ಗುರುವಾರ ನಿಧನರಾದ ಜೆಡಿಯು ಮಾಜಿ ಅಧ್ಯಕ್ಷ ಶರದ್‌ ಯಾದವ್‌ ಅವರಿಗೆ ಪಕ್ಷಾತೀತವಾಗಿ ರಾಜಕೀಯ ನಾಯಕರು ಶ್ರದ್ಧಾಂಜಲಿ ಸಲ್ಲಿಸಿದರು.

ನವದೆಹಲಿ: ಗುರುವಾರ ನಿಧನರಾದ ಜೆಡಿಯು ಮಾಜಿ ಅಧ್ಯಕ್ಷ ಶರದ್‌ ಯಾದವ್‌ ಅವರಿಗೆ ಪಕ್ಷಾತೀತವಾಗಿ ರಾಜಕೀಯ ನಾಯಕರು ಶ್ರದ್ಧಾಂಜಲಿ ಸಲ್ಲಿಸಿದರು. ಶುಕ್ರವಾರ ಶರದ್‌ ಮನೆಗೆ ತೆರಳಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಹುಲ್‌ ಗಾಂಧಿ, ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ಬಿಹಾರದ ಮಾಜಿ ಸಿಎಂ ರಾಬ್ಡಿ ದೇವಿ, ಹರಾರ‍ಯಣ ಸಿಎಂ ಎಂ.ಎಲ್‌. ಖಟ್ಟರ್‌ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಅಂತಿಮ ದರ್ಶನ ಪಡೆದರು. ಶರದ್‌ ಅವರ ಅಂತ್ಯಕ್ರಿಯೆಯನ್ನು ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ಅವರ ಹುಟ್ಟೂರಾದ ಅಂಕ್‌ಮೌದಲ್ಲಿ ಇಂದು ನೆರವೇರಿಸಲಾಗುವುದು.

Sharad Yadav Passes Away: 10 ಬಾರಿ ಸಂಸತ್‌ಗೆ ಆಯ್ಕೆಯಾಗಿದ್ದ ಜೆಡಿಯು ಮಾಜಿ ಅಧ್ಯಕ್ಷ ಶರದ್‌ ಯಾದವ್‌ ನಿಧನ