ಜಾರ್ಖಂಡ್ ಎಕ್ಸಿಟ್ ಪೋಲ್ ಅಚ್ಚರಿ, ಹೀಗಾದ್ರೆ ಮುಂದೇನು?

ಮುಗಿದ ಜಾರ್ಖಂಡ್ ವಿಧಾನಸಭೆ ಚುನಾವಣೆ/ ಕಾಂಗ್ರೆಸ್ ಪಾಳಯಕ್ಕೆ ಮುನ್ನಡೆ ಎಂದ ಸಮೀಕ್ಷೆ/  ಮತ್ತೊಂದು ರಾಜ್ಯ ಬಿಜೆಪಿ ಕೈ ತಪ್ಪುತ್ತಾ?/ ಅಚ್ಚರಿ ಅಂಕಿ ಅಂಶ ನೀಡಿದ ಸಮೀಕ್ಷೆ

Exit polls predicts JMM-Cong-RJD govt in Jharkhand

ನವದೆಹಲಿ(ಡಿ. 20)  ಜಾರ್ಖಂಡ್ ವಿಧಾನಸಭೆ ಚುನಾವಣೆಯ ಐದನೇ ಮತ್ತು ಕೊನೇ ಹಂತದ ಮತದಾನ ಮುಕ್ತಾಯವಾಗಿದ್ದು ಅಚ್ಚರಿ ಮತಗಟ್ಟೆ ಸಮೀಕ್ಷೆ ಬಂದಿದೆ. ಮೈತ್ರಿ ಪಕ್ಷಗಳಾದ ಕಾಂಗ್ರೆಸ್, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಅತಿದೊಡ್ಡ ಮೈತ್ರಿಯಾಗಿ ಹೊರಹೊಮ್ಮಲಿದೆ ಎಂದು ಅನೇಕ ಸಮೀಕ್ಷೆಗಳು ಹೇಳಿವೆ.

ಬಿಜೆಪಿಗೆ ಹಿನ್ನಡೆಯಾಗಲಿದೆ. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 41 ಸ್ಥಾನಗಳ ಅವಶ್ಯಕತೆ ಇದೆ. ಡಿಸೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಒಟ್ಟು 5 ಹಂತಗಳಲ್ಲಿ  ಜಾರ್ಖಂಡ್​​​  ಚುನಾವಣೆ ನಡೆದಿತ್ತು.  ನ.30, ಡಿ.7, ಡಿ.12,  ಡಿ.16 ಮತ್ತು  ಡಿ.20ರಂದು ಮತದಾನ ನಡೆದಿತ್ತು.ಡಿಸೆಂಬರ್ 23ಕ್ಕೆ ಫಲಿತಾಂಶ ಹೊರಬೀಳಲಿದೆ. ಈ ಹಿಂದೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಸ್ಥಾಪನೆ ಮಾಡಿದ್ದರೆ ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ನಡೆದು ಅಂತಿಮವಾಗಿ ಎನ್ಸಿಪಿ-ಶಿವಸೇನೆ ಮತ್ತು ಕಾಂಗ್ರೆಸ್ ದೋಸ್ತಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

ಹಾಗಾದರೆ ಯಾವ ಸಮೀಕ್ಷೆ ಯಾರಿಗ ಎಷ್ಟು ಸ್ಥಾನ ನೀಡಿದೆ. ನೋಡಿಕೊಂಡು ಬರೋಣ

ಐಎಎನ್​ಎಸ್​ ಮತ್ತು ಸಿ-ವೋಟರ್
ಕಾಂಗ್ರೆಸ್​-ಜೆಎಂಎಂ ಮೈತ್ರಿ - 31ರಿಂದ 39
ಬಿಜೆಪಿ - 28ರಿಂದ 36
ಎಜೆಎಸ್​ಯು - 3ರಿಂದ 7
ಜೆವಿಎಂ- 1ರಿಂದ 5

ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ
ಕಾಂಗ್ರೆಸ್​-ಜೆಎಂಎಂ ಮೈತ್ರಿ - 38ರಿಂದ 50
ಬಿಜೆಪಿ - 22ರಿಂದ 32
ಎಜೆಎಸ್​ಯು - 3ರಿಂದ 5
ಜೆವಿಎಂ- 2 ರಿಂದ 4

ಟೈಮ್ಸ್​ ನೌ
ಕಾಂಗ್ರೆಸ್​-ಜೆಎಂಎಂ, ಆರ್​ಜೆಡಿ ಮೈತ್ರಿ - 44
ಬಿಜೆಪಿ - 28
ಎಜೆಎಸ್​ಯು - 0
ಜೆವಿಎಂ- 3
ಇತರ – 6

ಪೋಲ್ ಆಫ್ ಪೋಲ್ಸ್​
ಕಾಂಗ್ರೆಸ್​-ಜೆಎಂಎಂ ಮೈತ್ರಿ - 41
ಬಿಜೆಪಿ - 29
ಎಜೆಎಸ್​ಯು - 3
ಜೆವಿಎಂ- 3
ಇತರೆ- 5

Latest Videos
Follow Us:
Download App:
  • android
  • ios