ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದು ಕೊನೆಯ ಇನ್‌ಸ್ಟಾ ಪೋಸ್ಟ್ ಹಾಕಿದ ಬೆನ್ನಲ್ಲೇ ಸಿದ್ದಿಕಿ ಹತ್ಯೆ!
ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಗೂ 2 ದಿನ ಮೊದಲು ಕೊನೆಯದಾಗಿ ಹಾಕಿದ್ದ ಇನ್‌ಸ್ಟಾಗ್ರಾಂ ಪೋಸ್ಟ್ ಇದೀಗ ಹಲವರ ಕಣ್ಣಾಲಿ ತೇವಗೊಳಿಸಿದೆ. ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದಿದ್ದ ಬಾಬಾ ಸಿದ್ದಿಕಿ ಎರಡೇ ದಿನದಲ್ಲಿ ಹತ್ಯೆಯಾಗಿದ್ದಾರೆ.
ಮುಂಬೈ(ಅ.13) ಮಾಜಿ ಸಚಿವ ಬಾಬಾ ಸಿದ್ದಿಕಿ ಭೀಕರ ಹತ್ಯೆ ದೇಶದ ಭದ್ರತೆ ಹಾಗೂ ಸುರಕ್ಷತೆಗೆ ಸವಾಲೆಸೆಯುತ್ತಿದೆ. ಪುತ್ರ ಬಾಂದ್ರಾದ ಶಾಸಕನ ಕಚೇರಿಯಲ್ಲಿರುವಾಗ ಬಾಬಾ ಸಿದ್ದಿಕಿ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಬಾಬಾ ಸಿದ್ದಿಕಿ ಮಹಾರಾಷ್ಟ್ರ ರಾಜಕಾಕರಣದಲ್ಲಿ ಮಾತ್ರವಲ್ಲ ಬಾಲಿವುಡ್ ಕ್ಷೇತ್ರದಲ್ಲೂ ಸಕ್ರಿಯ ನಾಯಕ. ಹಲವು ಸೆಲೆಬ್ರೆಟಿಗಳಿಗೆ ನೆರವಿನ ಹಸ್ತ ನೀಡಿ ಕರಿಯರ್‌ಗೆ ಹೊಸ ಆಯಾಮ ನೀಡಿದ ಬಾಬಾ ಸಿದ್ದಿಕಿ ಹತ್ಯೆ ಹಲವರಿಗೆ ಆಘಾತ ತಂದಿದೆ. ಬಾಬಾ ಸಿದ್ದಿಕ್ಕಿ ಹತ್ಯೆಗೂ ಎರಡು ದಿನ ಮೊದಲು ಕೊನೆಯದಾಗಿ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿದ್ದರು. ಇದು ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದು ಹಾಕಿದ ಪೋಸ್ಟ್.
ಅಕ್ಟೋಬರ್ 10 ರಂದು ಬಾಬಾ ಸಿದ್ದಿಕಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದಿದ್ದರು. ರತನ್ ಟಾಟಾ ನಿಧನವನ್ನು ಒಂದು ಯುಗದ ಅಂತ್ಯ ಎಂದು ಬರೆದು ರತನ್ ಟಾಟಾ ಫೋಟೋ ಪೋಸ್ಟ್ ಮಾಡಿದ್ದರು. ಇದು ಬಾಬಾ ಸಿದ್ದಿಕಿ ಮಾಡಿದ ಕೊನೆಯ ಇನ್‌ಸ್ಟಾಗ್ರಾಂ ಪೋಸ್ಟ್. ಅಕ್ಟೋಬರ್ 10ಕ್ಕೆ ಕೊನೆ ಪೋಸ್ಟ್ ಮಾಡಿದ್ದ ಸಿದ್ದಿಕಿ ಅಕ್ಟೋಬರ್ 12 ರಾತ್ರಿ 9.30ರ ಸುಮಾರಿಗೆ ಹತ್ಯೆಯಾಗಿದ್ದಾರೆ.
