ಮುಂಬೈ(ಆ.01): ಭಾರತೀಯ ಹವಾಮಾನ ವಿಜ್ಞಾನ ವಿಭಾಗ ಮಹಾರಾಷ್ಟ್ರ ರಾಜಧಾನಿ ಮುಂಬೈ ಹಾಗೂ ರಾಜ್ಯದ ಇನ್ನಿತರ ಪ್ರದೇಶಗಳಲ್ಲಿ ಆಗಸ್ಟ್ 3 ರಿಂದ 5ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. 

ಈ ಸಮಯದಲ್ಲಿ ಮುಂಬೈ ಹೊರತುಪಡಿಸಿ ರಾಯ್ಘಡ, ರತ್ನಗಿರಿ, ಸಿಂಧುದುರ್ಗಾ, ಪುಣೆ, ಕೊಲ್ಹಾಪುರ, ಸಾಂಗ್ಲೀ, ಬೀಡ್, ಲಾತೂರ್ ಹಾಗೂ ಉಸ್ಮನಾಬಾದ್ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುತ್ತದೆ ಎನ್ನಲಾಗಿದೆ.

ನಾಪತ್ತೆಯಾಗಿದ್ದ ರಿಯಾ ಪ್ರತ್ಯಕ್ಷ, ವಿಡಿಯೋ ಮೆಸೇಜ್‌ನಲ್ಲಿ ಶಾಕಿಂಗ್ ಮಾಹಿತಿ!

ಐಎಂಡಿ ಮುನ್ಸೂಚನೆಯನ್ವಯ ನಾಂದೆಡ್, ಹಿಂಗೋಲಿ, ಪರ್ಭಣೀ, ಜಲ್ನಾ, ಸಾಂಗ್ಲೀ ಹಾಗೂ ಔರಂಗಾಬಾದ್‌ನಲ್ಲಿ ಆಗಸ್ಟ್ 5ರವರೆಗೂ ಮಳೆಯಾಗಲಿದೆ.

ಐಎಂಡಿ ಮುನ್ಸೂಚನೆಯಂತೆ ಹೆಚ್ಚು ಹಗೂ ಅತಿ ಹೆಚ್ಚು ಮಳೆ ಎಂದರೆ 24 ಗಂಟೆ ಅವಧಿಯಲ್ಲಿ 64.5 ಮಿ. ಮೀಟರ್‌ನಿಂದ  204.4 ಮಿ. ಮೀಟರ್‌ವರೆಗೆ ಮಳೆಯಾಗಬಹುದು.

ಈಗಾಗಲೇ ಕೊರೋನಾದಿಂದ ನಲುಗಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಿರುವಾಗ ಭಾರೀ ಮಳೆಯ ಮುನ್ಸೂಚನೆ ಮತ್ತೊಂದು ತಲೆನೋವಾಗಿ ಮಾರ್ಪಾಡಾಗುವುದರಲ್ಲಿ ಅನುಮಾನವಿಲ್ಲ.