Asianet Suvarna News Asianet Suvarna News

ಕಾನ್ಪುರದಲ್ಲಿ ರಷ್ಯಾ ಲಸಿಕೆ ಪರೀಕ್ಷೆ, ಮುಂದಿನ ವಾರದಿಂದ ಟೆಸ್ಟ್‌!

ಕಾನ್ಪುರದಲ್ಲಿ ರಷ್ಯಾ ಲಸಿಕೆ ಪರೀಕ್ಷೆ - ಮುಂದಿನ ವಾರದಿಂದ ಟೆಸ್ಟ್‌| ತಿಂಗಳ ಬಳಿಕ ರಿಸಲ್ಟ್‌?| ಫೈಜರ್‌ನಂತೆ ಇದನ್ನೂ -70 ಡಿಗ್ರಿ ತಾಪದಲ್ಲೇ ಇಡಬೇಕು!

First batch of Sputnik V vaccine to arrive in Kanpur medical college for Phase 2 3 trials pod
Author
Bangalore, First Published Nov 16, 2020, 1:47 PM IST

ಕಾನ್ಪುರ(ನ.16): ಜಗತ್ತಿನ ಮೊಟ್ಟಮೊದಲ ಕೋವಿಡ್‌-19 ಲಸಿಕೆ ಎಂಬ ಖ್ಯಾತಿಯ ರಷ್ಯಾದ ಸ್ಪುಟ್ನಿಕ್‌-5 ಕೊನೆಯ ಹಂತದ ಪ್ರಾಯೋಗಿಕ ಪರೀಕ್ಷೆಗೆ ಈಗಾಗಲೇ ಭಾರತಕ್ಕೆ ಬಂದಿದ್ದು, ಲಸಿಕೆಯ 2 ಮತ್ತು 3ನೇ ಹಂತದ ಪರೀಕ್ಷೆಯು ಮುಂದಿನ ವಾರ ಉತ್ತರ ಪ್ರದೇಶದ ಕಾನ್ಪುರದ ಗಣೇಶ್‌ ಶಂಕರ್‌ ವಿದ್ಯಾರ್ಥಿ ವೈದ್ಯಕೀಯ ಕಾಲೇಜಿನಲ್ಲಿ ನಡೆಯಲಿದೆ. ಈ ಪರೀಕ್ಷೆಗೆ 180 ಮಂದಿ ಸ್ವಯಂ ಪ್ರೇರಿತವಾಗಿ ಭಾಗಿಯಾಗಲು ನೋಂದಣಿಯಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಲೇಜು ಪ್ರಾಂಶುಪಾಲರಾದ ಆರ್‌.ಬಿ ಕಮಲ್‌, ‘21 ದಿನಗಳ ಅಂತರದಲ್ಲಿ ಒಮ್ಮೆ, ಎರಡು ಅಥವಾ ಮೂರು ಬಾರಿ ಲಸಿಕೆಯನ್ನು ನೀಡಲಾಗುತ್ತದೆ. ಲಸಿಕೆಯ ಪರಿಣಾಮವನ್ನು ಒಂದು ತಿಂಗಳವರೆಗೆ ಗಮನಿಸಿದ ಬಳಿಕ ಅದರ ಫಲಿತಾಂಶವನ್ನು ಘೋಷಿಸಲಾಗುತ್ತದೆ. ಆದಾಗ್ಯೂ ನಂತರದ 7 ತಿಂಗಳವರೆಗೂ ಲಸಿಕೆಯ ಪರಿಣಾಮವನ್ನು ಅಧ್ಯಯನ ಮಾಡಲಾಗುತ್ತದೆ’ ಎಂದು ತಿಳಿಸಿದ್ದಾರೆ.

ಈ ಮಧ್ಯೆ ಸಾಕಷ್ಟುಭರವಸೆಯನ್ನು ಹುಟ್ಟುಹಾಕಿರುವ ಸ್ಪುಟ್ನಿಕ್‌ ಲಸಿಕೆ ನಿರ್ವಹಣೆ ಭಾರತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುವ ನಿರೀಕ್ಷೆ ಇದೆ. ಫೈಜರ್‌ ಲಸಿಕೆಯಂತೆ ಸ್ಪುಟ್ನಿಕ್‌ ಅನ್ನೂ -20ರಿಂದ -70 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಇಡಬೇಕು. ದೇಶಾದ್ಯಂತ ಎಲ್ಲೆಡೆ ಈ ಸೌಲಭ್ಯ ಒದಗಿಸಲು ಭಾರತಕ್ಕೆ ಸಾಧ್ಯವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಆಗಸ್ಟ್‌ 11ರಂದು ‘ಸ್ಪುಟ್ನಿಕ್‌’ ಜಗತ್ತಿನ ಮೊಟ್ಟಮೊದಲ ಕೊರೋನಾ ಲಸಿಕೆ ಎಂದು ರಷ್ಯಾ ಘೋಷಿಸಿತ್ತು. ಲಸಿಕೆಯ ಮಾನವನ ಮೇಲಿನ 2 ಮತ್ತು 3ನೇ ಹಂತದ ಪರೀಕ್ಷೆಗೆ ರೆಡ್ಡೀಸ್‌ ಲ್ಯಾಬೋರೇಟರಿ ಇತ್ತೀಚೆಗಷ್ಟೇ ಡಿಸಿಜಿಐನಿಂದ ಅನುಮೋದನೆ ಪಡೆದಿತ್ತು.

Follow Us:
Download App:
  • android
  • ios