ಮೀನು, ಮಟನ್ ಯಾಕಿಲ್ಲ? ತಾಳಿ ಕಟ್ಟಿದ ಬೆನ್ನಲ್ಲೇ ವಧುವಿನ ಕಪಾಳಕ್ಕೆ ಬಾರಿಸಿದ ವರ!
ಮದುವೆ ಊಟದಲ್ಲಿ ಮೀನು, ಮಟನ್ ಇದೆಯಲ್ವಾ? ಇಲ್ಲಾ ಸಿಂಪಲ್ ವೆಜ್ ಊಟ ಇಷ್ಟೇ ನೋಡಿ ವರ ಪ್ರಶ್ನೆಗೆ ವಧುವಿನ ಉತ್ತರ ಹೊರಬೀಳುತ್ತಿದ್ದಂತೆ ಕಪಾಳಕ್ಕೆ ಭಾರಿಸಿ ಆಗಿದೆ. ಇತ್ತ ವರನ ಕುಟುಂಬಸ್ಥರು, ವಧುವಿನ ಪೋಷಕರು ಸೇರಿದಂತೆ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ಲಖನೌ(ಜು.15) ಮದುವ ಸಂಭ್ರಮದಲ್ಲಿ ಊಟದ ವಿಚಾರಕ್ಕೆ ಹಲವು ಗುದ್ದಾಟ, ಹೊಡೆದಾಟ ನಡಿದೆ. ಇದೇ ಕಾರಣಕ್ಕೆ ಮದುವೆ ಮುರಿದು ಬಿದ್ದ ಘಟನೆಯೂ ನಡೆದಿದೆ. ಈ ಸಾಲಿಗೆ ಮತ್ತೊಂದು ಸೇರಿಕೊಂಡಿದೆ. ಮದುವೆ ಸಂಭ್ರಮ, ಮಂತ್ರಘೋಷಗಳು ಮೊಳಗಿದೆ. ಹಿರಿಯ ಆಶೀರ್ವಾದ ನಡುವೆ ವರ ಹಾಗೂ ವಧು ಹೂವಿನ ಮಾಲೆ ಬದಲಾಯಿಸಿದ್ದಾರೆ. ಶಾಸ್ತ್ರಗಳು ನಡೆಯುತ್ತಿದೆ. ತಾಳಿ ಕಟ್ಟಿ ಆಗಿದೆ. ಮದುವೆ ಊಟದಲ್ಲಿ ಮೀನು, ಮಟನ್ ಇಲ್ಲ ಎಂದು ವರ ರೊಚ್ಚಿಗೆದ್ದು ವಧುವಿನ ಕಪಾಳಕ್ಕೆ ಭಾರಿಸಿದ್ದಾನೆ. ಇತ್ತ ನಾನ್ ವೆಜ್ ಇಲ್ಲ ಎಂದು ವರನ ಕುಟುಂಸ್ಥರು ವಧುವಿನ ಪೋಷಕರು, ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ದಿಯೋರದಲ್ಲಿ ನಡೆದಿದೆ.
ಜುಲೈ 11ರಂದು ದಿಯೋದಲ್ಲಿ ನಡೆದ ಈ ಮದುವೆ ರಣಾಂಗಮವಾಗಿತ್ತು. ಚಿ.ರಾ. ಅಭಿಷೇಕ್ ಕುಮಾರ್ ಮದುವೆ ಸುಷ್ಮಾ ಅನ್ನೋ ಯುವತಿ ಜೊತೆ ಫಿಕ್ಸ್ ಆಗಿತ್ತು. ವರನಿಗೆ ಹೇಳಿಕೊಳ್ಳಲು ಸರಿಯಾದ ಕೆಲಸವಿಲ್ಲ, ಆದರೂ ವರನ ಕುಟುಂಬಸ್ಥರ ಜಂಬಕ್ಕೆ, ಅಹಂಕಾರಕ್ಕೆ ಯಾವುದೇ ಕೊರತೆ ಇರಲಿಲ್ಲ. ಇತ್ತ ಸಾಲ ಮಾಡಿ ಮಗಳ ಮದುವೆಗೆ ಪೋಷಕರು ಎಲ್ಲಾ ತಯಾರಿ ನಡೆಸಿದ್ದರು.
