್ರಿಯರಿಗೆ ಗುಡ್​ ನ್ಯೂಸ್​: ಏಪ್ರಿಲ್ 15ರಿಂದ ಸಿಗುತ್ತೆ ಎಣ್ಣೆ?

‘ನಿನ್ನೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದೆ. ಚಂಪಾಪೇಟ್‌ ಪ್ರದೇಶದಲ್ಲಿ ಮಹಿಳೆಯೊಬ್ಬಳು ಮದ್ಯ ಸಿಗದೆ ಮೂರ್ಛೆ ಬಂದು ಬಿದ್ದಿದ್ದಳು. ನಂತರ ಅವಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಮದ್ಯ ಸಿಗದೆ ಇನ್ನೂ ಅನೇಕ ವ್ಯಸನಿಗಳಿಗೆ ಹೀಗೇ ತೊಂದರೆಯಾಗಿದೆ. ನನ್ನ ಮನೆಯಲ್ಲಿ ಒಂದು ಬಾಟಲ್‌ ಮದ್ಯ ಇತ್ತು. ಅದನ್ನು ತಂದು ಇಂತಹ ಕೆಲವರಿಗೆ ಒಂದೊಂದು ಪೆಗ್‌ ಹಂಚಿದ್ದೇನೆ’ ಎಂದು ಕುಮಾರ್‌ ಎಂಬ ಈ ವ್ಯಕ್ತಿ ತಿಳಿಸಿದ್ದಾನೆ.

ಲಾಕ್‌ಡೌನ್‌ ನಿಯಮ ಉಲ್ಲಂಘಿಸುವುದಕ್ಕಾಗಿ ಹೀಗೆ ಮಾಡಿಲ್ಲ. ಜನರಿಗೆ ನೆರವಾಗುವ ಉದ್ದೇಶದಿಂದ ಮದ್ಯ ಹಂಚಿದ್ದೇನೆ ಎಂದೂ ಆತ ಹೇಳಿದ್ದಾನೆ.