ಹಾರ್ಟ್‌ಬ್ರೇಕ್ ಯುವಕನಿಂದ ಭರ್ಜರಿ ಆಫರ್, ಆಸಕ್ತರಿಗೆ ಉಚಿತವಾಗಿ ಸಿಯೋಲ್ ಟ್ರಿಪ್ ಟಿಕೆಟ್ ನೀಡುತ್ತಿದ್ದಾನೆ. ರೌಂಡ್ ಟ್ರಿಪ್ ಟಿಕೆಟ್ ಇದಾಗಿದೆ. ಇಬ್ಬರಿಗೆ ಸಿಯೋಲ್ ಪ್ರವಾಸಕ್ಕೆ ಅವಕಾಶವಿದೆ. ಕಂಡೀಷನ್ ಏನೂ ಇಲ್ಲ, ಕೇವಲ ನಿಮ್ಮ ಹೆಸರು ಮಾತ್ರ.

ನವದೆಹಲಿ (ನ.18) ಟ್ರಿಪ್ ಹೋಗಬೇಕು ಎಂದು ಯೋಚನೆ ಮಾಡಿದ್ದೀರಾ? ಹಾಗಾದರೆ ಎರಡು ಟಿಕೆಟ್ ಉಚಿತವಾಗಿ ಲಭ್ಯವಿದೆ. ರೌಂಡ್ ಟ್ರಿಪ್ ವಿಮಾನ ಟಿಕೆಟ್ ಸಂಪೂರ್ಣ ಉಚಿತ. ಇದು ಹಾರ್ಟ್‌ಬ್ರೇಕ್ ಯುವಕ ನೀಡುತ್ತಿರುವ ಆಫರ್. ಸಿಯೋಲ್ ಟ್ರಿಪ್ ಮಾಡಲು ಕನಿಷ್ಠ ಟಿಕೆಟ್ ಬೆಲೆ ಸರಿಸುಮಾರು 15,000 ರೂಪಾಯಿ. ಇಬ್ಬರಿಗೆ ರೌಂಡ್ ಟ್ರಿಪ್ ಅಂದರೆ ಕಡಿಮೆ ಬೆಲೆಯ ವಿಮಾನ ಟಿಕೆಟ್ ಬುಕ್ ಮಾಡಿದರೂ 60,000 ರೂಪಾಯಿ. ಎಂಗೇಜ್‌ಮೆಂಟ್ ಬೆನ್ನಲ್ಲೇ ಮುರಿದು ಬಿದ್ದ ಸಂಬಂಧದಿಂದ ಅತೀ ನೋವಿನಲ್ಲಿ ಯುವಕನ ನೀಡಿದ ಆಫರ್. ಏನಿದು ಘಟನೆ?

ಆಹಾ ನನ್ನ ಮದುವೆಯಂತೆ

ಈ ಘಟನೆ ಕುರಿತು ರೆಡ್ಡಿಟ್‌ನಲ್ಲಿ ಬಳೆಕೆದಾರ ಹೇಳಿಕೊಂಡಿದ್ದಾನೆ. ಮದುವೆಗೆ ಎಲ್ಲಾ ತಯಾರಿ ಮಾಡಿಕೊಂಡಿರುವಾಗಲೇ ಮದುವೆ ಮುರಿದು ಬಿದ್ದಿದೆ. ಇದರ ಬೆನ್ನಲ್ಲೇ ಈತ ರೆಡ್ಡಿಟ್ ಮೂಲಕ ತನ್ನ ನೋವಿನ ಜೊತೆಗೆ ಸಿಯೋಲ್ ಟ್ರಿಪ್ ಟಿಕೆಟ್ ಆಫರ್ ನೀಡಿದ್ದಾನೆ. ದೆಹಲಿ ಮೂಲದ ಆಶಿಶ್ ಗುಪ್ತಾ ಮದುವೆ ಗುರುಗಾಂವ್ ಹುಡುಗಿ ಜೊತೆ ಫಿಕ್ಸ್ ಆಗಿತ್ತು. ಎಂಗೇಜ್ಮೆಂಟ್ ಕೂಡ ಮುಗಿದಿತ್ತು. ಇಬ್ಬರು ಪರಸ್ಪರ ಭೇಟಿಯಾಗುತ್ತಿದ್ದರು, ಮಾತನಾಡುತ್ತಿದ್ದರು. ಎಲ್ಲವೂ ಸರಿಯಾದ ದಾರಿಯಲ್ಲೇ ನಡೆಯುತ್ತಿತ್ತು. ಕುಟುಬಂಸ್ಥರು, ಆಪ್ತರು ಸೇರಿದಂತೆ ಎಲ್ಲರಿಗೂ ಹೇಳಲಾಗಿತ್ತು. ಮದುವೆ ಹತ್ತಿರ ಬರುತ್ತಿದ್ದಂತೆ ಮಾತುಕತೆಯಲ್ಲಿ ಹನಿಮೂನ್ ವಿಚಾರವೂ ಬಂದಿದೆ.ಇಬ್ಬರು ಜೊತೆ ಸೇರಿ ಹನಿಮೂನ್ ಸ್ಥಳ ಕೂಡ ಫಿಕ್ಸ್ ಮಾಡಿದ್ದರು.

