Asianet Suvarna News Asianet Suvarna News

ಗುಂಡು, ಬಾಂಬ್‌ಗಳಿಂದಲೇ ಸುದ್ದಿಯಾಗುತ್ತಿದ್ದ ಶ್ರೀನಗರದಲ್ಲಿ ನಾಳೆ ಎಮ್ಮಾರ್‌ ಮಾಲ್‌ಗೆ ಶಿಲಾನ್ಯಾಸ!

ನಾಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಲ್ ಆಫ್ ಶ್ರೀನಗರಕ್ಕೆ ಶಂಕುಸ್ಥಾಪನೆ ನಡೆಯಲಿದೆ. ಯುಎಇ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆ ಎಮಾರ್ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್‌ ಮನೋಜ್‌ ಸಿನ್ಹಾ ಅವರ ಸಮ್ಮುಖದಲ್ಲಿ ಮಾಲ್‌ಗೆ ಶಂಕುಸ್ಥಾಪನೆ ಮಾಡಲಿದೆ. ಬಳಿಕ ಯುಎಇ ಮತ್ತು ಭಾರತ ಹೂಡಿಕೆ ಅಧಿವೇಶನ ನಡೆಯಲಿದೆ.
 

Emaar Mall in Srinagar Foundation stone laying tomorrow Meeting on UAE investments san
Author
First Published Mar 18, 2023, 3:09 PM IST

ನವದೆಹಲಿ (ಮಾ.18): ಬಂದೂಕು, ಮದ್ದುಗುಂಡುಗಳು, ಬಾಂಬ್‌ ದಾಳಿ, ಸೈನಿಕರ ಮೇಲೆ ಹಲ್ಲೆ, ಭಯೋತ್ಪಾದಕರ ಹತ್ಯೆ ಇಂಥ ಕಾರಣಗಳಿಂದಾಗಿಯೇ ಸುದ್ದಿಯಾಗುತ್ತಿದ್ದ ಜಮ್ಮು ಕಾಶ್ಮೀರದ ಶ್ರೀನಗರವೀಗ ಅಭಿವೃದ್ಧಿ ಕಾರ್ಯಗಳಿಂದಾಗಿ ಸುದ್ದಿಯಲ್ಲಿದೆ. ಇತ್ತೀಚೆಗೆ ಶ್ರೀನಗರದಲ್ಲಿ ಹಲವು ವರ್ಷಗಳ ಬಳಿಕ ಸಿನಿಮಾ ಥಿಯೇಟರ್‌ನಲ್ಲಿ ಚಿತ್ರ ಪ್ರದರ್ಶನ ಕಂಡಿತ್ತು. ಈಗ ಶ್ರೀನಗರದಲ್ಲಿ ಹೊಸ ಮಾಲ್‌ ಸಿದ್ಧವಾಗೋದು ಖಚಿತವಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಹೂಡಿಕೆಗಳು ವ್ಯಾಪಕವಾಗಿ ಬರುತ್ತಿವೆ. ಕಾಶ್ಮೀರ ವಿದೇಶಿ ಬಂಡವಾಳವನ್ನು ಆಕರ್ಷಣೆ ಮಾಡುತ್ತಿದೆ. ಇವುಗಳಲ್ಲಿ ಹೆಚ್ಚಿನ ಹೂಡಿಕೆಗಳು ಮಧ್ಯ ಏಷ್ಯಾದ ದೇಶಗಳಿಂದ ಬರುತ್ತಿವೆ. ಯುಎಇ ಮೂಲದ ರಿಯಲ್ ಎಸ್ಟೇಟ್ ದೈತ್ಯ ಎಮಾರ್ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಬೃಹತ್ ಶಾಪಿಂಗ್ ಮಾಲ್ ಅನ್ನು ನಿರ್ಮಾಣ ಮಾಡಲು ಸಿದ್ಧವಾಗಿದೆ. ಎಮಾರ್ ಕಂಪನಿಯು ಕಳೆದ ಒಂದು ಅಥವಾ ಎರಡು ವರ್ಷಗಳಿಂದ ಈ ಬೃಹತ್ ಮಾಲ್‌ಗಾಗಿ ಯೋಜನೆ ರೂಪಿಸುತ್ತಿತ್ತು. ನಾಳೆ (ಮಾರ್ಚ್ 19) 'ಮಾಲ್ ಆಫ್ ಶ್ರೀನಗರ'ದ ಶಂಕುಸ್ಥಾಪನೆ ನಡೆಯಲಿದೆ. ಈ ಮಾಲ್‌ನಲ್ಲಿ ಹೈಪರ್‌ಮಾರ್ಕೆಟ್ ಮತ್ತು ಇತರ ಮಳಿಗೆಗಳನ್ನು ಸ್ಥಾಪಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ. ಶ್ರೀನಗರದ ಈ ಮಾಲ್‌ನಲ್ಲಿ ಅಬುಧಾಬಿಯ ಲುಲು ಗ್ರೂಪ್ ಹೈಪರ್‌ಮಾರ್ಕೆಟ್ ಕೂಡ ಇರಲಿದೆ ಎಂದು ವರದಿಯಾಗಿದೆ.

