ಗುಜರಾತ್ ಹೈ ಕೋರ್ಟ್ ಮಹತ್ವದ ಆದೇಶ/ ವಿಧಾನಸಭೆ ಚುನಾವಣೆಯಲ್ಲಿ ದುಷ್ಕೃತ್ಯ ಎಸಗಿದ ಮತ್ತು ತಿರುಚಿದ ಆರೋಪ ಎದುರಿಸುತ್ತಿದ್ದ ಗುಜರಾತ್ ಸರ್ಕಾರದ ಸಚಿವ ಭೂಪೇಂದ್ರಸಿಂಹ ಚುಡಾಸಮಾ ಅವರ ಆಯ್ಕೆಯನ್ನು ರದ್ದು/ ಕಾನೂನು ಹೋರಾಟದ ದಾರಿಗಳು
ಅಹಮದಾಬಾದ್(ಮೇ. 12) ವಿಧಾನಸಭೆ ಚುನಾವಣೆಯಲ್ಲಿ ದುಷ್ಕೃತ್ಯ ಎಸಗಿದ ಮತ್ತು ತಿರುಚಿದ ಆರೋಪ ಎದುರಿಸುತ್ತಿದ್ದ ಗುಜರಾತ್ ಸರ್ಕಾರದ ಸಚಿವ ಭೂಪೇಂದ್ರಸಿಂಹ ಚುಡಾಸಮಾ ಅವರ ಆಯ್ಕೆಯನ್ನು ಗುಜರಾತ್ ಹೈ ಕೋರ್ಟ್ ಅಮಾನ್ಯ ಮಾಡಿದೆ.
2017 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಧೋಲ್ಕಾ ಕ್ಷೇತ್ರದಿಂದ 327 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಬಿಜೆಪಿ ನಾಯಕನ ಆಯ್ಕೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಅಭ್ಯರ್ಥಿ ಅಶ್ವಿನ್ ರಾಥೋಡ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪರೇಶ್ ಉಪಾಧ್ಯಾಯ ಚುಡಾಸಮಾ ಅವರ ಆಯ್ಕೆಯನ್ನು ರದ್ದುಪಡಿಸಿದ್ದಾರೆ.
ಲಾಕ್ ಡೌನ್ ಉಲ್ಲಂಘಿಸಿದ ಬಿಜೆಪಿ ನಾಯಕನ ಪರಿಸ್ಥಿತಿ ಏನಾಯ್ತು ನೋಡಿ
ಚುಡಾಸಮಾ ಅವರು ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ, ಮತಗಳನ್ನು ಎಣಿಸುವ ಸಮಯದಲ್ಲಿ, ಚುನಾವಣಾ ಆಯೋಗದ ಹಲವು ಕಡ್ಡಾಯ ಸೂಚನೆ ಉಲ್ಲಂಘಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು . ಚುಡಾಸಮಾ ಪ್ರಸ್ತುತ ವಿಜಯ್ ರೂಪಾನಿ ಸರ್ಕಾರದಲ್ಲಿ ಶಿಕ್ಷಣ, ಕಾನೂನು ಮತ್ತು ನ್ಯಾಯ, ಶಾಸಕಾಂಗ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕೆಲಸ ಮಾಡುತ್ತಿದ್ದರು .
ಇನ್ನು ಮುಂದೆ ಭೂಪೇಂದ್ರಸಿಂಹ ಚುಡಾಸಮಾ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಹೊಸದಾಗಿ ಚುನಾವಣೆ ಬಗ್ಗೆ ನ್ಯಾಯಾಲಯ ಏನನ್ನೂ ಹೇಳಿಲ್ಲ.
