ತಿರುಪತಿ(ಮಾ.01): ಆಂಧ್ರಪ್ರದೇಶದ ತಿರುಪತಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ, ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ‍್ಯದರ್ಶಿ ರತ್ನಪ್ರಭಾ ಅವರು ಬುಧವಾರ ತಮ್ಮ ಹಾಗೂ ಪತಿಯ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

24.68 ಕೋಟಿ ರು. ಆಸ್ತಿ ಹೊಂದಿರುವುದಾಗಿ ರತ್ನಪ್ರಭಾ ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದು, ಈ ಮೂಲಕ ಚುನಾವಣೆಗೆ ಸ್ಪರ್ಧಿಸುತ್ತಿರುವ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಉಳಿದ ಅಭ್ಯರ್ಥಿಗಳ ಪೈಕಿ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್ಸಿನ ಡಾ.ಎಂ.ಗುರುಮೂರ್ತಿ ಅವರ ಬಳಿ ಅತಿ ಕಡಿಮೆ ಅಂದರೆ 47.25 ಲಕ್ಷ ಆಸ್ತಿ ಇದ್ದರೆ, ತೆಲುಗು ದೇಶಂ ಪಕ್ಷದ ಅಭ್ಯರ್ಥಿ ಪನಬಾಕ ಲಕ್ಷ್ಮೇ ಅವರಲ್ಲಿ 10.23 ಕೋಟಿ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ ಅಭ್ಯರ್ಥಿ ಚಿಂತಾ ಮೋಹನ್‌ ಅವರು ತಮ್ಮ ಕುಟುಂಬದಲ್ಲಿ 2.31 ಕೋಟಿ ರು. ಆಸ್ತಿ ಇರುವುದಾಗಿ ನಾಮಪತ್ರದೊಂದಿಗಿನ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