ನವ​ದೆ​ಹ​ಲಿ(ಫೆ.27): ಪಶ್ಚಿಮ ಬಂಗಾಳ, ತಮಿ​ಳು​ನಾಡು, ಕೇರಳ ಸೇರಿ​ದಂತೆ ಐದು ರಾಜ್ಯ​ಗಳ ಚುನಾ​ವಣಾ ಕರ್ತ​ವ್ಯಕ್ಕೆ ನಿಯೋ​ಜ​ನೆ​ಯಾದ ಎಲ್ಲಾ ಸಿಬ್ಬಂದಿಗೆ ಕೊರೋನಾ ಲಸಿಕೆ ನೀಡ​ಲಾ​ಗು​ತ್ತದೆ ಎಂದು ಕೇಂದ್ರ ಚುನಾ​ವಣಾ ಆಯೋಗ ಘೋಷಣೆ ಮಾಡಿದೆ.

ದೇಶಾ​ದ್ಯಂತ ಮತ್ತೊಮ್ಮೆ ಕೊರೋನಾ ಸೋಂಕು ಉಬ್ಬ​ರದ ನಡು​ವೆಯೇ ನಡೆ​ಯು​ತ್ತಿ​ರುವ ಐದು ರಾಜ್ಯ​ಗಳ ಚುನಾ​ವ​ಣೆ ವೇಳೆ ಸೋಂಕು ವ್ಯಾಪ​ಕ​ವಾಗಿ ಹಬ್ಬ​ದಂತೆ ಹೆಚ್ಚಿನ ನಿಗಾ ವಹಿ​ಸಲು ಕ್ರಮ ಕೈಗೊ​ಳ್ಳ​ಲಾ​ಗು​ತ್ತದೆ. ಆನ್‌ಲೈನ್‌ನಲ್ಲೇ ನಾಮಪತ್ರ ಹಾಕಲು ಅವಕಾಶ ನೀಡಲಾಗುತ್ತದೆ. ಜನಸಂದಣಿ ತಪ್ಪಿಸಲು ಮತದಾನದ ಅವಧಿ 1 ತಾಸು ವಿಸ್ತರಿಸಲಾಗುತ್ತದೆ ಎಂದು ಆಯೋಗ ಮುಖ್ಯಸ್ಥ ಸುನೀಲ್‌ ಆರೋರಾ ಹೇಳಿದರು.

ಮನೆ-ಮನೆ ಪ್ರಚಾ​ರಕ್ಕೆ ಅಭ್ಯರ್ಥಿ ಸೇರಿ​ದಂತೆ ಐದ​ಕ್ಕಿಂತ ಹೆಚ್ಚು ಮಂದಿ ತೆರ​ಳು​ವಂತಿಲ್ಲ. ಅಲ್ಲದೆ ರೋಡ್‌ ಶೋಗೆ ಐದ​ಕ್ಕಿಂತ ಹೆಚ್ಚು ವಾಹ​ನ​ಗಳ ಬಳ​ಕೆಗೆ ಅವ​ಕಾ​ಶ​ವಿಲ್ಲ ಎಂದು ಅವರು ಹೇಳಿದರು.