Asianet Suvarna News Asianet Suvarna News

ಅಸ್ಸಾಂನಲ್ಲಿ ಸಿಎಂ ಯಾರು?: ಘೋಷಣೆ ಸಾಧ್ಯತೆ!

ಅಸ್ಸಾಂ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ| ಮುಖ್ಯಮಂತ್ರಿ ಯಾರೆಂಬುದು ಇನ್ನೂ ನಿಗೂಢ| ಮುಖ್ಯಮಂತ್ರಿ ಅಭ್ಯರ್ಥಿಗಳೆಸಿಕೊಂಡಿರುವ ಸರ್ಬಾನಂದ ಸೋನೋವಾಲ್‌ ಮತ್ತು ಹಿಮಂತ್‌ ಬಿಸ್ವಾ ಶರ್ಮಾ

Himanta Sarma Ahead In Assam Race Say Sources pod
Author
Bangalore, First Published May 9, 2021, 8:03 AM IST

ನವದೆಹಲಿ(ಮೇ.09):  ಅಸ್ಸಾಂನಲ್ಲಿ ಚುನಾವಣಾ ಫಲಿತಾಂಶ ಹೊರಬಿದ್ದು, ಬಿಜೆಪಿ ಜಯಭೇರಿ ಬಾರಿಸಿದ್ದರೂ ಮುಖ್ಯಮಂತ್ರಿ ಯಾರೆಂಬುದು ಇನ್ನೂ ನಿಗೂಢವಾಗಿದೆ.

ಈ ಬೆನ್ನಲ್ಲೇ ಮುಖ್ಯಮಂತ್ರಿ ಅಭ್ಯರ್ಥಿಗಳೆಸಿಕೊಂಡಿರುವ ಸರ್ಬಾನಂದ ಸೋನೋವಾಲ್‌ ಮತ್ತು ಹಿಮಂತ್‌ ಬಿಸ್ವಾ ಶರ್ಮಾ ಶನಿವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. ನಾಯಕರಿಬ್ಬರೂ ಬಿಜೆಪಿ ಹೈಕಮಾಂಡ್‌ನೊಂದಿಗೆ ಸುಮಾರು 4 ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ, ‘ಭಾನುವಾರ ಗುವಾಹಟಿಯಲ್ಲಿ ಬಿಜೆಪಿ ಶಾಸಕಾಂಗ ಸಭೆ ಕರೆಯಲಾಗಿದೆ. ಮುಂದಿನ ಸರ್ಕಾರ ಕುರಿತ ಎಲ್ಲಿಯೇ ಎಲ್ಲ ಪ್ರಶ್ನೆಗಳಿಗೆ ಉತ್ತರ ಲಭಿಸಲಿದೆ’ ಎಂದಿದ್ದಾರೆ.

Follow Us:
Download App:
  • android
  • ios