ಮಗನ ಮದುವೆ ಮಾತುಕತೆಯಲ್ಲಿ ತಂದೆಗೆ ಶುರುವಾದ್ ಲವ್, ಸೊಸೆ ತಾಯಿ ಜೊತೆ ಪರಾರಿ!
ಮದುವೆ ಫಿಕ್ಸ್ ಆದ ಬಳಿಕ ವರ, ಫೋನ್ ಮೂಲಕ ಯುವತಿಗೆ ಮದುವೆಗೆ ಮೀನೂಟ, ಮಟನ್ ಸೇರಿದಂತೆ ಬಾಡೂಟ ಇರಬೇಕು ಎಂದು ಸೂಚಿಸಿದ್ದ. ಆದರೆ ವಧು ಈ ಮಾಹಿತಿಯನ್ನು ತಂದೆಗೆ ಹೇಳಿಲ್ಲ. ಕಾರಣ, ಸಾಲ ಮಾಡಿ ಮದುವೆ ಮಾಡುತ್ತಿದ್ದ ಕಾರಣ ಇದರ ಹೊರೆಯನ್ನು ಪೋಷಕರ ಮೇಲೆ ಹಾಕಲು ಮಗಳಿಗೆ ಇಷ್ಟವಿರಲಿಲ್ಲ. ಇಷ್ಟೇ ಅಲ್ಲ, ಮದುವೆ ದಿನ ಈ ವಿಚಾರದ ಕುರಿತು ಮಾತುಕತೆಯಾಗಲ್ಲ, ಬಳಿಕ ಆತ ಈ ವಿಚಾರ ಎತ್ತಿದ್ದರೂ ಸುಮ್ಮನಿದ್ದರೆ ಸಾಕು ಎಂದುಕೊಂಡಿದ್ದಳು.
ಆದರೆ ಮದುವೆ ವೇದಿಕೆಯಲ್ಲಿ ರಂಪಾಟ ನಡೆದಿದೆ. ವಧುವಿನ ಕಿವಿಯಲ್ಲಿ ಮೆಲ್ಲನೆ ಮದುವೆ ಊಟದಲ್ಲಿ ಮೀನು, ಮಟನ್ ಇದೆಯಾ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ವಧು, ಇಲ್ಲಾ ಸಿಂಪಲ್ ವೆಜ್ ಊಟ ಎಂದಿದ್ದಾಳೆ. ವರನ ಪಿತ್ತ ನೆತ್ತಿಗೇರಿದೆ. ವಧುವಿನ ಕಪಾಳಕ್ಕೆ ಭಾರಿಸಿದ್ದಾನೆ. ಅಷ್ಟರಲ್ಲೇ ವಧುವಿನ ತಂದೆ ವೇದಿಕೆಗೆ ಆಗಮಿಸಿ ವರನ ಪ್ರಶ್ನಿಸಿದ್ದಾರೆ. ವರ ಕುಟುಂಬಸ್ಥರು ಬಡಿಗೆ ದೊಣ್ಣೆ ಮೂಲಕ ವಧುವಿನ ಪೋಷಕರು, ಕುಟುಂಬಸ್ಥರ ಮೇಲೆ ದಾಳಿ ನಡೆಸಿದ್ದಾರೆ.
ಬಾಲ್ಯವಿವಾಹದಲ್ಲಿ ಕರ್ನಾಟಕ ನಂ.2: ಬೆಚ್ಚಿಬೀಳಿಸುವ ಅಂಕಿಅಂಶ..!
10ಕ್ಕೂ ಹೆಚ್ಚು ಮಂದಿ ಹಲ್ಲೆ ನಡೆಸಿದ್ದಾರೆ. ಇದರಿಂದ ವಧುವಿನ ತಂದೆ ಸೇರಿದಂತೆ ಪೋಷಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಊಟದ ಕಾರಣದಿಂದ ಇದೀಗ ಮದುವೆ ರದ್ದಾಗಿದೆ.