ನವದೆಹಲಿ[ಅ. 25] ಹರಿಯಾಣದಲ್ಲಿ ಅಂತಿಮವಾಗಿ ಕಮಲ ಅರಳಿದೆ.  ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲಿದ್ದು, ಮನೋಹರ್ ಲಾಲ್ ಖಟ್ಟರ್ ಮತ್ತೆ ಮುಖ್ಯಮಂತ್ರಿಯಾಗುವುದು ಖಚಿತ.

ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿತ್ತು. 40 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಜನನಾಯಕ ಜನತಾ ಪಕ್ಷ (ಜೆಜೆಪಿ) ಜೊತೆ ಸೇರಿ ಸರ್ಕಾರ ರಚಿಸಲಿದೆ. ಹರಿಯಾಣದ ಜನಾದೇಶವನ್ನು ಗೌರವಿಸಿ ಬಿಜೆಪಿ ಹಾಗೂ ಜೆಜೆಪಿ ಒಟ್ಟಾಗಿ ಸರ್ಕಾರ ರಚಿಸಲು ತೀರ್ಮಾನಿಸಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ.

90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ ಬಿಜೆಪಿ 40, ಕಾಂಗ್ರೆಸ್ 31, ಜೆಜೆಪಿ 10, ಐಎನ್‌ಎಲ್‌ಡಿ 1, ಹೆಚ್‌ಎಲ್‌ಪಿ 1 ಸ್ಥಾನದಲ್ಲಿ ಜಯಗಳಿಸಿದ್ದವು.  7 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಎಲ್ಲ ಸಮೀಕ್ಷೆಗಳು ಉಲ್ಟಾ ಹೊಡೆದಿದ್ದು ಯಾಕೆ?

ಅಮಿತ್ ಶಾ ಹಾಗೂ ಜನನಾಯಕ ಜನತಾ ಪಕ್ಷದ ಮುಖ್ಯಸ್ಥ ದುಶ್ಯಂತ್ ಚೌಟಾಲಾ ಮಾತುಕತೆ ನಡೆಸಿದ ನಂತರ ಶಾ ಸರ್ಕಾರ ಸೂತ್ರ ಸಿದ್ಧವಾಗಿದೆ.

ಹರಿಯಾಣದ ಜನಾದೇಶವನ್ನು ಅಂಗೀಕರಿಸಿ, ಎರಡೂ ಪಕ್ಷಗಳ ನಾಯಕರು (ಬಿಜೆಪಿ-ಜೆಜೆಪಿ) ಒಟ್ಟಾಗಿ ಸರ್ಕಾರ ರಚಿಸಲು ನಿರ್ಧರಿಸಿದ್ದೇವೆ. ಬಿಜೆಪಿ ಮುಖ್ಯಮಂತ್ರಿ ಹುದ್ದೆ ನಿರ್ವಹಿಸಿದರೆ ಜೆಜೆಪಿಗೆ ಡಿಸಿಎಂ ಸ್ಥಾನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಚೌಟಾಲಾ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಸಾಧ್ಯತೆ ಇದೆ. ಇನ್ನೊಂದು ಕಡೆ  ಸ್ವತಂತ್ರ ಶಾಸಕರು ಸಹ ಬಿಜೆಪಿಗೆ ಬೆಂಬಲ ನೀಡಲಿದ್ಕೂದಾರೆ.

ಅಮಿತ್ ಶಾ ಮತ್ತು ನಡ್ಡಾ ಅವರಿಗೆ ಧನ್ಯವಾದ ಸಲ್ಲಿಸಿರುವ ಚೌಟಾಲಾ ಸ್ಥಿರ ಸರ್ಕಾರ ನೀಡುವುದು ಗುರಿ ಎಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಕೂಟ ಅಧಿಕಾರಕ್ಕೆ ಏರಿದರೆ ಹರಿಯಾಣದಲ್ಲಿ ಮತ್ತೊಮ್ಮೆ ಖಟ್ಟರ್ ಸಿಎಂ ಆಗಲಿದ್ದಾರೆ.