ಭೋಪಾಲ್‌(mA.: ಕೊರೋನಾ ತಡೆಯುವ ಸಲುವಾಗಿ ರಾಜ್ಯದಲ್ಲಿ ಸೆಕ್ಷನ್‌ 144ರ ಅನ್ವಯ ನಿರ್ಬಂಧಕಾಜ್ಞೆ ವಿಧಿಸಿದ್ದರೂ ಮನೆಯಿಂದ ಹೊರ ಬಂದವರಿಗೆ ಮಧ್ಯಪ್ರದೇಶ ಪೊಲೀಸರು ವಿನೂತನ ಶಿಕ್ಷೆ ವಿಧಿಸಿದ್ದಾರೆ.

‘ನಾನು ಸಮಾಜದ ಶತ್ರು, ನಾನು ಮನೆಯೊಳಗೆ ಇರುವುದಿಲ್ಲ’ ಎನ್ನುವ ಬರಹವುರುವ ಪೋಸ್ಟರ್‌ ಅನ್ನು ಕೈಯಲ್ಲಿ ಹಿಡಿಸಿ ಫೋಟೋ ತೆಗೆಸುತ್ತಿದ್ದಾರೆ. ಈ ಕ್ರಮದಿಂದಾದರೂ ಜನ ಮುಜುಗರಕ್ಕೊಳಗಾಗಿ ಮನೆಯಿಂದ ಹೊರಗೆ ಬಾರದಿರಲಿ ಎನ್ನುವುದು ಪೊಲೀಸರ ಆಶಯ.

ಸದ್ಯ ಭಾರತದಲ್ಲಿ ಕೊರೋನಾ ರುದ್ರ ನರ್ತನ ಆರಂಭಿಸಿದ್ದು, ಒಂಭತ್ತು ಮಂದಿಯನ್ನು ಬಲಿ ಪಡೆದಿದೆ. ನಾಲ್ನೂರಕ್ಕೂ ಅಧಿಕ ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಸರ್ಕಾರಗಳು ಇದರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸುತ್ತಿವೆ.