Asianet Suvarna News Asianet Suvarna News

ಕೊನೇ ದಿನ ಮಾರ್ಷಲ್‌ಗಳ ಜತೆ ವಿಪಕ್ಷ ‘ಸಂಘರ್ಷ’!

* ಸಂಸತ್‌ ಕಲಾಪದ ಕೊನೆಯ ದಿನ ಕೂಡ ವಿಪಕ್ಷಗಳಿಂದ ರಾಜ್ಯಸಭೆಯಲ್ಲಿ ತೀವ್ರ ಕೋಲಾಹಲ

* ಕೊನೇ ದಿನ ಮಾರ್ಷಲ್‌ಗಳ ಜತೆ ವಿಪಕ್ಷ ‘ಸಂಘರ್ಷ’

* ಕಾಗದಪತ್ರಗಳನ್ನು ವಿಪಕ್ಷ ಸದಸ್ಯರು ಹರಿದು ತೂರಾಟ

 

Govt calls for strictest action against misbehaving opposition MPs as Monsoon Session ends 2 days early pod
Author
Bangalore, First Published Aug 12, 2021, 11:04 AM IST

ನವದೆಹಲಿ(ಆ.12): ಸಂಸತ್‌ ಕಲಾಪದ ಕೊನೆಯ ದಿನ ಕೂಡ ವಿಪಕ್ಷಗಳು ರಾಜ್ಯಸಭೆಯಲ್ಲಿ ತೀವ್ರ ಕೋಲಾಹಲ ಎಬ್ಬಿಸಿ, ಮಾರ್ಷಲ್‌ಗಳೊಂದಿಗೆ ಸಂಘರ್ಷ ನಡೆಸಿದ ಘಟನೆ ನಡೆದಿದೆ. ಕಾಗದಪತ್ರಗಳನ್ನು ವಿಪಕ್ಷ ಸದಸ್ಯರು ಹರಿದು ತೂರಾಡಿದ್ದಾರೆ.

"

ಒಬಿಸಿ ಮಸೂದೆ ಪಾಸಾದ ಬಳಿಕ ವಿಮಾ ಕಂಪನಿಗಳ ಖಾಸಗೀಕರಣ ವಿಧೇಕಯವನ್ನು ಸರ್ಕಾರ ಕೈಗೆತ್ತಿಕೊಂಡಿತು. ಆಗ ಇದನ್ನು ವಿರೋಧಿಸಿ ವಿಪಕ್ಷ ಸದಸ್ಯರು ಸಭಾಪತಿ ಪೀಠದತ್ತ ಮುನ್ನುಗ್ಗಲು ಯತ್ನಿಸಿದರು. ಅವರನ್ನು ತಡೆಯಲು 50 ಪುರುಷ/ಮಹಿಳಾ ಮಾರ್ಷಲ್‌ಗಳನ್ನು ನಿಯೋಜಿಸಲಾಯಿತು. ಈ ವೇಳೆ ಮಾರ್ಷಲ್‌ಗಳು ಹಾಗೂ ಸಂಸದರ ನಡುವೆ ಸಂಘರ್ಷ ನಡೆಯಿತು.

"

ಈ ನಡುವೆ, ಪುರುಷ ಸಂಸದರಿದ್ದ ಕಡೆ ಮಹಿಳಾ ಮಾರ್ಷಲ್‌ಗಳನ್ನು ಹಾಕಲಾಗಿತ್ತು. ಮಹಿಳಾ ಸದಸ್ಯರಿದ್ದ ಕಡೆ ಪುರುಷ ಮಾರ್ಷಲ್‌ಗಳನ್ನು ಹಾಕಲಾಗಿತ್ತು. ಇದಕ್ಕೆ ಆಕ್ಷೇಪಿಸಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಮಹಿಳಾ ಸಂಸದರಿಗೆ ಸುರಕ್ಷತೆ ಇಲ್ಲ’ ಎಂದು ಕಿಡಿಕಾರಿದರು.

Follow Us:
Download App:
  • android
  • ios