Faizabad ರೈಲು ನಿಲ್ದಾಣದ ಮರುನಾಮಕರಣಕ್ಕೆ ಮುಂದಾದ ಯೋಗಿ ಸರ್ಕಾರ !
-ಫೈಜಾಬಾದ್ ರೈಲು ನಿಲ್ದಾಣದ ಹೆಸರು ಅಯೋಧ್ಯಾ ಕ್ಯಾಂಟ್ ಎಂದು ಬದಲಾಯಿಸಿದ ಉತ್ತರಪ್ರದೇಶ ಸರ್ಕಾರ
-ಈ ಹಿಂದೆ ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯಾ ಎಂದು ಮರುನಾಮಕಾರಣ ಮಾಡಿದ್ದ ಯೋಗಿ
-2018 ರಲ್ಲಿ ಪ್ರಯಾಗ್ ರಾಜ್ ಆಗಿ ಬದಲಾಗಿದ್ದ ಅಲಹಾಬಾದ್!
ಉತ್ತರಪ್ರದೇಶ (ಅ. 23) : ಉತ್ತರಪ್ರದೇಶದ ಫೈಜಾಬಾದ್(Faizabad) ಜಿಲ್ಲೆಯನ್ನು ಅಯೋಧ್ಯಾ (Ayodhya) ಎಂದು ಮರುನಾಮಕರಣ ಮಾಡಿದ ಮೂರು ವರ್ಷಗಳ ನಂತರ ಈಗ ಫೈಜಾಬಾದ್ ರೈಲು ನಿಲ್ದಾಣವನ್ನು ಕೂಡ ಅಯೋಧ್ಯಾ ಕ್ಯಾಂಟ್ (Ayodhya Cantt) ಎಂದು ಮರುನಾಮಕರಣ ಮಾಡುವ ನಿರ್ಧಾರವನ್ನು ಯೋಗಿ ಸರ್ಕಾರ ಕೈಗೊಂಡಿದೆ. ಉತ್ತರಪ್ರದೇಶ ಮುಖ್ಯಮಂತ್ರಿಯವರ ಅಧಿಕೃತ ಖಾತೆಯಿಂದ ಈ ಬಗ್ಗೆ ಟ್ವೀಟ್ ಮಾಡಲಾಗಿದ್ದು ಯೋಗಿ ಆದಿತ್ಯನಾಥ್ (Yogi Adityanath) ಈ ನಿರ್ಧಾರ ಕೈ ಗೊಂಡಿದ್ದಾರೆ ಎಂದು ತಿಳಿಸಲಾಗಿದೆ.
2018 ರಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಫೈಜಾಬಾದ್ ಜಿಲ್ಲೆಯ ಹೆಸರನ್ನು ಅಯೋಧ್ಯಾ ಎಂದು ಯೋಗಿ ಸರ್ಕಾರ ಮರುನಾಮಕರಣ ಮಾಡಿತ್ತು. ಅಲ್ಲದೇ 2018ರ ಅಕ್ಟೋಬರ್ ತಿಂಗಳಿನಲ್ಲಿ ಅಲಹಾಬಾದ್ (Alahabad) ಜಿಲ್ಲೆಯನ್ನು ಪ್ರಯಾಗ್‌ರಾಜ್ (Prayagraj) ಎಂದು ಮರುನಾಮಕರಣ ಮಾಡಲಾಗಿತ್ತು. 2018 ಜೂನ್‌ನಲ್ಲಿ ಮುಘಲ್‌ಸರಾಯಿ( Mughalsarai) ರೈಲು ನಿಲ್ದಾಣದ ಹೆಸರನ್ನು ದೀನ್‌ದಯಾಲ್ ಉಪಾಧ್ಯಾಯ್ (Deen Dayal Upadhyay) ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿತ್ತು. ಹೆಸರು ಬದಲಾವಣೆ ಮಾಡುವ ಉತ್ತರಪ್ರದೇಶದ ಈ ಯೋಜನೆ ದೇಶದೆಲ್ಲೆಡೆ ಸಂಚಲನ ಮೂಡಿಸಿತ್ತು. ಸಾಕಷ್ಟು ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿ ರಾಷ್ಟ್ರಮಟ್ಟದಲ್ಲಿ ಹಲವಾರು ಚರ್ಚೆಗಳು ನಡೆದಿದ್ದವು.
ಉ. ಪ್ರದೇಶ ಪಡೆಯಲು ಕಾಂಗ್ರೆಸ್‌ನ ಸಪ್ತ ಪ್ರತಿಜ್ಞೆ: ಇದು ಪ್ರಿಯಾಂಕಾ ಮಾಸ್ಟರ್ ಪ್ಲಾನ್!
