*   ಶೇ.20ರಷ್ಟು ಪ್ರಶ್ನೆಗೆ ಉತ್ತರ ನೀಡದೇ ತಪ್ಪಿಸಿಕೊಂಡ ಕಾಂಗ್ರೆಸ್‌ ನಾಯಕ*  ನನ್ನ ತಾಳ್ಮೆ ಕಂಡು ಇಡಿ ಅಧಿಕಾರಿಗಳೇ ದಂಗಾಗಿದ್ದರು ಎಂದಿದ್ದ ರಾಹುಲ್‌*  ಎಲ್ಲಾ ಹೇಳಿಕೆಗಳನ್ನು ಸ್ಪಷ್ಟವಾಗಿ ಅಲ್ಲಗಳೆದ ಇಡಿ ಮೂಲಗಳು 

ನವದೆಹಲಿ(ಜೂ.25): ನ್ಯಾಷನಲ್‌ ಹೆರಾಲ್ಡ್‌ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವಾಗ ನನ್ನ ತಾಳ್ಮೆ ಕಂಡು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳೇ ದಂಗಾಗಿದ್ದರು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಳೆದ ಬುಧವಾರ ನೀಡಿದ್ದ ಹೇಳಿಕೆಯನ್ನು ಇಡಿ ಮೂಲಗಳು ಸ್ಪಷ್ಟವಾಗಿ ಅಲ್ಲಗಳೆದಿವೆ. ವಾಸ್ತವವಾಗಿ ಅಧಿಕಾರಿಗಳು ಕೇಳಿದ ಶೇ.20ರಷ್ಟು ಪ್ರಶ್ನೆಗೆ ರಾಹುಲ್‌ ‘ನಾನು ತುಂಬಾ ದಣಿದಿದ್ದೇನೆ’ ಎಂದು ನೆಪವೊಡ್ಡಿ ಉತ್ತರ ನೀಡುವುದರಿಂದ ತಪ್ಪಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ‘ಇಡಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದ್ದೇನೆ. ದಣಿಯದೇ ತಾಳ್ಮೆ ಉತ್ತರಿಸಿದ್ದಕ್ಕೆ ಅಧಿಕಾರಿಗಳು ದಂಗಾಗಿ ನಿಮ್ಮ ಶಕ್ತಿಯ ಗುಟ್ಟೇನು? ಎಂದು ಪ್ರಶ್ನಿಸಿದ್ದಾರೆ’ ಎಂದು ಹೇಳಿಕೆ ನೀಡಿದ್ದರು. ಜೊತೆಗೆ ‘ಕಾಂಗ್ರೆಸ್‌ ಕಾರ್ಯಕರ್ತನಾಗಿ ತರಬೇತಿ ಪಡೆದಿದ್ದು ಹಾಗೂ ವಿಪಷ್ಯನ ಧ್ಯಾನ ತಮಗೆ ಸಮಾಧಾನದಿಂದ ಉತ್ತರ ನೀಡಲು ಸಹಾಯ ಮಾಡಿತು’ ಎಂದು ರಾಹುಲ್‌ ಹೇಳಿಕೊಂಡಿದ್ದರು.

National Herald Case ವಿಚಾರಣೆಗೆ ಹಾಜರಾಗಲು ಸೋನಿಯಾ ಗಾಂಧಿಗೆ ದಿನಾಂಕ ಸೂಚಿಸಿದ ಇಡಿ!

ಆದರೆ ಈ ಎಲ್ಲಾ ಹೇಳಿಕೆಗಳನ್ನು ಇಡಿ ಮೂಲಗಳು ಸ್ಪಷ್ಟವಾಗಿ ಅಲ್ಲಗಳೆದಿದ್ದು, ‘5 ದಿನ ವಿಚಾರಣೆಗೆ ಹಾಜರಾಗಿದ್ದ ರಾಹುಲ್‌ ಗಾಂಧಿ ಸುಮಾರು ಶೇ.20ರಷ್ಟು ಪ್ರಶ್ನೆಗಳಿಗೆ ಉತ್ತರ ನೀಡುವುದರಿಂದ ತಪ್ಪಿಸಿಕೊಂಡಿದ್ದು, ನನಗೆ ತುಂಬಾ ದಣಿವಾದಂತೆ ಅನ್ನಿಸುತ್ತಿದೆ ಎಂದು ಹೇಳಿ ಸುಮ್ಮನಾಗುತ್ತಿದ್ದರು’ ಎಂದು ತಿಳಿಸಿವೆ.