ಚೆನ್ನೈ[ಫೆ.09]: ದೇಶದ ಆರ್ಥಿಕತೆಯ ಪ್ರತಿಯೊಂದು ವಿಚಾರಗಳ ಕುರಿತಾಗಿ ಗಮನ ಸೆಳೆಯಬೇಕಾದ ಕಾರಣದಿಂದಾಗಿ 2 ಗಂಟೆಗಳಿಗಿಂತ ಹೆಚ್ಚು ಹೊತ್ತು ಬಜೆಟ್‌ ಭಾಷಣ ಅನಿವಾರ್ಯವಾಗಿತ್ತು ಎಂದು ತಮ್ಮ ದೀರ್ಘಾವಧಿ ಭಾಷಣವನ್ನು ಸಚಿವೆ ನಿರ್ಮಲಾ ಸೀತಾರಾಮನ್‌ ಸಮರ್ಥಿಸಿಕೊಂಡಿದ್ದಾರೆ.

ಅಲ್ಲದೆ, ಈ ಮೂಲಕ ನಾಗರಿಕರನ್ನು ತೊಂದರೆಗೀಡು ಮಾಡಿದ್ದಕ್ಕೆ ವಿಷಾದಿಸುವುದಾಗಿಯೂ ನಿರ್ಮಲಾ ಹೇಳಿದ್ದಾರೆ.

ಬೋರಿಂಗ್ ಬಜೆಟ್: ಕಣ್ಣು ಮಿಟುಕಿಸಿದ ಸಂಸದನ ವಿಡಿಯೋ ವೈರಲ್!

ಶನಿವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ದಾಖಲೆ ನಿರ್ಮಿಸಬೇಕೆಂಬ ಕಾರಣಕ್ಕೆ ಅಷ್ಟುದೀರ್ಘಾವಧಿವರೆಗೆ ಭಾಷಣ ಓದಲಿಲ್ಲ. ಬದಲಾಗಿ, ಅದು ಅನಿವಾರ್ಯವಾಗಿತ್ತು. ಈ ಮೂಲಕ ನಿಮಗೆಲ್ಲಾ ತೊಂದರೆ ಆಗಿದ್ದರೆ, ಕ್ಷಮಿಸಿ’ ಎಂದು ಹೇಳಿದ್ದಾರೆ.