ಕಾಕ್‌ಟೈಲ್ ಪಾರ್ಟಿ ಬಳಿಕ ದಿಢೀರ್ ಯೂ ಟರ್ನ್

ಮದುವೆ ಹತ್ತಿರ ಬರುತ್ತಿದ್ದಂತೆ ಇಬ್ಬರು ಜೊತೆಯಾಗಿ ಕಾಕ್‌ಟೈಲ್ ಪಾರ್ಟಿಯೊಂದಕ್ಕೆ ತೆರಳಿದ್ದಾನೆ. ಇಬ್ಬರು ಪಾರ್ಟಿಯಲ್ಲಿ ಖುಷಿ ಖುಷಿಯಾಗಿ ಪಾಲ್ಗೊಂಡಿದ್ದರು. ಆದರೆ ಪಾರ್ಟಿ ಮುಗಿದ ಬೆನ್ನಲ್ಲೇ ಭಾವಿ ಪತ್ನಿ ದಿಢೀರ್ ಯೂ ಟರ್ನ್ ಹೊಡದಿದ್ದಾಳೆ. ಮದುವೆ ಇಷ್ಟವಿಲ್ಲ ಎಂದಿದ್ದಾಳೆ. ಕಾರಣ ಕೇಳಿದರೆ ತನಗೆ ಒಪನ್ ಮ್ಯಾರೇಜ್ ಇಷ್ಟ ಎಂದು ಹೇಳಿ ಹೊರಟು ಹೋಗಿದ್ದಾಳೆ. ನಮ್ಮ ಕುಟುಂಬ ಸಂಪ್ರದಾಯಸ್ಥ ಕುಟುಂಬ, ಅವರಿಗೆ ಒಪನ್ ಮ್ಯಾರೇಜ್ ಕುರಿತು ಹೇಗೆ ಹೇಳಲಿ, ಏನು ಮಾಡಲಿ ಎಂದು ಆಶಿಶ್ ಗುಪ್ತಾ ನೋವು ತೋಡಿಕೊಂಡಿದ್ದಾನೆ.

ನೋವಿನಲ್ಲೇ ಟಿಕೆಟ್ ಆಫರ್ ಮಾಡಿದ ಆಶಿಸ್ ಗುಪ್ತಾ

ಫಿಕ್ಸ್ ಆದ ಮದುವೆ ದಿಢೀರ್ ಮುರಿದ ಬಿದ್ದ ನೋವಿನಲ್ಲಿ ಆಶಿಶ್ ಗುಪ್ತಾ ಯಾರಾದರೂ ಆಸಕ್ತರು ಸಿಯೋಲ್‌ಗೆ ಟ್ರಿಪ್ ಹೋಗಲು ಇಷ್ಟಪಟ್ಟರೆ ಹೋಗಬಹುದು. ರೌಂಡ್ ಟ್ರಿಪ್ ಟಿಕೆಟ್ ಇದೆ ಎಂದಿದ್ದಾನೆ. ಕಾರಣ ಮದುವೆ ಹತ್ತಿರ ಬರುತ್ತಿದ್ದಂತೆ ಅಶಿಸ್ ಗುಪ್ತಾ ಹನಿಮೂನ್‌ಗಾಗಿ ಸಿಯೋಲ್‌ಗೆ ಟಿಕೆಟ್ ಬುಕ್ ಮಾಡಿದ್ದಾರೆ. ಸಿಯೋಲ್ ದಕ್ಷಿಣ ಕೊರಿಯಾದ ಸುಂದರ ತಾಣ. ಎರಡು ಟಿಕೆಟ್ ಬುಕ್ ಮಾಡಿದ್ದಾನ. ಇದೀಗ ಈ ಟಿಕೆಟ್‌ನಲ್ಲಿ ಯಾರಾದರು ಸಿಯೋಲ್‌ಗೆ ಹೋಗುವವರಿದ್ದರೆ ಹೋಗಬಹುದು. ಆದರೆೆ ನಿಮ್ಮ ಹೆಸರು ಆಶಿಶ್ ಆಗಿರಬೇಕು, ನಿಮಗೆ ಗರ್ಲ್‌ಫ್ರೆಂಡ್ ಇದ್ದರೆ ರಾಶಿ ಎಂದಿರಬೇಕು. ಇಷ್ಟೇ ಕಂಡೀಷನ್ ಎಂದು ಆಶಿಶ್ ಗುಪ್ತಾ ರೆಡ್ಡಿಟ್ ಮೂಲಕ ಹೇಳಿಕೊಂಡಿದ್ದಾರೆ. ಕಾರಣ ಆಶಿಶ್ ಹಾಗೂ ರಾಶಿ ಹೆಸರಲ್ಲಿ ಟಿಕೆಟ್ ಬುಕ್ ಆಗಿದೆ.

ಆಶಿಸ್‌ಗೆ ಸೋಲೋ ಟ್ರಿಪ್ ಹೋಗಲು ಹಲವರ ಮನವಿ

ಹೇಗೂ ಟಿಕೆಟ್ ಬುಕ್ ಮಾಡಿದ್ದೀರಿ, ನೀವೆ ಸೋಲೋ ಟ್ರಿಪ್ ಹೋಗಿ ರೀಫ್ರೆಶ್ ಆಗಿ ಬನ್ನಿ. ಮದುವೆ ಆಗಿಲ್ಲ ಎಂದು ಖಷಿಪಡಿ, ಮದುವೆ ಆದ ಬಳಿಕ ಹೀಗಾಗಿದ್ದರೆ ಗತಿ ಏನು ಎಂದು ಹಲವರು ಆಶಿಶ್ ಗುಪ್ತಾಗೆ ಸಮಾಧಾನ ಮಾಡಿದ್ದಾರೆ.