Asianet Suvarna News Asianet Suvarna News

ಮೂತ್ರಪಿಂಡದ ಕಲ್ಲು ತೆಗೆಯೋ ಬದಲು ಕಿಡ್ನಿಯನ್ನೇ ತೆಗೆದ ಡಾಕ್ಟರ್, ಆಸ್ಪತ್ರೆಗೆ ಭಾರೀ ದಂಡ!

* ಆಸ್ಪತ್ರೆ ವೈದ್ಯರ ಭಾರೀ ನಿರ್ಲಕ್ಷ್ಯ

* ಕಲ್ಲಿನ ಬದಲು ಕಿಡ್ನಿಯನ್ನೇ ತೆಗೆದ ವೈದ್ಯರು

* ಹತ್ತು ವರ್ಷದ ಬಳಿಕ ಸಿಕ್ತು ನ್ಯಾಯ

Gujarat Doctor removes kidney instead of stone hospital to pay Rs 11 2 lakh damages pod
Author
Bangalore, First Published Oct 19, 2021, 1:41 PM IST | Last Updated Oct 19, 2021, 2:09 PM IST

ಅಹಮದಾಬಾದ್(ಅ.19): ಬಾಲಸಿನೋರ್ನ KMG ಜನರಲ್ ಆಸ್ಪತ್ರೆಯಲ್ಲಿ(Balasinor’s KMG General Hospital) ಮೂತ್ರಪಿಂಡದ(Kidney) ಕಲ್ಲುಗಳನ್ನು ತೆಗೆಸಲು ಬಂದಿದ್ದ ರೋಗಿಯ ಕಿಡ್ನಿಯನ್ನೇ ತೆಗೆದ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ  ಈ ನಿರ್ಲಕ್ಷ್ಯಕ್ಕೆ ಗುಜರಾತ್(Gujarat) ರಾಜ್ಯ ಗ್ರಾಹಕರ ವಿವಾದ ಪರಿಹಾರ ಆಯೋಗವು 11.23 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಿದ್ದಾರೆ. ಇನ್ನು ರೋಗಿಯ ಮೂತ್ರಪಿಂಡತೆಗಡದ ನಾಲ್ಕು ತಿಂಗಳ ಬಳಿಕ ರೋಗಿ ನಿಧನರಾಗಿದ್ದಾರೆ.

ಆಸ್ಪತ್ರೆಯು ತನ್ನ ವೈದ್ಯನ ಈ ನಿರ್ಲಕ್ಷ್ಯಕ್ಕೆ ಆಸ್ಪತ್ರೆಯೇ ಹೊಣೆ ಎಂದಿರುವ ಗ್ರಾಹಕರ ನ್ಯಾಯಾಲಯವು 'ಉದ್ಯೋಗದಾತನು ತನ್ನ ಸ್ವಂತ ಕೃತ್ಯ ಮತ್ತು ಲೋಪಗಳಿಗೆ ಮಾತ್ರವಲ್ಲದೇ, ತನ್ನ ಉದ್ಯೋಗಿಗಳ(Job) ನಿರ್ಲಕ್ಷ್ಯಕ್ಕೂ ಸಹ ಜವಾಬ್ದಾರನಾಗಿರುತ್ತಾನೆ. ಹೀಗಾಗಿ ಆಸ್ಪತ್ರೆಯೇ ಈ ಬಗ್ಗೆ ಉತ್ತರಿಸಲಿ' ಎಂದಿದೆ. ಅಲ್ಲದೇ 2012ಕ್ಕೆ ಅನುಗುಣವಾಗಿ ಆಸ್ಪತ್ರೆ ಶೇ. 7.5ರಷ್ಟು ಬಡ್ಡಿ ಪಾವತಿಸುವಂತೆಯೂ ಇದು ಆದೇಶಿಸಿದೆ.

ಇನ್ನು ಖೇಡಾ ಜಿಲ್ಲೆಯ ವಾಂಘ್ರೋಲಿ ಗ್ರಾಮದ ದೇವೇಂದ್ರಭಾಯಿ ರಾವಲ್  ತೀವ್ರ ಬೆನ್ನು ನೋವು ಮತ್ತು ಮೂತ್ರ ವಿಸರ್ಜನೆಗೆ ತೊಂದರೆಯಿಂದ ಬಳಲುತ್ತಿದ್ದರು. ಈ ನಿಟ್ಟಿನಲ್ಲಿ ಬಾಲಸಿನೋರ್ ಪಟ್ಟಣದ ಕೆಎಂಜಿ ಜನರಲ್ ಆಸ್ಪತ್ರೆಯ(Balasinor’s KMG General Hospital ) ಡಾ.ಶಿವುಭಾಯಿ ಪಟೇಲ್‌ರವರನ್ನು ಭೇಟಿಯಾಗಿದ್ದರು. ಮೇ 2011 ರಲ್ಲಿ, ಆತನ ಎಡ ಮೂತ್ರಪಿಂಡದಲ್ಲಿ 14 ಎಂಎಂ ಕಲ್ಲು ಇರುವುದು ಪತ್ತೆಯಾಗಿತ್ತು. ರಾವಲ್‌ಗೆ ಈ ವೇಳೆ ಉತ್ತಮ ಚಿಕಿತ್ಸೆ ನಿಡುವಲ್ಲಿ ತೆರಳಲು ಸೂಚಿಸಲಾಗಿತ್ತು. ಆದರೆ ಅವರು ಅದೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಆಯ್ಕೆ ಮಾಡಿದರು. 2011 ರ ಸೆಪ್ಟೆಂಬರ್ 3 ರಂದು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಶಸ್ತ್ರಚಿಕಿತ್ಸೆಯ ನಂತರ, ಕಲ್ಲಿನ ಬದಲು, ಮೂತ್ರಪಿಂಡವನ್ನು ತೆಗೆಯಬೇಕಾಯಿತು ಎಂದು ವೈದ್ಯರು ತಿಳಿಸಿದಾಗ ಕುಟುಂಬವು ಆತಂಕಕ್ಕೊಳಗಾಗಿದೆ. ಅಲ್ಲದೇ ವೈದ್ಯರು ರೋಗಿಯ ಹಿತದೃಷ್ಟಿಯಿಂದ ಇದನ್ನು ಮಾಡಲಾಗಿದೆ ಎಂದು ಉಲ್ಲೇಖಿಸಿದ್ದರು. 

