ಮಹಾಬಲೀಪುರಂನಲ್ಲಿ ಪ್ರಧಾನಿ ತೋರಿಕೆಗೆ ಅಥವಾ ಕ್ಯಾಮೆರಾ ಎದುರಿಗೆ ಕಸ ಹೆಕ್ಕುವ ಪ್ರಹಸನ ನಡೆಸಿದ್ದಾರೆ ಎಂದು ಕೆಲವರು ಆಡಿಕೊಂಡಿದ್ದರು. ಇದಕ್ಕೆ ಇಂಬು ನೀಡುವಂತೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಹಾಗೂ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ 3 ಫೋಟೋಗಳನ್ನು ಸೋಷಿಯಲ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಚೀನಾ ಅಧ್ಯಕ್ಷ ಕ್ಸಿ-ಜಿನ್‌ಪಿಂಗ್‌ ಜೊತೆ 2 ದಿನಗಳ ಕಾಲ ಅನೌಪಚಾರಿಕ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ಆಗಮಿಸಿದ್ದರು. ಶನಿವಾರ ಮಾಮಲಿಪುರಂ ಕರಾವಳಿ ತೀರದಲ್ಲಿ ವಾಯುವಿಹಾರ ನಡೆಸುವ ವೇಳೆ ಕಸ ಆಯ್ದಿದ್ದರು. ಬೀಚ್‌ ಬದಿಯಲ್ಲಿ ಕಸ ಹೆಕ್ಕುವ ಪ್ರಧಾನಿ ಮೋದಿ ವಿಡಿಯೋ ಸಿಕ್ಕಾಪಟ್ಟೆವೈರಲ್‌ ಆಗಿತ್ತು. ಸ್ವತಃ ಪ್ರಧಾನಿ ಈ ವಿಡಿಯೋವನ್ನು ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದರು.

ಆದರೆ ಪ್ರಧಾನಿ ತೋರಿಕೆಗೆ ಅಥವಾ ಕ್ಯಾಮೆರಾ ಎದುರಿಗೆ ಕಸ ಹೆಕ್ಕುವ ಪ್ರಹಸನ ನಡೆಸಿದ್ದಾರೆ ಎಂದು ಕೆಲವರು ಆಡಿಕೊಂಡಿದ್ದರು. ಇದಕ್ಕೆ ಇಂಬು ನೀಡುವಂತೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಹಾಗೂ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ 3 ಫೋಟೋಗಳನ್ನು ಸೋಷಿಯಲ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. 2 ಫೋಟೋದಲ್ಲಿ ಮೋದಿ ಕಸ ಆಯುವ ಚಿತ್ರ, ಮತ್ತೊಂದರಲ್ಲಿ ಹತ್ತರಿಂದ 15 ಜನರು ಕ್ಯಾಮೆರಾ ಹಿಡಿದು ಶೂಟ್‌ ಮಾಡುತ್ತಿರುವ ಚಿತ್ರವಿದೆ. ಅಂದರೆ ಮೋದಿ ಕ್ಯಾಮೆರಾ ಎದುರಿಗೆ ಕಸ ಹೆಕ್ಕುವ ಪೋಸ್‌ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಫೋಟೋಗಳು ಸದ್ಯ ವೈರಲ್‌ ಆಗುತ್ತಿವೆ.

Scroll to load tweet…

ಆದರೆ ನಿಜಕ್ಕೂ ಪ್ರಧಾನಿ ಮೋದಿ ಕಸ ಆಯುವಾಗ ಗುಂಪೊಂದು ಫೋಟೋಶೂಟ್‌ ನಡೆಸುತ್ತಾ ನಿಂತಿತ್ತೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಆಲ್ಟ್‌ನ್ಯೂಸ್‌ ಸಂಸ್ಥೆಯು ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ 3ನೇ ಚಿತ್ರ ಸ್ಕಾಟ್‌ಲ್ಯಾಂಡ್‌ನ ವೆಸ್ಟ್‌ ಸ್ಯಾಂಡ್‌ ಬೀಚಿನದ್ದು ಎಂದು ತಿಳಿದುಬಂದಿದೆ. ಈ ಸ್ಥಳ ಸಿನಿಮಾ ಚಿತ್ರೀಕರಣಕ್ಕೆ ಹೆಸರಾಗಿದೆ. ಹೀಗೆ ಯಾವುದೋ ಸಿನಿಮಾ ಚಿತ್ರೀಕರಣ ನಡೆಸುತ್ತಿದ್ದ ಜನರ ಫೋಟೋವನ್ನು ಬಳಸಿಕೊಂಡು ಮೋದಿ ಕಸ ಆಯುವುದನ್ನು ಚಿತ್ರೀಕರಿಸಲಾಗುತ್ತುತ್ತು ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್