Asianet Suvarna News Asianet Suvarna News

ಗಲ್ವಾನ್ ಗಡಿ ಘರ್ಷಣೆ ಬಳಿಕ ಮೋದಿ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಭೇಟಿ, ಕೈಕುಲುಕಿ ಶುಭಾಶಯ ವಿನಿಮಯ!

ಇಂಡೋನೇಷಿಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ  ಪ್ರಧಾನಿ ಮೋದಿ ಸೇರಿದಂತೆ ಹಲವು ರಾಷ್ಟ್ರದ ಗಣ್ಯರು ಪಾಲ್ಗೊಂಡಿದ್ದಾರೆ. ಭೋಜನಕೂಟದ ವೇಳೆ ಮೋದಿ ಹಾಗೂ ಚೀನಾ ಅಧ್ಯಕ್ಸ್ ಕ್ಸಿ ಜಿನ್‌ಪಿಂಗ್ ಭೇಟಿಯಾಗಿದ್ದಾರೆ. ಇದು ಭಾರಿ ಸಂಚಲನ ಸೃಷ್ಟಿಸಿದೆ.

G20 summit bali PM Modi Meet China president Xi Jinping greeted each other after 2020 galwan standoff ckm
Author
First Published Nov 15, 2022, 9:14 PM IST

ಬಾಲಿ(ನ.15): ಲಡಾಖ್‌ನ ಗಲ್ವಾಣ್ ಕಣಿವೆಯಲ್ಲಿ ಚೀನಾ ಕುತಂತ್ರದಿಂದ ನಡೆದ ಘರ್ಷಣೆಯಲ್ಲಿ ಭಾರತದ ವೀರ ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆ ಭಾರತ ಹಾಗೂ ಚೀನಾ ನಡುವಿನ ಸಂಬಂಧದ ಅಂತರ ಹೆಚ್ಚಿಸಿದೆ. ಇದಾದ ಬಳಿಕ ಭಾರತ ಚೀನಾ ಕಮಾಂಡರ್ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದೆ. ಆದರೆ ಚೀನಾ ಪ್ರತಿ ಬಾರಿ ನೀಡುವ ಭರವಸೆಯನ್ನು ತಾನೇ ಮುರಿಯುತ್ತಿದೆ. ಈ ಘಟನೆ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬೇಟಿಯಾಗಿದ್ದಾರೆ. ಇಂಡೋನೇಷಿಯಾದ ಬಾಲಿಯಲ್ಲಿ ನಡೆಯುತ್ತಿರುವ ಡಿ20 ಶೃಂಗಸಭೆಯಲ್ಲಿ ಮೋದಿ ಹಾಗೂ ಜಿನ್‌ಪಿಂಗ್ ಕೈಕುಲುಕಿ ಶುಭಾಶಯ ವಿನಿಮಯ ಮಾಡಿದ್ದಾರೆ.

ಸಮರಖಂಡದಲ್ಲಿ ನಡೆದ ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್‌ಪಿಂಗ್ ಪಾಲ್ಗೊಂಡಿದ್ದರು. ಆದರೆ ಈ ನಾಯಕರು ಮುಖಾಮಖಿ ಭೇಟಿಯಾಗರಿಲಿಲ್ಲ. ಇಷ್ಟೇ ಅಲ್ಲ ಯಾವುದೇ ದ್ವಿಪಕ್ಷೀಯ ಮಾತುಕತೆಯನ್ನು ನಡೆಸಿರಲಿಲ್ಲ. ಆದರೆ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಈ ನಾಯಕರು ಭೇಟಿಯಾಗಿದ್ದಾರೆ.

G20 Summit ಯುದ್ಧದ ಸಮಯವಲ್ಲ,ಮೋದಿ ಮಾತು ಪುನರುಚ್ಚರಿಸಿದ ವಿಶ್ವ ನಾಯಕರು!