ಸಲ್ಮಾನ್ ಖಾನ್ಗೆ ನೆರವು ನೀಡಿದರೆ ಇದೇ ಗತಿ, ಸಿದ್ದಿಕ್ಕಿ ಹತ್ಯೆ ಬಳಿಕ ಲಾರೆನ್ಸ್ ಗ್ಯಾಂಗ್ ಎಚ್ಚರಿಕೆ!
ಇದೀಗ ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿ ಬಾಬಾ ಸಿದ್ದಿಕಿ ಹಾಕಿದ್ದ ಅದೇ ಪೋಸ್ಟ್‌ಗೆ ಇದೀಗ ಸಿದ್ದಿಕಿ ಅಭಿಮಾನಿಗಳು ಬೆಂಬಲಿಗರು ಒಂ ಶಾಂತಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ರತನ್ ಟಾಟಾಗೆ ನಿಧನಕ್ಕೆ ಮರುಗಿದ್ದ ನಾಯಕ ಇದೀಗ ನಮ್ಮನ್ನು ಅಗಲಿದ್ದಾರೆ. ಸಾಮಾನ್ಯ ಜನರಿಂದ ಹಿಡಿದು ಬಾಲಿವುಡ್ ಸೆಲೆಬ್ರೆಟಿ ವರೆಗೆ ಎಲ್ಲರಿಗೂ ನೆರವು ನೀಡುತ್ತಿದ್ದ ನಾಯಕ ಈ ರೀತಿ ದುರಂತ ಅಂತ್ಯಕಂಡಿದ್ದು ತೀವ್ರ ನೋವುಂಟು ಮಾಡಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ಬಾಬಾ ಸಿದ್ದಿಕಿ ಇನ್‌ಸ್ಟಾಗ್ರಾಂ ಹತ್ಯೆಯಾದ ಅದೇ ದಿನ ಬೆಳಗ್ಗೆ ಟ್ವಿಟರ್ ಮೂಲಕ ದೇಶದ ಸಮಸ್ತ ಜನತೆಗೆ ವಿಜಯ ದಶಮಿ ಹಬ್ಬದ ಶುಭಾಶಯ ತಿಳಿಸಿದ್ದರು. ಟ್ವೀಟ್ ಮೂಲಕ ಶುಭಾಶಯ ಕೋರಿದ್ದ ಬಾಬಾ ಸಿದ್ದಿಕ್ಕಿ ಅದೇ ದಿನ ರಾತ್ರಿ ಹತ್ಯೆಯಾಗಿದ್ದಾರೆ. ಬಾಬಾ ಸಿದ್ದಿಕಿ ಹತ್ಯೆಗೆ ಮಹಾರಾಷ್ಟ್ರ ಸರ್ಕಾರದ ಹದಗೆಟ್ಟ ಕಾನೂನು ಸುವ್ಯವಸ್ಥೆ ಕಾರಣ ಎಂದು ಹಲವರು ಆರೋಪಿಸಿದ್ದಾರೆ.
ಇತ್ತ ಬಾಬಾ ಸಿದ್ದಿಕಿ ಹತ್ಯೆ ಆರೋಪಿಗಳ ಪೈಕಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಮತ್ತೊರ್ವ ಪರಾರಿಯಾಗಿದ್ದಾನೆ. ಈ ಕೃತ್ಯದ ಹೊಣೆಯನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಸದ್ಯ ಪೊಲೀಸ್ ತನಿಖೆ ಪ್ರಾಥಮಿಕ ಹಂತದಲ್ಲಿದೆ. ಹೀಗಾಗಿ ಇದರ ಹಿಂದಿನ ಕೃತ್ಯದ ಕುರತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಮೇಲ್ನೋಟಕ್ಕೆ ಇದು ಲಾರೆನ್ಸ್ ಗ್ಯಾಂಗ್ ನಡೆಸಿದ ಕೃತ್ಯ ಅನ್ನೋದು ಬಹಿರಂಗವಾಗಿದೆ.
ಭೀಕರ ಗುಂಡಿನ ದಾಳಿಯಲ್ಲಿ ಮಾಜಿ ಸಚಿವ ಬಾಬಾ ಸಿದ್ದಿಕಿ ನಿಧನ, ದೇಹ ಹೊಕ್ಕಿತ್ತು 3 ಬುಲೆಟ್!