ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಕೆರೆ-ಕುಂಟೆ, ನದಿಯನ್ನು ಅವಲಂಬಿಸಿರುತ್ತವೆ ಇಲ್ಲೊಂದು ಆನೆ ಅಪರೂಪವೆಂಬಂತೆ ಬೋರ್‌ವೆಲ್‌ ಹೊಡೆದುಕೊಂಡು ನೀರು ಕುಡಿದಿದೆ

ಬೆಂಗಳೂರು (ಸೆ.08):  ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಕೆರೆ-ಕುಂಟೆ, ನದಿಯನ್ನು ಅವಲಂಬಿಸಿರುತ್ತವೆ. ಆದರೆ ಇಲ್ಲೊಂದು ಆನೆ ಅಪರೂಪವೆಂಬಂತೆ ಬೋರ್‌ವೆಲ್‌ ಹೊಡೆದುಕೊಂಡು ನೀರು ಕುಡಿದಿದೆ!

Scroll to load tweet…

 ತನಗೆ ಬೇಕಿರುವಷ್ಟುನೀರು ಬರುವವರೆಗೆ ಬೋರ್‌ವೆಲ್‌ ಹೊಡೆಯುವ ಆನೆಯು, ಬಳಿಕ ಅದೇ ನೀರನ್ನು ಕುಡಿದ ವಿಡಿಯೋವನ್ನು ಕೇಂದ್ರ ಜಲಶಕ್ತಿ ಇಲಾಖೆ ತನ್ನ ಅಧಿಕೃತ ಟ್ವೀಟರ್‌ ಖಾತೆಯಿಂದ ಹಂಚಿಕೊಂಡಿದ್ದು, ಪೋಸ್ಟ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

ಆದರೆ ಯಾವ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂಬ ಬಗ್ಗೆ ಗೊತ್ತಾಗಿಲ್ಲ