ನಾಯಿ ಮಾಂಸ ಮಾರಾಟ ನಿಷೇ​ಧಿಸಿದ್ದ ಆದೇಶ ಪ್ರಶ್ನಿ​ಸಿದ ವಿಚಾ​ರಣೆ ನಡೆ​ಸಿ ಈ ಆದೇಶ ನೀಡಿದ್ದು, ನಿಷೇ​ಧಿ​ಸುವ ಅಧಿಕಾರ ಸರ್ಕಾ​ರ​ಕ್ಕಿಲ್ಲ ಎಂದು ಅಭಿ​ಪ್ರಾ​ಯ​ಪ​ಟ್ಟ ಕೋರ್ಟ್‌ 

ಗುವಾಹಟಿ(ಜೂ.08): ರಾಜ್ಯದಲ್ಲಿ ನಾಯಿ ಮಾಂಸ ಮಾರಾಟ ಮತ್ತು ಸೇವನೆ ನಿಷೇಧಿಸಿದ್ದ ನಾಗಾಲ್ಯಾಂಡ್‌ ಸರ್ಕಾರದ 2020ರ ಆದೇಶವನ್ನು ರದ್ದುಗೊಳಿಸಿರುವ ಗುವಾಹಟಿ ಹೈಕೋರ್ಟ್‌ ನಾಯಿ ಮಾಂಸ ಮಾರಾ​ಟ​ಕ್ಕೆ ಅನುಮತಿ ನೀಡಿದೆ.
ನಾಯಿ ಮಾಂಸ ಮಾರಾಟ ನಿಷೇ​ಧಿಸಿದ್ದ ಆದೇಶ ಪ್ರಶ್ನಿ​ಸಿದ ವಿಚಾ​ರಣೆ ನಡೆ​ಸಿದ ಕೋರ್ಟ್‌ ಈ ಆದೇಶ ನೀಡಿದ್ದು, ನಿಷೇ​ಧಿ​ಸುವ ಅಧಿಕಾರ ಸರ್ಕಾ​ರ​ಕ್ಕಿಲ್ಲ ಎಂದು ಅಭಿ​ಪ್ರಾ​ಯ​ಪ​ಟ್ಟಿ​ದೆ.

ಅದಾಗ್ಯೂ ‘ನಾಯಿ ಮಾಂಸ ಸೇವನೆಯು ಗುಣಮಟ್ಟದ ಆಹಾರವೆಂದು ಪರಿಗಣಿಸಲಾಗುವುದಿಲ್ಲ. ಅಲ್ಲದೇ ಮಾನವ ಸೇವಿಸಬಹುದಾದ ಸುರಕ್ಷಿತ ಮಾಂಸಾಹಾರಗಳಲ್ಲಿ ನಾಯಿ ಇಲ್ಲ’ ಎಂದೂ ಕೋರ್ಟ್‌ ಹೇಳಿ​ದೆ.

ನಾಯಿ ಮಾಂಸದಿಂದ ಹರಡಿತಾ ಕೊರೋನಾ? ರಕೂನ್‌ ಡಾಗ್‌ ಸೋಂಕಿಗೆ ಕಾರಣ ಎಂದ ತಜ್ಞರ ತಂಡ

ಮಾಂಸಕ್ಕಾಗಿ ನಾಯಿಗಳ ವ್ಯಾಪಾರ, ಸೇವನೆ, ಆಮದು, ಮತ್ತು ಹೋಟೆಲ್‌ಗಳಲ್ಲಿ ನಾಯಿ ಮಾಂಸಾಹಾರ ತಯಾರಿಕೆಯನ್ನು 2020ರಲ್ಲಿ ನಾಗಾಲ್ಯಾಂಡ್‌ ಸರ್ಕಾರ ನಿಷೇಧಿಸಿತ್ತು. ಕೋರ್ಟ್‌ ಆದೇಶ ನಾಯಿ ಮಾಂಸ ಪ್ರಿಯರಿಗೆ ಸಂತಸ ನೀಡಿದೆ. ಆದರೆ ಶ್ವಾನ ಪ್ರಿಯರಿಗೆ ಅತೀವ ಬೇಸರ ತಂದಿದೆ.