Asianet Suvarna News Asianet Suvarna News

ಹ್ಯಾಂಡ್‌ ಸ್ಯಾನಿಟೈಸರ್‌ನಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ!

ಕೋವಿಡ್‌ ಹೆಮ್ಮಾರಿಯ ವಿರುದ್ಧ ರಕ್ಷಣೆಗೆ ಮೊಟ್ಟಮೊದಲು ಜಗತ್ತಿನಾದ್ಯಂತ ಬಳಕೆಯಾಗಿದ್ದೇ ಹ್ಯಾಂಡ್‌ ಸ್ಯಾನಿಟೈಸರ್| ಹ್ಯಾಂಡ್‌ ಸ್ಯಾನಿಟೈಸರ್‌ನಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ!| ಕಣ್ಣು ಮುಟ್ಟಿಕೊಳ್ಳುವುದರಿಂದ ಸಮಸ್ಯೆ ಉದ್ಭವ: ಅಧ್ಯಯನ

Hand sanitizer is hurting more children eyes some severely study finds pod
Author
Bangalore, First Published Jan 25, 2021, 8:14 AM IST

ನವದೆಹಲಿ(ಜ.25): ಕೋವಿಡ್‌ ಹೆಮ್ಮಾರಿಯ ವಿರುದ್ಧ ರಕ್ಷಣೆಗೆ ಮೊಟ್ಟಮೊದಲು ಜಗತ್ತಿನಾದ್ಯಂತ ಬಳಕೆಯಾಗಿದ್ದೇ ಹ್ಯಾಂಡ್‌ ಸ್ಯಾನಿಟೈಸರ್‌ ಮತ್ತು ಮಾಸ್ಕ್‌. ಸದ್ಯ ಇವೀಗ ನಿತ್ಯ ಜೀವನದ ಭಾಗವೇ ಆಗಿವೆ. ಆದರೆ ಕೊರೋನಾ ವೈರಸ್ಸಿನ ಜೊತೆಗೆ ಹ್ಯಾಂಡ್‌ ಸ್ಯಾನಿಟೈಸರ್‌ ಸಹ ಮಾರಕವಾಗಿ ಪರಿಣಮಿಸಿದೆ. ಸ್ಯಾನಿಟೈಸರ್‌ ಬಳಕೆಯಿಂದ ಮಕ್ಕಳಲ್ಲಿ ಕಣ್ಣಿಗೆ ಸಂಬಂಧಿಸಿದ ತೊಂದರೆಗಳೂ ಹೆಚ್ಚಾಗಿವೆ ಎಂದು ಸಮೀಕ್ಷೆಯೊಂದು ಅಭಿಪ್ರಾಯಪಟ್ಟಿದೆ.

ಅಮೆರಿಕದ ಜೆಎಎಂಎ ನೇತ್ರವಿಜ್ಞಾನ ನಿಯತಕಾಲಿಕೆಯಲ್ಲಿ ಈ ಸಮೀಕ್ಷೆ ಪ್ರಕಟವಾಗಿದ್ದು, ಮಕ್ಕಳು ಸ್ಯಾನಿಟೈಸರ್‌ ಬಳಸಿ ಆಕಸ್ಮಿಕವಾಗಿ ಕಣ್ಣು ಮುಟ್ಟಿಕೊಳ್ಳುವುದರಿಂದ ರಾಸಾಯನಿಕಗಳು ಕಣ್ಣಿನೊಳಗೆ ಸೇರಿ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸುತ್ತಿವೆ. 2020ರ ಏಪ್ರಿಲ್‌ 1ರಿಂದ ಆಗಸ್ಟ್‌ 24ರ ವರೆಗೆ ಮಕ್ಕಳಲ್ಲಿ ಇಂಥ ಸಮಸ್ಯೆಗಳು 7 ಪಟ್ಟು ಹೆಚ್ಚಾಗಿವೆ ಎಂದು ಫ್ರಾನ್ಸ್‌ನ ಸಂಶೋಧಕರು ಹೇಳಿದ್ದಾರೆ.

2019ರಲ್ಲಿ ಕೇವಲ ಶೇ.1.3ರಷ್ಟುಇಂಥ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ 2020ರಲ್ಲಿ ಅದು ಶೇ.9.9ಗೆ ಏರಿಕೆಯಾಗಿದೆ. ಹ್ಯಾಂಡ್‌ ಸ್ಯಾನಿಟೈಸರ್‌ನ ಅತಿಯಾದ ಬಳಕೆಯಿಂದ ಇಂಥ ಸಮಸ್ಯೆಗಳು ಉದ್ಭವಿಸಬಹುದು ಎಂದು ಅವರು ತಿಳಿಸಿದ್ದಾರೆ.

Follow Us:
Download App:
  • android
  • ios