Asianet Suvarna News Asianet Suvarna News

ಸತ್ಯನಾರಾಯಣ ಪೂಜೆ ಉಲ್ಟಾ ಹೊಡೀತು ಎಂದು ಅರ್ಚಕನಿಗೆ ಥಳಿತ

ಮನೆಯಲ್ಲಿ ಮಾಡಿಸಿದ ಸತ್ಯನಾರಾಯಣ ಪೂಜೆ ನಿರೀಕ್ಷಿತ ಫಲ ಕೊಡಲಿಲ್ಲ ಎಂಬ ಕಾರಣಕ್ಕೆ ಪೂಜಾರಿಯನ್ನು ತಂದೆ ಮಕ್ಕಳು ಸೇರಿ ಥಳಿಸಿದ ಘಟನೆ ಮಧ್ಯಪ್ರದೇಶ ಇಂದೋರ್‌ನಲ್ಲಿ ನಡೆದಿದೆ.

father and son assulted on priest in Madhya pradesh after sathyanarayana puja akb
Author
First Published Oct 4, 2022, 7:40 AM IST

ಇಂದೋರ್‌: ಮನೆಯಲ್ಲಿ ಮಾಡಿಸಿದ ಸತ್ಯನಾರಾಯಣ ಪೂಜೆ ನಿರೀಕ್ಷಿತ ಫಲ ಕೊಡಲಿಲ್ಲ ಎಂಬ ಕಾರಣಕ್ಕೆ ಪೂಜಾರಿಯನ್ನು ತಂದೆ ಮಕ್ಕಳು ಸೇರಿ ಥಳಿಸಿದ ಘಟನೆ ಮಧ್ಯಪ್ರದೇಶ ಇಂದೋರ್‌ನಲ್ಲಿ ನಡೆದಿದೆ.

ಕುಂಜ್‌ಬಿಹಾರಿ (60) ಥಳಿತಕ್ಕೊಳಗಾದ ವ್ಯಕ್ತಿ. ಲಕ್ಷ್ಮೀಕಾಂತ್‌ ಶರ್ಮಾ (Lakshmikanth sharma) ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ (Sathyanarayana Puja)ನಡೆಸಿ ಮನೆಗೆ ಮರಳಿದ್ದೆ. ಆದರೆ ಪೂಜೆ ಮುಗಿದ ಬಳಿಕ ಶರ್ಮಾ ಅವರ ಪುತ್ರ ವಿಚಿತ್ರವಾಗಿ ಆಡಲು ಆರಂಭಿಸಿದ್ದ. ಹೀಗಾಗಿ ಪೂಜೆಯಲ್ಲಿ ಏನೋ ದೋಷ ಆಗಿದೆ ಎಂದು ಎಣಿಸಿ ಅಪ್ಪ-ಮಕ್ಕಳು ರಾತ್ರಿ ನನ್ನ ಮನೆಗೆ ಆಗಮಿಸಿ ಹಲ್ಲೆ ನಡೆಸಿದ್ದಾರೆ ಎಂದು ಕುಂಜ್‌ ಬಿಹಾರಿ (Kunj bihari) ದೂರಿದ್ದಾರೆ. ಈ ವೇಳೆ ನೆರೆಹೊರೆಯವರು ಅರ್ಚಕರನ್ನು (Priest) ರಕ್ಷಿಸಿದ್ದಾರೆ. ಪ್ರಕರಣ ಸಂಬಂಧ ಲಕ್ಷ್ಮಿಕಾಂತ್‌ ಅವರ ಕುಟುಂಬದ ಮೂವರನ್ನು ಬಂಧಿಸಲಾಗಿದೆ.

Follow Us:
Download App:
  • android
  • ios