ಬದುಕಲು ಏನೂ ಉಳಿದಿಲ್ಲ, ಗುಜರಾತ್ ಪ್ರವಾಹದಲ್ಲಿ 50 ಲಕ್ಷ ರೂ ಕಾರು ಕಳೆದುಕೊಂಡ ವ್ಯಕ್ತಿಯ ಅಳಲು!

50 ಲಕ್ಷ ರೂಪಾಯಿ ಆಡಿ ಕಾರು ಸೇರಿದಂತೆ 3 ಕಾರುಗಳು ಗುಜರಾತ್ ಪ್ರವಾಹದಲ್ಲಿ ಮುಳುಗಡೆಯಾಗಿದೆ. ಮನೆ ಸುತ್ತಲೂ ನೀರಿನ ಫೋಟೋ ಹಂಚಿಕೊಂಡ ವ್ಯಕ್ತಿ, ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿದೆ. ಬದುಕಲು ಏನೂ ಉಳಿದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
 

Gujarat rain flood Nothing left to live man tears after his 3 cars include audi drowns ckm

ವಡೋದರ(ಆ.29) ಗುಜರಾತ್‌ನ ಹಲವು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಮಳೆ ಹಾಗೂ ಪ್ರವಾಹಕ್ಕೆ ಈಗಾಗಲೇ 29 ಮಂದಿ ಮೃತಪಟ್ಟಿದ್ದಾರೆ. ವಡೋದಲ್ಲಿ ನಿರಂತರ ಮಳೆಯಾಗುತ್ತಿದೆ. ಈಾಗಲೇ 18,000 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಆಗಸ್ಟ್ 30ರ ವರೆಗೆ ಭಾರಿ ಮಳೆ ಮನ್ಸೂಚನೆ ನೀಡಲಾಗಿದೆ. ಈ ಮಳೆಗೆ ಹಲವರ ಜೀವನ ಅಸ್ತವ್ಯಸ್ತಗೊಂಡಿದೆ. ಬದುಕು ಕೊಚ್ಚಿ ಹೋಗಿದೆ. ವಡೋರ ವ್ಯಕ್ತಿಯೊಬ್ಬರ ಮನೆ ಸುತ್ತ ಮುತ್ತ ಭಾರಿ ಪ್ರಮಾಣದಲ್ಲಿ ನೀರು ತುಂಬಿಕೊಂಡಿದೆ. ಇದರ ಪರಿಣಾಮ ವ್ಯಕ್ತಿಯ 50 ಲಕ್ಷ ರೂಪಾಯಿ ಮೌಲ್ಯದ ಆಡಿ ಸೇರಿದಂತೆ 3 ಕಾರುಗಳು ಜಲಾವೃತಗೊಂಡಿದೆ. ಪ್ರವಾಹದಲ್ಲಿ ಎಲ್ಲವೂ ಕೊಚ್ಚಿ ಹೋಗಿದೆ. ಇನ್ನು ಬದುಕಲು ಏನೂ ಉಳಿದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ವಡೋದರಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ರಾತ್ರಿಡಿಯಿ ಸುರಿದ ಮಳೆಯಿಂದ ವಡೋದರದ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಈ ಕುರಿತು ವಡೋದರ ವ್ಯಕ್ತಿ ರೆಡಿಟ್ ಸೋಶಿಯಲ್ ಮೀಡಿಯದಲ್ಲಿ ಅಳಲು ತೋಡಿಕೊಂಡಿದ್ದಾರೆ. ಪಾರ್ಕ್ ಮಾಡಿದ ಆಡಿ 6, ಮಾರುತಿ ಸುಜುಕಿ ಸಿಯಾಜ್ ಹಾಗೂ ಫೋರ್ಡ್ ಇಕೋಸ್ಪೋರ್ಟ್ ಕಾರುಗಳು ನೀರಿನಲ್ಲಿ ಮುಳುಗಡೆಯಾಗಿದೆ. ಈ ಪೈಕಿ ಆಡಿ ಕಾರಿನ ಬೆಲೆ 50 ಲಕ್ಷ ರೂಪಾಯಿ. 