ಬೈಡನ್ ಜೊತೆ ಮೋದಿ ಸಭೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಲಿಯಲ್ಲಿಂದು ಜಿ-20 ನಾಯಕರ ಶೃಂಗಸಭೆಯ ವೇಳೆ ಅಮೆರಿಕದ ಅಧ್ಯಕ್ಷ ಮಾನ್ಯ ಶ್ರೀ ಜೋಸೆಫ್ ಆರ್. ಬಿಡೆನ್ ಅವರನ್ನು ಭೇಟಿಯಾದರು. ಭವಿಷ್ಯದ ನಿರ್ಣಾಯಕ ಮತ್ತು ಹೊರಹೊಮ್ಮುತ್ತಿರುವ ತಂತ್ರಜ್ಞಾನಗಳು, ಸುಧಾರಿತ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ ಆಧಾರಿತ ಕ್ಷೇತ್ರಗಳಲ್ಲಿನ ಸಹಕಾರ ಸೇರಿದಂತೆ ಭಾರತ ಮತ್ತು ಅಮೆರಿಕ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯನ್ನು ಸುದೃಢಗೊಳಿಸುವ ಕುರಿತಂತೆ ಅವರು ಪರಾಮರ್ಶಿಸಿದರು. ಕ್ವಾಡ್, ಐ2ಯು2 ಮುಂತಾದ ಹೊಸ ಗುಂಪುಗಳಲ್ಲಿ ಭಾರತ ಮತ್ತು ಅಮೆರಿಕ ನಡುವಿನ ನಿಕಟ ಸಹಕಾರದ ಬಗ್ಗೆ ಅವರು ಸಂತೃಪ್ತಿ ವ್ಯಕ್ತಪಡಿಸಿದರು.

 

 

ಇಬ್ಬರೂ ನಾಯಕರು ಸಮಕಾಲೀನ ಜಾಗತಿಕ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. ಭಾರತ-ಅಮೆರಿಕ ಪಾಲುದಾರಿಕೆಯನ್ನು ಬಲಪಡಿಸಲು ಅಧ್ಯಕ್ಷ ಬೈಡನ್ ಅವರ ನಿರಂತರ ಬೆಂಬಲಕ್ಕಾಗಿ ಪ್ರಧಾನಮಂತ್ರಿ ಮೋದಿ ಧನ್ಯವಾದ ಅರ್ಪಿಸಿದರು. ಭಾರತದ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ ಎರಡೂ ದೇಶಗಳು ನಿಕಟ ಸಮನ್ವಯವನ್ನು ಕಾಯ್ದುಕೊಳ್ಳುವುದನ್ನು ಮುಂದುವರಿಸುತ್ತವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

G20 Summit: ಜಗತ್ತಿನ ಅಭಿವೃದ್ಧಿಗೆ ಭಾರತವೇ ಮುಖ್ಯ ಎಂದ ಪ್ರಧಾನಿ ಮೋದಿ!

45 ಗಂಟೆಯಲ್ಲಿ, 20 ಸಭೆಗಳಲ್ಲಿ ಮೋದಿ ಭಾಗಿ
ಬಾಲಿ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 45 ಗಂಟೆಗಳಲ್ಲಿ 20 ಸಭೆಯಗಳಲ್ಲಿ ಭಾಗಿಯಾಗಲಿದ್ದಾರೆ. ಈ ಸಭೆಯ ನಡುವೆಯೇ 10 ಮಂದಿ ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ ಇಂಡೋನೇಷ್ಯಾದ ಭಾರತೀಯ ಸಮುದಾಯದವರು ಹಮ್ಮಿಕೊಂಡಿರುವ ಸಭೆಯಲ್ಲೂ ಅವರು ಭಾಗಿಯಾಗಲಿದ್ದಾರೆ.

ಜಿ20 ಸಮೂಹದಲ್ಲಿ ಜಗತ್ತಿನ ಪ್ರಮುಖ 20 ರಾಷ್ಟ್ರಗಳಿದ್ದು, ಈ ರಾಷ್ಟ್ರಗಳು ಜಗತ್ತಿನ ಒಟ್ಟು ಉತ್ಪನ್ನದಲ್ಲಿ ಶೇ.85ರಷ್ಟುಪಾಲು ಹೊಂದಿವೆ. ಜಗತ್ತಿನ ಮೂರನೇ ಎರಡರಷ್ಟುಜನಸಂಖ್ಯೆ ಈ ದೇಶಗಳಲ್ಲಿದ್ದು, ಜಾಗತಿಕ ವ್ಯಾಪಾರದ ಶೇ.75ರಷ್ಟುಈ ದೇಶಗಳಲ್ಲೇ ನಡೆಯುತ್ತದೆ. ಹೀಗಾಗಿ ಜಿ20 ಶೃಂಗಕ್ಕೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮಹತ್ವವಿದೆ. ಇಂಡೋನೇಷ್ಯಾದಲ್ಲಿ ನಡೆಯುತ್ತಿರುವುದು 17ನೇ ಜಿ20 ಶೃಂಗವಾಗಿದೆ.

Follow Us:
Download App:
  • android
  • ios