Bharat Jodo Yatra: 136 ದಿನ, 3570 ಕಿಲೋಮೀಟರ್‌ ದೇಶದ ಗಮನಸೆಳೆದ ರಾಹುಲ್‌ ಗಾಂಧಿಯ ಚಿತ್ರಗಳು..!

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್‌ ಮನೋಜ್‌ ಸಿನ್ಹಾ ಅವರ ಸಮ್ಮುಖದಲ್ಲಿ ಎಮಾರ್ ಭಾನುವಾರ  'ಮಾಲ್ ಆಫ್ ಶ್ರೀನಗರ'ಕ್ಕೆ ಶಂಕುಸ್ಥಾಪನೆ ಮಡಲಿದೆ. ಬಳಿಕ ಯುಎಇ ಮತ್ತು ಭಾರತೀಯ ಹೂಡಿಕೆ ಕುರಿತು ಸಭೆ ನಡೆಯಲಿದೆ. ಸಮ್ಮೇಳನವನ್ನು ಯುಎಇ ಇಂಡಿಯಾ ಬಿಸಿನೆಸ್ ಕೌನ್ಸಿಲ್ (ಯುಐಬಿಸಿ) ಮತ್ತು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಜಂಟಿಯಾಗಿ ಆಯೋಜಿಸಿದೆ.

 

Inspiration Story ಕಾಶ್ಮೀರದಲ್ಲಿ ಕೆಫೆ ಆರಂಭಿಸಿ ಯಶಸ್ವಿಯಾದ ಮಹಿಳೆ

ನಾಳೆ ಬೆಳಗ್ಗೆ 10.30ಕ್ಕೆ ಮಾಲ್ ಆಫ್ ಶ್ರೀನಗರಕ್ಕೆ ಎಮಾರ್ ಶಂಕುಸ್ಥಾಪನೆ ನೆರವೇರಿಸಲಿದೆ. ಶ್ರೀನಗರದ ಸೆಂಪೋರಾದಲ್ಲಿ ಕಾರ್ಯಕ್ರಮ ನಡೆಯಲಿದೆ. ಅದರ ನಂತರ, ಯುಎಇ ಮತ್ತು ಭಾರತ ಹೂಡಿಕೆ ಅಧಿವೇಶನವು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ಇದರಲ್ಲಿ ಭಾಗವಹಿಸಲಿದ್ದಾರೆ. ಯುಎಇ ಮತ್ತು ಜಮ್ಮು ಮತ್ತು ಕಾಶ್ಮೀರ ನಡುವಿನ ಹೂಡಿಕೆ ಸಂಬಂಧಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ.
 

Follow Us:
Download App:
  • android
  • ios