* ಕೊರೋನಾ ಸೋಂಕಿತರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಸಲಕರಣೆ ಲಭ್ಯ* ಕೋವಿಡ್‌ ಚಿಕಿತ್ಸೆ ಸಲಕರಣೆ ಲಾಭದ ಮಿತಿ ಶೇ.70ಕ್ಕೆ ನಿಗದಿ* ಇದರಿಂದ 5 ಉತ್ಪನ್ನಗಳ ದರ ಭಾರೀ ಇಳಿಕೆ

ನವದæಹಲಿ(ಜು.14): ಕೋವಿಡ್‌ ಚಿಕಿತ್ಸೆ ಹಾಗೂ ತಡೆಗೆ ಅಗತ್ಯ ಇರುವ ಪಲ್ಸ್‌ ಆಕ್ಸಿಮೀಟರ್‌, ಡಿಜಿಟಲ್‌ ಥರ್ಮಾಮೀಟರ್‌, ಗ್ಲೂಕೋಮೀಟರ್‌, ನೆಬ್ಯುಲೈಸರ್‌, ಬಿಪಿ ಮಾನಿಟರ್‌ಗಳ ದರ ಭಾರೀ ಇಳಿಕೆಗೆ ನಾಂದಿ ಹಾಡುವ ಘೋಷಣೆಯನ್ನು ಸರ್ಕಾರ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ಸೋಂಕಿತರಿಗೆ ಕೈಗೆಟುಕುವ ದರದಲ್ಲಿ ಈ ವಸ್ತುಗಳ ಲಭ್ಯವಾಗುವ ನಿಟ್ಟಿನಲ್ಲಿ ಈ ವಸ್ತುಗಳ ಮೇಲಿನ ಲಾಭದ ಮಿತಿಯನ್ನು ಕೇಂದ್ರ ಸರ್ಕಾರ ಶೇ.70ಕ್ಕೆ ನಿಗದಿ ಮಾಡಿದೆ. ಈ ಐದು ವೈದ್ಯಕೀಯ ಸಲಕರಣೆಗಳ ಪರಿಷ್ಕರಣೆ ದರವು ಜು.20ರಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರ ಹೇಳಿದೆ.

ಇದಕ್ಕೂ ಮುನ್ನ ಈ ಐದು ಸಲಕರಣೆಗಳ ಲಾಭದ ಮಿತಿಯು ಶೇ.3ರಿಂದ ಶೇ.709ರಷ್ಟಿತ್ತು. ಅಂದರೆ 100 ರು. ವೆಚ್ಚದಲ್ಲಿ ಉತ್ಪಾದನೆಯಾದ ವೈದ್ಯಕೀಯ ಸಲಕರಣೆಯೊಂದನ್ನು ಗರಿಷ್ಠ 709 ರು.ವರೆಗೆ ಲಾಭವಿಟ್ಟುಕೊಂಡು ಮಾರಾಟ ಮಾಡಬಹುದಿತ್ತು. ಆದರೆ ಇದೀಗ 100 ರು. ವಸ್ತುವನ್ನು ಗರಿಷ್ಠ 170 ರು.ಗೆ ಮಾರಬೇಕು.