Asianet Suvarna News Asianet Suvarna News

ಸೋಶಿಯಲ್‌ ಮೀಡಿಯಾ ಮೂಲಕ ಪರಿಚಿತರಾಗಿದ್ದ 'ಸ್ಮೋಕ್‌ ಬಾಂಬ್‌ ದಾಳಿಕೋರರು'!

ಲೋಕಸಭೆಯೊಳಗೆ ಸ್ಮೋಕ್‌ ಬಾಂಬ್‌ ಎಸೆದ ಯುವಕರ ಹೆಸರು ಸಾಗರ್ ಮತ್ತು ಮನೋರಂಜನ್. ಸದನದ ಹೊರಗಿದ್ದ ಆರೋಪಿಗಳನ್ನು ನೀಲಂ ಮತ್ತು ಅಮೋಲ್ ಶಿಂಧೆ ಎಂದು ಹೇಳಲಾಗಿದೆ. ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಸಂಸತ್ತಿನ ಹೊರಗೆ ಮತ್ತು ಒಳಗೆ ಗದ್ದಲ ಸೃಷ್ಟಿಸಿದ ನಾಲ್ವರು ಆರೋಪಿಗಳು ಪರಸ್ಪರ ಪರಿಚಿತರು ಎನ್ನಲಾಗಿದೆ.
 

four accused of smoke attack met through social media then made a plan to enter Parliament san
Author
First Published Dec 13, 2023, 4:41 PM IST

ನವದೆಹಲಿ (ಡಿ.13): ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಇಂದೂ ಕೂಡ ಎಂದಿನಂತೆ ಸದನದ ಕಲಾಪಗಳು ನಡೆಯುತ್ತಿತ್ತು. ಶೀನ್ಯ ವೇಳೆಯಲ್ಲಿ ಐದು ನಿಮಿಷಗಳು ಉಳಿದಿತ್ತು. ಈ ಹಂತದಲ್ಲಿ ಹಿಂದಿನಿಂದ ದೊಡ್ಡ ಪ್ರಮಾಣದ ಸದ್ದು ಕೇಳಿಸಿತು. ಈ ಸದ್ದು ಸಹಜವಾಗಿರಲಿಲ್ಲ. ಒಬ್ಬ ಯುವಕ ಪ್ರೇಕ್ಷಕರ ಗ್ಯಾಲರಿಯಿಂದ ಕೆಳಗೆ ಜಿಗಿದಿದ್ದ. ಅಷ್ಟರಲ್ಲಿ ಮತ್ತೊಬ್ಬ ಯುವಕ ಕೂಡ ಹಾರಿ ಕೆಳಗೆ ಬಂದಿದ್ದ. ಸ್ವಲ್ಪ ಸಮಯದೊಳಗೆ ಆರೋಪಿಗಳು ಒಂದು ಡೆಸ್ಕ್‌ನಿಂದ ಇನ್ನೊಂದು ಡೆಸ್ಕ್‌ಗೆ ಜಿಗಿಯುತ್ತಾ ಮುಂದೆ ಸಾಗಲು ಪ್ರಾರಂಭಿಸಿದರು. ಸಿಕ್ಕಿಬೀಳುವ ಮೊದಲು, ಅವನು ತನ್ನ ಶೂನಿಂದ ಏನನ್ನೂ ಹೊರಗೆ ತೆಗೆದುಕೊಂಡು ಅದನ್ನು ಅದನ್ನು ಹಾರಿಸಲು ಆರಂಭಿಸಿದ. ಕೆಲವೇ ಸಮಯದಲ್ಲಿ ಸಂಸತ್ತಿನಲ್ಲಿ ಹೊಗೆ ಆವರಿಸಿತು. ಇದೇ ವೇಳೆ ಸಂಸತ್ತಿನ ಹೊರಗೆ ಕೂಡ ಇದೇ ರೀತಿಯ ಘಟನೆ ನಡೆದಿದೆ. ಸಂಸತ್ತಿನ ಹೊರಗೆ ಯುವಕ-ಯುವತಿಯೊಬ್ಬರು ಗ್ಯಾಸ್ ಸಿಂಪಡಿಸಿ ಘೋಷಣೆಗಳನ್ನು ಕೂಗಿದರು. ಇದು ಸಂಸತ್ತಿನ ಆವರಣದ ಹೊರಗೆ ಕೋಲಾಹಲ ಸೃಷ್ಟಿಸಿತು.

ಪೊಲೀಸರು ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಲೋಕಸಭೆಯೊಳಗೆ ಆತಂಕ ಮೆರೆದ ಯುವಕರ ಹೆಸರನ್ನು ಸಾಗರ್ ಮತ್ತು ಮೈಸೂರು ಮೂಲದ ಮನೋರಂಜನ್ ಎನ್ನಲಾಗಿದೆ. ಸದನದ ಹೊರಗಿದ್ದ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ನೀಲಂ ಮತ್ತು ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ. ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಸಂಸತ್ತಿನ ಹೊರಗೆ ಮತ್ತು ಒಳಗೆ ಗದ್ದಲ ಸೃಷ್ಟಿಸಿದ ನಾಲ್ವರು ಆರೋಪಿಗಳು ಪರಸ್ಪರ ಪರಿಚಿತರು ಎನ್ನಲಾಗಿದೆ. ಈ ಆರೋಪಿಗಳಿಗೆ ಒಂದೇ ಒಂದು ಉದ್ದೇಶವಿತ್ತು. ಈ ನಾಲ್ವರು ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನಂತರ ಸಂಸತ್ತಿನ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದರು ಎಂದು ತಿಳಿಸಲಾಗಿದೆ.

ಲೋಕಸಭೆಯೊಳಗೆ ಹೊಗೆ ದಾಳಿ ನಡೆಸಿದ ಮನೋರಂಜನ್‌ ಅವರು ಮೈಸೂರಿನ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರ ಅತಿಥಿಯಾಗಿ ಪ್ರೇಕ್ಷಕರ ಗ್ಯಾಲರಿಗೆ ಬಂದಿದ್ದರು. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಇಬ್ಬರೂ ಸಾರ್ವಜನಿಕ ಗ್ಯಾಲರಿಯಿಂದ ಚೇಂಬರ್‌ಗೆ ಹಾರಿದ್ದಾರೆ. ಸಭಾಧ್ಯಕ್ಷರ ಪೀಠದಲ್ಲಿದ್ದ ಬಿಜೆಪಿ ಸದಸ್ಯ ರಾಜೇಂದ್ರ ಅಗರ್ವಾಲ್ ಸದನದ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.
 

Follow Us:
Download App:
  • android
  • ios