ಮಳೆಯೇ ಇಲ್ಲದಿದ್ದರೂ ಮೃತ್ಯುಂಜಯ ನದಿಯಲ್ಲಿ ಪ್ರವಾಹದ ರೌದ್ರ ನರ್ತನ! ಚಾರ್ಮಾಡಿ ಘಾಟ್ ಕುಸಿತವಾಯ್ತೆ?

ಮೂರು ಕಾರುಗಳು ನೀರಿನಲ್ಲಿ ಮುಳುಗಡೆಯಾಗಿದೆ. ಈ ಮೂರ ನನ್ನ ವಿಶೇಷ ಕಾರುಗಳು ನೀರಿನಲ್ಲಿ ಮುಳುಗಿದೆ. ನನಗಿನ್ನು ಬದುಕಲ ಏನೂ ಉಳಿದಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಕೆಲ ಪ್ರದೇಶದಲ್ಲಿನ 8 ಅಡಿ ನೀರು ನಿಂತುಕೊಂಡಿದೆ. ಹೀಗಾಗಿ ಇಲ್ಲಿಂದ ರಕ್ಷಣಾ ಕಾರ್ಯಗಳು ಅಪಾಯಕಾರಿಯಾಗಿದೆ. 

ಹಲವು ಕಾರುಗಳು ನೀರಿನಲ್ಲಿ ಕೊಟ್ಟಿ ಹೋಗಿದೆ. ಮನೆ, ಅಪಾರ್ಟ್‌ಮೆಂಟ್ ಮುಂದೆ ಪಾರ್ಕ್ ಮಾಡಿದ್ದ ಕಾರುಗಳು ಜಲಾವೃತಗೊಂಡಿದೆ. ಹಲವು ಮನೆಗಳು ಮುಳುಗಡೆಯಾಗಿದೆ. ಮುನ್ಸಿಪಲ್ ಕಾರ್ಪೋರೇಶನ್ ಸೇರಿದಂತೆ ಸ್ಥಳೀಯ ಆಡಳಿತ ವಿರುದ್ಧ ಆಕ್ರೋಶಗಳು ಹೆಚ್ಚಾಗುತ್ತಿದೆ. ಇತ್ತ ಮಳೆ ಅಬ್ಬರ ಆಗಸ್ಟ್ 30ರ ವರೆಗೆ ಮುಂದುವರಿಯಲಿದೆ ಎಂದು ಸೂಚನೆ ನೀಡಲಾಗಿದೆ. ಹೀಗಾಗಿ ಹಲವು ಪ್ರದೇಶಗಳ ಜನರನ್ನು ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿದೆ. 

ಭಾರಿ ಮಳೆಯಿಂದ ರಾಜ್‌ಕೋಟ್ ವಿಮಾನ ನಿಲ್ದಾಣದ ಗೋಡೆ ಕುಸಿದಿದೆ. ಬಹುತೇಕ ರಸ್ತೆಗಳು ಜಲಾವೃತಗೊಂಡಿದೆ. ರಸ್ತೆ, ಮನೆ ಒಳಗೆ ನುಗ್ಗಿರುವ ಪ್ರವಾಹ ನೀರಿನಲ್ಲಿ ಭಾರಿ ಗಾತ್ರದ ಮೊಸಳೆಗಳು ಕಾಣಿಸಿಕೊಂಡಿದೆ. ಇದು ಹಲವರ ಆತಂಕಕ್ಕೆ ಕಾರಣವಾಗಿದೆ.

ವಯನಾಡು ಬಳಿಕ ಕೇರಳದ ಕೊಟ್ಟಾಯಂನಲ್ಲಿ ಭೂಕುಸಿತ, ಪ್ರವಾಹ: ಮನೆ, ಬೆಳೆ ಹಾನಿ
 

Latest Videos
Follow Us:
Download App:
  • android
  • ios