ಅಲಹಾಬಾದ್ ನಗರವನ್ನು ’ಪ್ರಯಾಗ್ ರಾಜ್’ ಎಂದು ಮರು ನಾಮಕರಣ ಮಾಡುವ ಪ್ರಸ್ತಾವನೆಗೆ ಉತ್ತರ ಪ್ರದೇಶ ಸರ್ಕಾರ ಅಧಿಕೃತವಾಗಿ ಅನುಮೋದನೆ ನೀಡಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ರಾಜ್ಯಪಾಲ ರಾಮ್ ನಾಯಕ್ ಈ ಪ್ರಸ್ತಾವನೆಗೆ ಸಮ್ಮತಿ ನೀಡುವ ಮೂಲಕ ಅಲಹಾಬಾದ್ ಹೆಸರನ್ನು ಪ್ರಯಾಗ್ ರಾಜ್ ಎಂದು ಬದಲಾಯಿಸಿದ್ದರು. ಅಲಹಾಬಾದನ್ನು ಪ್ರಯಾಗ್ ರಾಜ್ ಆಗಿ ಮಾಡುವುದು ಬಹುತೇಕ ಜನರ ಆಸೆಯಾಗಿತ್ತು. ಇದೊಂದು ಉತ್ತಮ ಸಂದೇಶವನ್ನು ನೀಡಲಿದೆ. ಎಲ್ಲರೂ ಒಪ್ಪಿದರೆ ಅಲಹಾಬಾದ್ ಪ್ರಯಾಗ್ ರಾಜ್ ಆಗಲಿದೆ. ಇದು ಮುಂದಿನ ದಿನಗಳಲ್ಲಿ ಉತ್ತಮ ಮುನ್ನುಡಿಯಾಗಲಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದರು.
ಯುಪಿ ಚುನಾವಣೆಗೆ ಕಾಂಗ್ರೆಸ್ ನಿಂದ ಪ್ರತಿಜ್ಞಾ ಯಾತ್ರೆ: ಬಿಜೆಪಿಗೆ ಮುಳುವಾಗುತ್ತಾ ಕೈ ತಂತ್ರ?
ಈಗ ಫೈಜಾಬಾದ್ ರೈಲು ನಿಲ್ದಾಣವನ್ನು ಕೂಡ ಅಯೋಧ್ಯಾ ಕ್ಯಾಂಟ್ ಎಂದು ಮರುಣಾಮಕರಣ ಮಾಡುವ ನಿರ್ಧಾರ ಕೈಗೊಂಡಿದೆ ಯೋಗಿ ಸರ್ಕಾರ. ಈ ಬೆನ್ನಲ್ಲೇ ಇತ್ತೀಚೆಗೆ ಉತ್ತಪ್ರದೇಶದ ಹಲವಾರು ಸಂಘಟನೆಗಳು ಇತರ ಜಿಲ್ಲೆಗಳ ಹೆಸರು ಬದಲಾಯಿಸುವಂತೆ ಒತ್ತಾಯಿಸಿದ್ದವು. ಅಜಮ್‌ನಗರವನ್ನು (Azamgarh) ಆರ್ಯನಗರ, ಅಲಿಘರ್‌ಅನ್ನು (Aligarh) ಹರಿಘರ್ ಮತ್ತು ಆಗ್ರಾವನ್ನು (Agra) ಅಗ್ರವನ ಎಂದು ಮರುನಾಮಕರಣ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ.
ರಾಮಾಯಣ ರಸಪ್ರಶ್ನೆ ಸ್ಪರ್ಧೆ: ಗೆದ್ದರೆ ಅಯೋಧ್ಯೆಗೆ ವಿಮಾನ ಪ್ರಯಾಣ ಭಾಗ್ಯ!!
ರಾಮಾಯಾಣ ಮಹಾಕಾವ್ಯ(Ramayana) ಆಧರಿಸಿ ಮಧ್ಯಪ್ರದೇಶ ಸರ್ಕಾರವು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಿದೆ. ಇದರಲ್ಲಿ ವಿಜೇತರಾಗುವವರಿಗೆ ವಿಮಾನದ ಮೂಲಕ ಅಯೋಧ್ಯೆಗೆ(Ayodhya) ಹೋಗುವ ಅವಕಾಶ ದೊರೆಯಲಿದೆ ಎಂದು ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಇಲಾಖೆ ಸಚಿವೆ ಉಷಾ ಠಾಕೂರ್(Usha Thakur) ಹೇಳಿದ್ದಾರೆ.
ರಾಮಾಯಣ ರಸಪ್ರಶ್ನೆ ಸ್ಪರ್ಧೆ: ಗೆದ್ದರೆ ಅಯೋಧ್ಯೆಗೆ ವಿಮಾನ ಪ್ರಯಾಣ ಭಾಗ್ಯ!!
ಡಾ.ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ರಾಮಚರಿತ ಮಾನಸ ಕೃತಿಯ ಅಯೋಧ್ಯಾಖಾಂಡದ ಮೇಲೆ ಆಯೋಜಿಸಿದ್ದ ರಸಪ್ರಶ್ನೆ(Quiz) ಸ್ಫರ್ಧೆಯನ್ನು ಉದ್ಘಾಟಿಸಿ ಅವರು ಈ ವಿಷಯ ತಿಳಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸ್ಪರ್ಧೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ಸ್ಪರ್ಧೆಯಲ್ಲಿ ಯಾರು ಭಾಗವಹಿಸಬಹುದು ಹಾಗೂ ಎಷ್ಟು ಜನರನ್ನು ವಿಜೇತರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂಬ ವಿವರವನ್ನು ಅವರು ನೀಡಿಲ್ಲ.