ತಿರುವನಂತಪುರ(ನ.23): ಸಾಮಾಜಿಕ ಮಾಧ್ಯಮ ಸೇರಿದಂತೆ ಯಾವುದೇ ಮಾಧ್ಯಮಗಳಲ್ಲಿ ವ್ಯಕ್ತಿಗೆ ಮಾನಹಾನಿ, ಅಪಮಾನ ಮಾಡುವಂಥ ವಿಷಯ ಸೃಷ್ಟಿ, ಮುದ್ರಣ ಮತ್ತು ಪ್ರಸಾರ ಮಾಡಿದರೆ 5 ವರ್ಷ ಜೈಲು ಮತ್ತು 10000 ರು.ವರೆಗೆ ದಂಡ ವಿಧಿಸುವ ಕಾನೂನೊಂದನ್ನು ಕೇರಳದ ಎಡರಂಗ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದೆ.

ಉಪನ್ಯಾಸಕರ ಹುದ್ದೆ ನೇಮಕಾತಿ: ಆದೇಶ ಸಿಕ್ಕರೂ ಸೇವಾ ಭದ್ರತೆ ಇಲ್ಲ..!

ಆದರೆ ಸರ್ಕಾರ ಈ ಕ್ರಮವನ್ನು ವಿಪಕ್ಷಗಳು ಕಟುವಾಗಿ ಟೀಕಿಸಿದ್ದು, ಇದು ಮಾಧ್ಯಮಗಳನ್ನು ಹತ್ತಿಕ್ಕುವ ಯತ್ನ. ಸರ್ಕಾರದ ವಿರುದ್ಧದ ಧ್ವನಿಯನ್ನು ಹತ್ತಿಕುವ ಕ್ರಮವಷ್ಟೇ ಅಲ್ಲದೆ ವಾಕ್‌ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ಕಿಡಿಕಾರಿವೆ.

ಆದರೆ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಆನ್‌ಲೈನ್‌ ಮೂಲಕ ನಡೆಯುತ್ತಿರುವ ಕಿರುಕುಳ ಮತ್ತು ಬೆದರಿಕೆಗಳು ಹೆಚ್ಚಾಗಿರುವ ಈ ದಿನಮಾನಗಳಲ್ಲಿ ಹೊಸ ಕಾನೂನು ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಣೆ ಮಾಡಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸರ್ಕಾರ ಸಮರ್ಥಿಸಿಕೊಂಡಿದೆ.