ನವದೆಹಲಿ( ಜ. 24) ಪುಣೆಯ  ಕೊರೋನಾ ಲಸಿಕೆ ತಯಾರಿಕೆ ಕೇಂದ್ರದಲ್ಲಿ ನಡೆದ ಅಗ್ನಿ ಅವಘಡ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು.  ಅದೇ ದಿನ ಶಿವಮೊಗ್ಗದಲ್ಲಿ ಸ್ಫೋಟಕ ತುಂಬಿದ್ದ ಲಾರಿ ಸ್ಫೋಟಿಸಿ ಅವಘಡ ಸಂಭವಿಸಿತ್ತು. 

ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಿಂದ ಘಟನೆಯೊಂದು ವರದಿಯಾಗಿದ್ದು ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿರುವ ಆಕಾಶವಾಣಿ ಭವನದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.   ಅಗ್ನಿಶಾಮಕ ದಳ ಸ್ಥಳಕ್ಕೆ ತೆರಳಿ  ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ.

ಪುಣೆ ಅಗ್ನಿ ಅವಘಡಕ್ಕೆ ಅಸಲಿ ಕಾರಣ ಏನು?

ಮುಂಜಾನೆಯೇ  ಕಟ್ಟಡದಲ್ಲಿ ಬೆಂಕಿ  ಕಾಣಿಸಿಕೊಂಡ ಮಾಹಿತಿ ಬಂದಿದೆ.  ಕೊಠಡಿ ಸಂಖ್ಯೆ 101 ರಿಂದ ಬೆಂಕಿ ಕಾಣಿಸಿಕೊಂಡಿತ್ತು ಎಂದು ಡಿಎಫ್‌ಎಸ್ ನಿರ್ದೇಶಕ ಅತುಲ್ ಗರ್ಗ್ ಮಾಹಿತಿ ನೀಡಿದ್ದಾರೆ.

ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗಿದೆ.. ಎರಡು ದಿನಗಳ ಹಿಂದೆ ಎಂಜಿನಿಯರ್ಸ್ ಕಟ್ಟಡದಲ್ಲೂ ಬೆಂಕಿ ಕಾಣಿಸಿಕೊಂಡ ವರದಿಯಾಗಿತ್ತು.