ಆದರೆ ಸರ್ಜರಿ ಬಳಿಕವೂ ರವಾಲ್‌ಗೆ ಮೂತ್ರ ವಿಸರ್ಜಿಸುವಲ್ಲಿ ಇದ್ದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಹೀಗಿರುವಾಗ ಆತನನ್ನು ನಾಡಿಯಾಡ್‌ನಲ್ಲಿರುವ ಕಿಡ್ನಿ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಅಲ್ಲಿ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಾಗ, ಅವರನ್ನು ಅಹಮದಾಬಾದ್‌ನ ಐಕೆಡಿಆರ್‌ಸಿಗೆ ಕರೆದೊಯ್ಯಲಾಗಿದೆ. ಅವರು ಜನವರಿ 8, 2012 ರಂದು ಮೂತ್ರಪಿಂಡದ ಸಮಸ್ಯೆಯಿಂದ ಬಲಿಯಾಗಿದ್ದಾರೆ.

ಇತ್ತ ಗಂಡನನ್ನು ಕಳೆದುಕೊಂಡ ಮೃತನ ಪತ್ನಿ, ಮಿನಾಬೆನ್ ನಾಡಿಯಾಡ್‌ನ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವನ್ನು ಸಂಪರ್ಕಿಸಿದ್ದಾರೆ. 2012 ರಲ್ಲಿ ವೈದ್ಯರು, ಆಸ್ಪತ್ರೆ ಮತ್ತು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕೋ ಲಿಮಿಟೆಡ್ ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ ವಿಧವೆಗೆ 11.23 ಲಕ್ಷ ರೂ.ಗಳ ಪರಿಹಾರವನ್ನು ಪಾವತಿಸುವಂತೆ ಆದೇಶಿಸಿದೆ.

ವಿಮಾ ಕಂಪನಿ ಹಾಗೂ ಆಸ್ಪತ್ರೆ ಇಬ್ಬರಲ್ಲಿ ಯಾರು ಹಣ ನೀಡಬೇಕೆಂಬ ವಿಚಾರ ಬಂದಾಗ ವಿವಾದ ಹುಟ್ಟಿಕೊಂಡಿದ್ದು, ಇದು ರಾಜ್ಯ ಆಯೋಗದೆದುರು ಬಂದಿದೆ. ವಿವಾದವನ್ನು ಆಲಿಸಿದ ನಂತರ, ರಾಜ್ಯ ಆಯೋಗವು ಆಸ್ಪತ್ರೆಯು ಒಳಾಂಗಣ ಮತ್ತು ಹೊರಾಂಗಣ ರೋಗಿಗಳಿಗೆ ವಿಮಾ ಪಾಲಿಸಿ ಹೊಂದಿರುವುದನ್ನು ಗಮನಿಸಿದೆ, ಆದರೆ ವಿಮೆಗಾರರು ಚಿಕಿತ್ಸಕ ವೈದ್ಯರ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಹೊಣೆಗಾರರಾಗಿರುವುದಿಲ್ಲ. ಶಸ್ತ್ರಚಿಕಿತ್ಸೆ ಕೇವಲ ಮೂತ್ರಪಿಂಡದಿಂದ ಕಲ್ಲನ್ನು ತೆಗೆಯುವುದಕ್ಕಾಗಿ ಮತ್ತು ಕಲ್ಲನ್ನು ತೆಗೆಯಲು ಮಾತ್ರ ಒಪ್ಪಿಗೆಯನ್ನು ತೆಗೆದುಕೊಳ್ಳಲಾಗಿದೆ, ಆದರೆ ಮೂತ್ರಪಿಂಡವನ್ನು ತೆಗೆಯಲಾಗಿತು. ಹೀಗಾಗಿ, ಇದು ವೈದ್ಯರು ಮತ್ತು ಆಸ್ಪತ್ರೆಯ ನಿರ್ಲಕ್ಷ್ಯದ ಸ್ಪಷ್ಟ ಎನ್ನಲಾಗಿದೆ.

Latest Videos
Follow Us:
Download App:
  • android
  • ios