ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶ್ವಬ್ಯಾಂಕಿನಿಂದ ಪಡೆದ ಎಲ್ಲಾ ಸಾಲವನ್ನೂ ಚುಕ್ತಾ ಮಾಡಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶ್ವಬ್ಯಾಂಕಿನಿಂದ ಪಡೆದ ಎಲ್ಲಾ ಸಾಲವನ್ನೂ ಚುಕ್ತಾ ಮಾಡಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವೈರಲ್‌ ಆಗಿರುವ ಪೂರ್ಣ ಸಂದೇಶ ಹೀಗಿದೆ, ‘70 ವರ್ಷದಲ್ಲಿ ವಿಶ್ವಬ್ಯಾಂಕಿನಿಂದ ಸಾಲ ಪಡೆದವರಲ್ಲಿ ಭಾರತ ಮುಖ್ಯವಾದ ದೇಶ. ಹಾಗಾಗಿ ಭಾರತದ ಪ್ರಜೆಯೂ ಹುಟ್ಟುತ್ತಲೇ ಸಾಲಗಾರನಾಗಿರುತ್ತಿದ್ದ. ಶ್ರೇಷ್ಠ ಅರ್ಥಶಾಸ್ತ್ರಜ್ಞರ ಕೈಲಿ ಬಗೆಹರಿಯದ ಈ ಸಮಸ್ಯೆಯನ್ನು ನಮ್ಮ ಚಾಯ್‌ವಾಲಾ ಪರಿಹರಿಸಿದ್ದಾರೆ.

fact Check: ಅದಾನಿ ಪತ್ನಿಗೆ ತಲೆಬಾಗಿ ನಮಸ್ಕರಿಸಿದ್ರಾ ಪ್ರಧಾಮಿ ಮೋದಿ?

Scroll to load tweet…

6 ವರ್ಷದಲ್ಲಿ ಮೋದಿ ಭಾರತೀಯರು ಮತ್ತು ಭಾರತದ ಹಣೆಬರಹ ಬದಲಿಸಿದ್ದಾರೆ. ಮೋದಿ ವಿಶ್ವಬ್ಯಾಂಕಿನಿಂದ ಪಡೆದ ಎಲ್ಲಾ ಸಾಲವನ್ನೂ ತೀರಿಸಿದ್ದಾರೆ’ ಎಂದಿದೆ. ಭಾರತದ ಶಾಶ್ವತ ಪ್ರತಿನಿಧಿ ಸೈಯದ್‌ ಅಕ್ಬರುದ್ದೀನ್‌ ಅವರ ಟ್ವೀಟರ್‌ ಖಾತೆಯಲ್ಲಿ ಮಾಡಿದ್ದ ಟ್ವೀಟ್‌ ಸ್ಕ್ರೀನ್‌ಶಾಟ್‌ ತೆಗೆದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ಈ ಮೇಲಿನ ಒಕ್ಕಣೆ ಬರೆಯಲಾಗುತ್ತಿದೆ.

Scroll to load tweet…

ಆದರೆ ನಿಜಕ್ಕೂ ಮೋದಿ ಸರ್ಕಾರ ವಿಶ್ವಸಂಸ್ಥೆಯಿಂದ ಪಡೆದ ಎಲ್ಲಾ ಸಾಲವನ್ನು ತೀರಿಸಿದೆಯೇ ಎಂದು ಪರಿಶೀಲಿಸಿದಾಗ ಅಕ್ಬರುದ್ದೀನ್‌ ವಿಶ್ವಸಂಸ್ಥೆಯ ವೇತನ ಬಾಕಿ ಬಗ್ಗೆ ಟ್ವೀಟ್‌ ಮಾಡಿದ್ದರೇ ಹೊರತು ಸಾಲ ಬಾಕಿ ಕುರಿತಲ್ಲ. ವಿಶ್ವಸಂಸ್ಥೆಯ ಆರ್ಟಿಕಲ್‌ 17ರ ಪ್ರಕಾರ ಸಂಸ್ಥೆಯ ಎಲ್ಲಾ ಖರ್ಚನ್ನು ಸಾಮಾನ್ಯ ಸಭೆಯ ಸದಸ್ಯ ರಾಷ್ಟ್ರಗಳು ನೀಡಬೇಕು. ಭಾರತ ಈ ಹಣವನ್ನು ಸಂದಾಯ ಮಾಡಿದೆ ಎನ್ನಲಾಗಿದೆ. ಆದರೆ ಭಾರತ ವಿಶ್ವಬ್ಯಾಂಕಿನಿಂದ ಪಡೆದ ಸಾಲವನ್ನು ಮರುಪಾವತಿ ಮಾಡಿಲ್ಲ. ಅಂಕಿಅಂಶವೊಂದರ ಪ್ರಕಾರ ವಿಶ್ವಬ್ಯಾಂಕಿನಿಂದ ಅತಿ ಹೆಚ್ಚು ಸಾಲದ ಪಡೆದ ಪ್ರಮುಖ ದೇಶಗಳಲ್ಲಿ ಭಾರತ ಕೂಡ ಒಂದು.

- ವೈರಲ್ ಚೆಕ್